ಮುಂಡಗೋಡ
ಯಲ್ಲಾಪುರದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮನ್ನು ತಾವೇ ಮಾರಾಟ ಮಾಡಿಕೊಂಡಿದ್ದಾರೆ.ಪಕ್ಷಕ್ಕೆ ದ್ರೋಹ ಮಾಡಿ ಭಾರತೀಯ ಜನತಾ ಪಕ್ಷದ ಕದ ತಟ್ಟುತಿದ್ದಾರೆ.ಅವರಿಗೆ ಪಾಠ ಕಲಿಸ ಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ ದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ದಲ್ಲಿ ಮಾತ ನಾಡಿದ ಅವರು,ಶಿವರಾಮ್ ಹೆಬ್ಬಾರ್ ಎಷ್ಟೇ ನಾಟಕವಾಡಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಆಗೇ ಆಗುತ್ತಾರೆ.ಆದರೆ ಯಡಿಯೂರಪ್ಪ ಮಾತ್ರ ನಮಗೆ ಅವರಿಗೆ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಬಿಜೆಪಿಗೆ ಸತ್ಯ ಹೇಳಿ ಗೊತ್ತಿಲ್ಲ,ಸುಳ್ಳೇ ಬಿಜೆಪಿಯ ಮನೆದೇವರು ಎಂದು ಸಿದ್ದರಾಮಯ್ಯ ಆರೋಪಿಸಿದರು.
ಈಗ ಎಲ್ಲ ಅನರ್ಹ ಶಾಸಕರು ನಮ್ಮ ಮೇಲೆ ಮುಗಿ ಬಿದ್ದಿ ದ್ದಾರೆ.ಅನರ್ಹರನ್ನು ಮುಂಬೈನಲ್ಲಿ ಹೋಟೆ ಲಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದ್ದವರು ಅಮಿತ್ ಶಾ ಎಂದು ಯಡಿಯೂರಪ್ಪ ಹೇಳಿದ್ದಕ್ಕೆ, ಅಮಿತ್ ಶಾ ತಮ್ಮ ಹೆಸರನ್ನು ಹೇಳಿದ್ದಕ್ಕೆ ಈಗ ಗುದ್ದುತ್ತಿದ್ದಾರೆ.ಶೋಭ ಡರ್ಟಿ ಪಾಲಿಟಿಕ್ಸ್ ಎಂದು ನನ್ನ ಬಗ್ಗೆ ಹೇಳುತ್ತಾರೆ.
ನಾನು ಯಡಿಯೂರಪ್ಪ ಅವರಿಗಾಗಿ ಹೇಳಲೇಬೇಕು .ಇವರಿಗೆ ಎಲ್ಲಾ ಬುದ್ದಿ ಭ್ರಮ ಣೆಯಾಗಿದೆ. ಕಾರ್ಯಕಾರಿಣಿ ಸಭೆಯಲ್ಲಿ ಯಡಿಯೂರಪ್ಪ ವೀಡಿಯೋ ಮಾಡಿದವರು ಸವದಿ ಅಥವಾ ನಳೀನ್ ಕುಮಾರ್ ಕಟೀಲ್. ಅವರೇ ಮಾಧ್ಯಮಗಳಿಗೆ ವೀಡಿಯೋ ಕೊಟ್ಟಿರಬೇಕು ಎಂದು ಸಿದ್ದರಾಮ ಯ್ಯ ಅವರು ಗಂಭೀರ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾನ ಮರ್ಯಾದೆ ಇದರೆ ರಾಜೀನಾಮೆ ನೀಡಬೇಕು. ಯಡಿಯೂರಪ್ಪ ನಿಮ್ಮ ಮನೆಯ ಒಳಗೇ ಕಳ್ಳರು ಇದ್ದಾರೆ ಹುಷಾರಾಗಿರಿ. ನಮ್ಮನ್ನು ಏಕೆ ದೂಷಿ ಸುತ್ತೀರಿ ನಿಮ್ಮ ಮನೆಯ ಒಳಗೇ ಇದ್ದಾರೆ ಕಳ್ಳರು ಎಂದಿದ್ದಾರೆ ಎಂದು ತಿರುಗೇಟು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
