ವೇಮನರ ಜಯಂತ್ಯುತ್ಸವ

ಹಾನಗಲ್ಲ

       ಭೋಗದಿಂದ ಯೋಗ ಸಾಧನೆಗೆ ಬಂದ ವೇಮನರು, ಮನುಷ್ಯತ್ವದಿಂದ ದೈವತ್ವವನ್ನು ಪಡೆದ ಮಹಾನ್ ಸಾಧಕರು. ದೇಶದ ವಿವಿಧ ರಾಜ್ಯಗಳಲ್ಲಿ ಇವರ ವಚನ ಸಾಹಿತ್ಯ ಸಾಮಾಜಿಕ ಮೌಢ್ಯಗಳನ್ನು ತೊಡೆದುಹಾಕುವಲ್ಲಿ ಯಶಸ್ವಿಯಾಗಿವೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.

       ಶನಿವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ `ವೇಮನರ ಜಯಂತ್ಯುತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೇಮನರು ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂಚರಿಸಿ ತಮ್ಮ ವಚನಗಳ ಸಂದೇಶವನ್ನು ಪಸರಿಸಿದ್ದಾರೆ. 14ನೇ ಶತಮಾನದಲ್ಲಿ ರೆಡ್ಡಿ ಸಮುದಾಯದಲ್ಲಿ ಜನಿಸಿ, ಭಕ್ತಿ, ಜ್ಞಾನ, ಕರ್ಮ, ಮೌಲ್ಯಗಳ ಕುರಿತು ಪ್ರತಿಪಾದಿಸಿದ್ದಾರೆ. ರಾಮ, ಕೃಷ್ಣ, ಬುದ್ಧ, ಬಸವ ಮುಂತಾದವರಂತೆ ವೇಮನರೂ ಶ್ರೇಷ್ಠ ದಾರ್ಶನಿಕರಲ್ಲೊಬ್ಬರಾಗಿದ್ದಾರೆ. ಅಂಥ ಮೇರುಪಂಕ್ತಿಯಲ್ಲಿ ನಿಲ್ಲುವ ವೇಮನರು `ಅಧರ್ಮ ಹೆಚ್ಚಾದಾಗ ಜನರು ಮತ್ತೆ ಧರ್ಮ ಮಾರ್ಗದಲ್ಲಿ ನಡೆಯುವಂತೆ ಮಾಡಲು ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವುದೇ ಜ್ಞಾನಿಗಳ ಕಾರ್ಯ’ ಎಂದು ಸಾರಿದ್ದಾರೆ ಎಂದರು.

         ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ.ಗಂಗಪ್ಪ, ಸಹಾಯಕ ಕೃಷಿ ನಿರ್ದೇಶಕ ಸಂಗಮೇಶ ಹ್ಕಲಪ್ಪನವರ, ಉಪತಹಶೀಲ್ದಾರ್ ಎಸ್.ಆರ್.ಸಿದ್ದನಗೌಡ್ರ, ಶಾಂತಕುಮಾರ ಯತ್ನಳ್ಳಿ, ಕಂದಾಯ ಅಧಿಕಾರಿ ಮಹೇಶ ತ್ರಿಕಾಣಿ, ಗ್ರಾಮಲೆಕ್ಕಾಧಿಕಾರಿ ಎಸ್.ಎಸ್.ಕದಂ, ಎಂ.ಎಲ್.ಹಿರೇಬಿದರಿ. ರಾಘವೇಂದ್ರ ಜೋಶಿ, ಸಿದ್ದು ಶಿರಶ್ಯಾಡ, ಸುನಿತಾ ಸುಳದಾಳಕರ, ಪಾರ್ವತಿ ಹೊಟ್ಟೆಗೌಡ್ರ, ಆಶಾ ತಡವಲದ್, ವೀಣಾ ಕಿವುಡೇರ್ ಇತರರು ಪಾಲ್ಗೊಂಡಿದ್ದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link