ಕೊಬ್ಬರಿಗೆ ಬೆಂಬಲ ಬೆಲೆ : ವಿಧಾನಸೌಧಕ್ಕೆ ಪಾದಯಾತ್ರೆ

ತಿಪಟೂರು

     ಕೊರೊನಾ ಮಹಾಮಾರಿ ಬಂದು ರೈತರು ದಿವಾಳಿಯಾಗಿದ್ದಾರೆ. ಇಂತಹ ಸಮಯದಲ್ಲೂ ರೈತರ ಕೈ ಹಿಡಿಯದೆ ಇರುವ ಸರ್ಕಾರವನು ಎಚ್ಚರಿಸುವ ಸಲುವಾಗಿ ಮತ್ತು ಕೊಬ್ಬರಿಗೆ ಬೆಂಬಲ ಬೆಲೆಯನ್ನು ನೀಡಬೇಕೆಂದು ಆಗ್ರಹಿಸಿ ಜೂನ್ 10 ರಂದು ಬೆಂಗಳೂರು ಚಲೋ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ರಾಷ್ಟ್ರೀಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಷಡಾಕ್ಷರಿ ತಿಳಿಸಿದರು.

     ನಗರದ ಎ.ಪಿ.ಎಂ.ಸಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 10 ರಂದು ಕಾಂಗ್ರೆಸ್ ಪಕ್ಷದಿಂದ ಹಾಗೂ ರೈತರ ಪರ ಮತ್ತು ವಿವಿಧ ಸಂಘಟನೆಗಳು ಸೇರಿ ಕೊಬ್ಬರಿ ಬೆಲೆ ಹೆಚ್ಚಿಸಿ ಬೆಂಬಲ ಬೆಲೆಯನ್ನು ನೀಡಬೇಕೆಂದು ಆಗ್ರಹಿಸಿ ತಿಪಟೂರಿನಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಅನ್ನದಾತರು ಕಷ್ಟದಲ್ಲಿದ್ದಾಗ ಅವರ ಕಷ್ಟವನ್ನು ಪರಿಹರಿಸಬೇಕಾದ್ದು ಸರ್ಕಾರದ ಕರ್ತವ್ಯ. ಇಷ್ಟು ಕಷ್ಟವಿದ್ದರೂ ರೈತರ ಬಗ್ಗೆ ಕೇಂದ್ರ ಸರಕಾರಕ್ಕಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಸ್ವಲ್ಪವೂ ಕಾಳಜಿಯೆ ಇಲ್ಲ.

      ಒಂದು ಕ್ವಿಂಟಾಲ್ ಕೊಬ್ಬರಿ 9,000 ರೂಪಾಯಿಗಳಾಗಿದ್ದು ಇದರಿಂದ ರೈತನಿಗೆ ಸಾಕಷ್ಟು ತೊಂದರೆ ಆಗಿದೆ. ರಾಜ್ಯ ಸರ್ಕಾರ ನಫೆಡ್ ಕೇಂದ್ರದ ಮೂಲಕ ಕೊಬ್ಬರಿ ಖರೀದಿ ಮಾಡಬೇಕು. ಕೇಂದ್ರ ಸರ್ಕಾರ ಎರಡೂವರೆ ಸಾವಿರ, ರಾಜ್ಯ ಸರ್ಕಾರ ಎರಡೂವರೆ ಸಾವಿರ ಪೆÇ್ರೀತ್ಸಾಹ ಹಣ ನೀಡಿ 15,300 ರೂ.ಗಳ ಬೆಲೆ ನೀಡಿ ಕೊಬ್ಬರಿ ಖರೀದಿ ಮಾಡಬೇಕು. ಸರ್ಕಾರದ ಶಾಸಕರು ಮಂತ್ರಿಗಳು ರೈತನ ಬೆಳೆಗೆ ಬೆಲೆ ನಿಗದಿಪಡಿಸಲು ಸಾಧ್ಯವಾಗದೆ ಕೈಕಟ್ಟಿ ಕುಳಿತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಬೇಕಾದರೆ ತಕ್ಷಣ 1 ಕ್ವಿಂಟಾಲ್ ಕೊಬ್ಬರಿಗೆ 15,300 ರೂ. ಘೋಷಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

       ಕೆ.ಪಿ.ಸಿ.ಸಿ ಮಾಧ್ಯಮ ವಿಶ್ಲೇಷಕ ಸಿ.ಎಸ್ ನಿರಂಜನ್ ಮಾತನಾಡಿ, ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಂತಂಹ ಸರ್ಕಾರ ರೈತರ ಮೇಲೆ ಗೋಲಿಬಾರ್ ಮಾಡಿಸಿತ್ತು. ಇಂತಹ ಸರ್ಕಾರದಿಂದ ರೈತರು ಇನ್ನೇನು ನಿರೀಕ್ಷಿಸಲು ಸಾಧ್ಯ? ಕೇಂದ್ರ ಗೃಹ ಸಚಿವ ಕಳೆದ ಲೋಕಸಭಾ ಚುನಾವಣೆ ಸಂದರ್ಭದ ಭಾಷಣದಲ್ಲಿ ಕೊಬ್ಬರಿಗೆ ಉತ್ತಮ ಬೆಲೆ ನೀಡುವುದಾಗಿ ಹೇಳಿದ್ದರು.

     ಕಳೆದ 6 ಟೆಂಡರ್ ಆಗಿ ಬೆಂಬಲ ಬೆಲೆಗಿಂತ ಕಡಿಮೆಯಾದರು ಏಕೆ ನಫೆಡ್ ತೆರೆÀದಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜೂನ್ 10 ರಂದು ತಿಪಟೂರಿನಿಂದ ಬೆಂಗಳೂರು ವಿಧಾನಸೌದದವರೆಗೆ ಪಾದಯಾತ್ರೆಯನ್ನು ಆರಂಭಿಸಲು ಅನುಮತಿ ಕೋರಿ ತಿಪಟೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಈ ಪಾದಯಾತ್ರೆಯಿಂದಲಾದರು ಸರ್ಕಾರದ ಗಮನವನ್ನು ಸೆಳೆಯುವುದು ನಮ್ಮ ಉದ್ದೇಶವಾಗಿದೆ.

     ರೈತರ ಹಿತವನ್ನು ಸರ್ಕಾರ ಕಡೆಗಣಿಸಬಾರದು. ಬಿ.ಜೆ.ಪಿ ಪಕ್ಷದಲ್ಲಿರುವ ಶಾಸಕರು ಕೂಡ ನೈಜ ಹೋರಾಟ ಮಾಡಬೇಕು. ತುಮಕೂರಿನಿಂದ ನಾಲ್ಕು ಜನ ಶಾಸಕರು ಆಯ್ಕೆಯಾಗಿದ್ದಾರೆ. ಸರ್ಕಾರದ ಬಳಿ ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಮುಖ್ಯಮಂತ್ರಿಗಳಿಗೆ ತಿಳಿಸಬೇಕು. ವೈಜ್ಞಾನಿಕವಾಗಿ ಗರಿಷ್ಠ ಬೆಲೆ ನೀಡಬೇಕು ಎಂದರು.

     ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಕಾಂತರಾಜು ಮಾತನಾಡಿ, ಬೆಲೆ ಕಡಿಮೆ ಇರುವುದರಿಂದ ಕೊಬ್ಬರಿಯನ್ನು ಮಾರುಕಟ್ಟೆಗೆ ತರಬೇಡಿ ಎಂದು ತಾಲ್ಲೂಕಿನ ರೈತರಿಗೆ ಶಾಸಕರು ಹೇಳುತ್ತಿದ್ದಾರೆ. ಅನ್ನದಾತರ ಕಷ್ಟಕ್ಕೆ ಪರಿಹಾರ ಕಂಡು ಹಿಡಿಯುವುದು ಬಿಟ್ಟು, ಸರ್ಕಾರ ಅನ್ನದಾತ ಪ್ರಭುವಿಗೆ ಕೊಬ್ಬರಿಯನ್ನು ನಫೆಡ್ ಕೇಂದ್ರವನ್ನು ತೆರೆಯುವವರೆಗೆ ಮನೆಯಲ್ಲಿ ಇಟ್ಟುಕೊಳ್ಳಿ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ     

Recent Articles

spot_img

Related Stories

Share via
Copy link