ಕೊಟ್ಟೂರು
ಪಟ್ಟಣದ ಸರ್ಕಾರಿ ಆಸ್ಪತ್ರೆ ಭ್ರಷ್ಟಾಚಾರ ಕುರಿತು ಬುಧವಾರವೂ ತಹಶೀಲ್ದಾರ ಅನಿಲ್ ಕುಮಾರ್ ತನಿಖೆ ಮುಂದುವರಿಸಿದರು.ಆಸ್ಪತ್ರೆ ಸಿಬ್ಬಂದಿಗೆ ಎರಡು ಸಾವಿರ ರು. ಕೊಟ್ಟು ಮಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ ಪಟ್ಟಣ ನಿವಾಸಿ ನಾಗರತ್ನ ಕಣ್ಣೀರು ಸುರಿಸುತ್ತ ಅಂದು ನಡೆದು ನೋವಿನ ಘಟನೆಯನ್ನು ವಿವರಿಸಿದರು.
ನನ್ನ ಮಗಳ ಹೊಟ್ಟೆ ತೊಳೆದು. ಅಪರೇಷನ್ ಮಾಡಲು ಒಳಗೆ ಕರೆದುಕೊಂಡು ಹೋದ ಕೆಲ ನಿಮಿಷಗಳಲ್ಲಿ ನನ್ನ ಮಗಳು ಅಳುತ್ತ ಹೊರಗೆ ಬಂದ್ಲು.ಯಾಕೆ ಅಂತ ಕೇಳಿದರೆ, ಎರಡು ಸಾವಿರ ರು. ಕೊಟ್ಟರೆ ಮಾತ್ರ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುತ್ತಾರಂತೆ ಇಲ್ಲಾಂದ್ರೆ. ಇಲ್ಲವೆಂದು ಹೊರಗಡೆ ಕಳುಹಿಸಿದರು.
ನಾನು ಕೂಲಿಮಾಡಿ ಬದುಕಬೇಕು. ಎಲ್ಲಿಂದ ಹಣ ತರಲಿ ಎಂದು ತಹಶೀಲ್ದಾರ ಮುಂದೆ ಕಣ್ಣೀರು ಹಾಕುತ್ತಿದ್ದಾಗ, ತಹಶೀಲ್ದಾರ ಅನಿಲ್ ಕುಮಾರ್ ಸಮಧಾನ ಪಡಿಸಿದರು.ಪಕ್ಕದ ಬೆಡ್‍ನವರ ಹತ್ತಿರ ಎರಡು ಸಾವಿರ ರು. ಸಾಲ ಪಡೆದು ರೊಕ್ಕ ಕೊಟ್ಟ ಮೇಲೆ ಅಪರೇಷನ್ ಮಾಡಿದ್ದನ್ನು ಹಾಗೂ ಯಾರಿಗೆ ಹಣ ಕೊಟ್ಟೆ ಎಂಬ ವಿಷಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.ಈ ದಿನವೇ ನಾಗರತ್ನ ಅವರ ಹೇಳಿಕೆಯನ್ನು ಹೊಸಪೇಟೆ ಸಹಾಯಕ ಆಯುಕ್ತರಿಗೆ ಕಳುಹಿಸುವುದಾಗಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
