ಬೆಂಗಳೂರು
ರಸ್ತೆಯಲ್ಲಿ ನೀರು ಹಾಕಿದ್ದ ಕ್ಷುಲಕ ಕಾರಣಕ್ಕೆ ಉಂಟಾಗ ಜಗಳ ಅಂಗಡಿ ಮಾಲೀಕನ ಕೊಲೆಯಾಗಿ ಸಾಫ್ಟ್‍ವೇರ್ ಇಂಜಿನಿಯರ್ ಸೇರಿ ಮೂವರು ಗಾಯಗೊಂಡಿರುವ ದುರ್ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ರಸ್ತೆಗೆ ನೀರು ಹಾಕಿದ್ದರಿಂದ ಬೈಕ್‍ನಿಂದ ಬಿದ್ದಿದ್ದೇನೆ ಎಂದು ರೊಚ್ಚಿಗೆದ್ದ ಸಾಫ್ಟ್‍ವೇರ್ ಇಂಜಿನಿಯರೊಬ್ಬ ಜಗಳ ತೆಗೆದು ಜೆಸಿನಗರದ ಪೈಪ್‍ಲೇನ್‍ನ ಅಂಗಡಿ ಮಾಲೀಕ ಮಂಜುನಾಥ್(42)ಕೊಲೆ ಮಾಡಿದರೆ ಅವರ ಪುತ್ರರಿಂದ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ತಾನು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯೊಂಡಿರುವ ರಾಜಾಜಿನಗರದ ಸಾಫ್ಟ್‍ವೇರ್ ಇಂಜಿನಿಯರ್ ಆಕಾಶ್ ತಲೆಗೆ ರಾಡ್‍ನಿಂದ ಪೃಷ್ಠದ ಎರಡು ಕಡೆ ಚಾಕು ಇರಿತಕ್ಕೊಳಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥಿತಿ ಗಂಭೀರವಾಗಿದೆ.
ದುರ್ಘಟನೆಯಲ್ಲಿ ಕೊಲೆಯಾದ ಮಂಜುನಾಥ್ ಅವರ ಪುತ್ರ ಮನೋಜ್ ಕೂಡ ಚಾಕು ಇರಿತಕ್ಕೊಳಗಾದರೆ ಮತ್ತೊಬ್ಬ ಪುತ್ರನಿಗೂ ಸಣ್ಣಪುಟ್ಟ ಗಾಯಗಳಾಗಿವೆ ಮಾರುತ್‍ಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್ ಶನಿವಾರ ರಾತ್ರಿ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದು ಭಾನುವಾರ ಬೆಳಿಗ್ಗೆ 5.30ರ ವೇಳೆ ರಾಜಾಜಿನಗರದ ಮನೆಗೆ ಬುಲೆಟ್ ಬೈಕ್‍ನಲ್ಲಿ ಬರುತ್ತಿದ್ದಾಗ ಮಾರ್ಗ ಮಧ್ಯೆ ಜೆಸಿನಗರದ ಪೈಪ್‍ಲೇನ್‍ನ ಬಳಿ ಸಾಯಿ ಕಾಂಡಿಮೆಂಟ್ಸ್ ಅಂಗಡಿ ಬಾಗಿಲು ತೆಗೆದಿದ್ದ ಮಂಜುನಾಥ್ ಅಂಗಡಿ ಮುಂಭಾಗ ನೀರು ಹಾಕಿದ್ದು ಬೈಕ್‍ನಿಂದ ಜಾರಿ ಅಂಗಡಿ ಮುಂಭಾಗವೇ ಕೆಳಗೆ ಬಿದ್ದಿದ್ದಾನೆ.
ಸಾವರಿಸಿಕೊಂಡು ಎದ್ದ ನೀವು ನೀರು ಅಂಗಡಿ ಮುಂಭಾಗ ನೀರು ಹಾಕಿದ್ದರಿಂದ ನಾನು ಬಿದ್ದೆ ಎಂದು ಆಕಾಶ್ ಅಂಗಡಿ ಮಾಲೀಕ ಮಂಜುನಾಥ್ ಜೊತೆ ಮಾತಿಗೆ ಮಾತು ಬೆಳೆದು ಉಂಟಾದ ಜಗಳ ಜೋರಾಗಿದೆ.ಜಗಳದಿಂದ ಆಕ್ರೋಶಗೊಂಡ ಆಕಾಶ್ ರಾಡ್ ನಿಂದ ಹಲ್ಲೆಗೆ ಮುಂದಾಗಿದ್ದಾನೆ ಜಗಳ ಕೇಳಿ ಬಂದ ಮಂಜುನಾಥ್ ಪತ್ರ ಮನೋಜ್ ಪತ್ನಿ ಗೌರಮ್ಮ ಅವರು ಜಗಳಕ್ಕೆ ನಿಂತಿದ್ದಾರೆ.
ಈ ವೇಳೆ ರೊಚ್ಚಿಗೆದ್ದ ಆಕಾಶ್ ಮಂಜುನಾಥ್ ಅವರ ಎದೆಗೆ ಚಾಕುವಿನಿಂದ ಇರಿದಿದ್ದು ಆಕ್ರೋಶಗೊಂಡ ಮನೋಜ್ ಚಾಕುವಿನಿಂದ ಆಕಾಶ್ ಪೃಷ್ಠದ ಎರಡು ಕಡೆ ಇರಿದು ತಲೆಗೆ ರಾಡ್‍ನಿಂದ ಹೊಡೆದಿದ್ದಾನೆ.ಸ್ಥಳದಲ್ಲಿಯೇ ಆಕಾಶ್ ಕುಸಿದುಬಿದ್ದಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮನೋಜ್ ಕೂಡ ಚಾಕು ಇರಿತಕ್ಕೊಳಗಾಗಿದ್ದಾನೆ.
ಮಂಜುನಾಥ್ ಅವರ ಎದೆಯ ಆಳಕ್ಕೆ ಚಾಕು ಇಳಿದಿದ್ದರಿಂದ ಸ್ಥಳದಲ್ಲಿಯೇ ಕುಸಿದು ರಕ್ತದ ಮಡುವಿನಲ್ಲಿ ಬಿದ್ದಿದ್ದು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಚಾಕುವನ್ನು ಆಕಾಶ್ ತಂದಿದ್ದ ಎಂದು ಮಂಜುನಾಥ್ ಕಡೆಯವರು ಹೇಳಿದರೆ ಮನೋಜ್ ಚಾಕು ತಂದಿದ್ದ ಎಂದು ಆಕಾಶ್ ಹೇಳುತ್ತಿದ್ದಾರೆ.ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಚೇತನ್‍ಸಿಂಗ್ ರಾತೋರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ