ತಿಪಟೂರು :
ಇಂದು ಬೆಳಂಬೆಳಗ್ಗೆ ಸಾರ್ವಜನಿಕ ಆಸ್ಪತ್ರೆಯ ಸುಮಾರು 30 ಕ್ಕೂ ಹೆಚ್ಚು ನೌಕರರು ಧೀಡಿರನೆ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ಜರುಗಿತು.
ಎಂದಿನಂತೆ ಕರ್ತವ್ಯಕಕೆ ಆಗಿಮಿಸಿದ ಗುತ್ತಿಗೆ ಆಧಾರಿತ ಡಿ.ಗ್ರೂಪ್ ನಕರರು ನಮಗೆ ಕಳೆದ 3 ತಿಂಗಳಿಂದಲು ವೇತನವನ್ನು ನೀಡಿಲ್ಲ ವೇತನಕೊಡುವವರೆಗೂ ನಾವು ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಜೊತೆಗೆ ಈಗಿರುವ ಡಿಟೆಕ್ಟ್‍ವೆಲ್ ಕಂಪನಿಯ ಟೆಂಡರ್ ಅವಧಿಯು ಇದೇ ತಿಂಗಳಲ್ಲಿ ಮುಗಿಯಲಿದ್ದು ನಾವು ವೇತನವನ್ನು ಇಲ್ಲದೇ ಖಾಲಿಹೊಟ್ಟೆಯಲ್ಲಿ ಸಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ನಾವು ಬೇರೆ ದಾರಿಕಾಣದೇ ಪ್ರತಿಭಟನೆಯನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ಪ್ರತಿಭಟನಾ ನಿರತ ನೌಕರಳಾದ ಧರ್ಮಾವತಿ ತಿಳಿಸುವಂತೆ ನಾವು ಕಳೆದ 3 ತಿಂಗಳ ಹಿಂದ ಎಇದೇ ರೀತಿ ಪ್ರತಿಭಟನೆ ಮಾಡಿದಾಗ ನಮಗೆ ವೇತನವನ್ನು ನೀಡಿದ್ದು ಆದದಾನಂತರ ಇದುವರೆಗೂ ನಮಗೆ ವೇತನವನ್ನು ಕೊಟ್ಟಿರುವುದಿಲ್ಲ ನಮಗೆ ಬೇರೆ ಜೀವನಾಧಾರ ಕೆಲಸವಿಲ್ಲದೇ ಇದನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದು ಊಟವಿಲ್ಲದ ಪರಿಸ್ಥಿಯಲ್ಲಿದ್ದು ಮಕ್ಕಳನ್ನು ನೋಡಲಾಗದೆ ಮನೆಯಲ್ಲಿದ್ದ ವಸ್ತುಗಳನ್ನು ಅಡವಿಟ್ಟು ಮಕ್ಕಳಿಗೆ ಊಟವನ್ನು ಕೊಡಿಸಿ ಶಾಲೆಗೆ ಕಳುಹಿಸುತ್ತಿದ್ದೇವೆ ಇದರ ಬಗ್ಗೆ ಗುತ್ತಿಗೆದಾರರನ್ನು ಕೇಳಿದರೆ ನಮಗೂ ಸರ್ಕಾರದಿಂದ ಹಣ ಬಂದಿಲ್ಲ ನಾವೆಲ್ಲಿ ನಿಮಗೆ ಹಣಕೊಡುವುದು ನಿಗೆ ಬೇಕಾದರೆ ಕೆಲಸಮಾಡಿ ಇಲ್ಲದಿದ್ದರೆ ಕೆಲಸಬಿಟ್ಟುಹೋಗಿ ಎಂದು ಬೇಜವಾಬ್ದಾರಿ ಉತ್ತರವನ್ನು ನೀಡುತ್ತಾರೆ ಎಂದು ತಮ್ಮ ಅಳುತ್ತಲೇ ತಿಳಿಸಿದರು.
ಪ್ರತಿಭಟನೆಯಬಗ್ಗೆ ಆಡಳಿತ ವೈದ್ಯಾಧಿಕಾರಿ ಈಶ್ವರಪ್ಪರನ್ನು ವಿಚಾರಿಸಿದಾಗ ಇದರ ಬಗ್ಗೆ ನಾನು ಈಗಾಗಲೇ ಮೇಲಧಿಕಾರಿಗಳ ಹತ್ತಿರ ಮಾತನಾಡಿದ್ದು ಇನ್ನೆರಡು ದಿನಗಳಲ್ಲಿ ವೇತನಮಾಡಿಕೊಡುತ್ತೇವೆ ಎಂದು ತಿಳಿಸಿದ ಅವರು ಟೆಂಡರ್‍ದಾರರ ಅವಧಿ ಮುಗಿದರು ನಾವು ವೇತನವನ್ನು ನೀಡುತ್ತೇವೆ ಅವರ ವೇತನವೆಲ್ಲೂ ಹೋಗುವುದಿಲ್ಲ ಟೆಂಡರ್ ಕೊನೆಗೊಂಡ ನಂತರ ನೂತನವಾಗಿ ತಾಲ್ಲೂಕು ಮಟ್ಟದಲ್ಲಿ ಟೆಂಡರ್ ಕೊಡುವುದರಿಂದ ಈ ಸಮಸ್ಯೆ ಬಗೆಯರಿಯುತ್ತದೆಂದು ತಿಳಿಸಿದರು
ಮದ್ಯಾಹ್ನ 12ರ ವರೆಗೂ ಕೆಲಸನಿರ್ವಹಿಸಿದೆ ಪ್ರತಿಭಟನೆಯನ್ನು ಮುಂದುವರೆಸಿದ ಪ್ರತಿಭಟನಾಕಾರರು ನಂತರ ತಾಲ್ಲೂಕು ಕಛೇರಿಗೆ ತೆರಳಿ ದಂಡಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.