ನಗರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ವಿಜಯೋತ್ಸವ

ಹಾನಗಲ್ಲ :
 
       ಜನಪ್ರತಿನಿಧಿಗಳು ರೈತರ ನೆರವಿಗೆ ಬಾರದಿದ್ದರೂ ಹೋರಾಟದಿಂದಲೇ ಬೆಳೆ ವಿಮೆ ಪಡೆದು ರೈತರಿಗೆ ನ್ಯಾಯ ಒದಗಿಸಿಕೊಟ್ಟ ಸಮಾಧಾನವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ನುಡಿದರು.
      ಶುಕ್ರವಾರ ಹಾನಗಲ್ಲಿನ ಮಹಾತ್ಮಾಗಾಂಧಿ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ 2016-17 ರ ಬೆಳೆವಿಮೆ ಬಾಕಿ 13 ಕೋಟಿ ಪಡೆದಿರುವುದಕ್ಕೆ ಪಟಾಕಿ ಸಿಡಿಸಿ, ಸಿಹಿ ಹಂಚಿ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ರೈತರ ಸಮಸ್ಯೆಗಳಿಗೆ ಯಾವುದೇ ಇಲಾಖೆ ಸ್ಪಂಧಿಸದಿದ್ದರೆ ಹೋರಾಟವೇ ನಮ್ಮ ದಾರಿ ಎಂದು ಎಚ್ಚರಿಸಿ, ರೈತರ ಕೆಲಸಗಳಿಗಾಗಿ ಸತಾಯಿಸಿದರೆ ಸಂಘಟನೆ ಸುಮ್ಮನೆ ಕೂಡ್ರುವುದಿಲ್ಲ ಎಂದು ಎಚ್ಚರಿಕೆಯ ಘೋಷಣೆಗಳನ್ನು ಕೂಗಿದರು.
      ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಘಟಕದ ಅದ್ಯಕ್ಷ ಮರಿಗೌಡ ಪಾಟೀಲ, ರೈತರ ಮತಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳೇ ರೈತರ ಸಂಕಷ್ಠಗಳಿಗೆ ಸ್ಪಂಧಿಸದಿರುವುದು ವಿಷಾದದ ಸಂಗತಿ. ಬೆಳೆವಿಮೆ ವಿಷಯದಲ್ಲಿ ಜನಪ್ರತಿಧಿಗಳು ಸಕಾಲಿಕವಾಗಿ ರೈತರ ಸಹಾಯಕ್ಕೆ ಬರದಿದ್ದರೆ ಅಧಿಕಾರಿಗಳ ಆಟದಿಂದಾಗಿ ರೈತ ಹಲವು ನಷ್ಟ ಅನುಭವಿಸುವಂತಾಗುತ್ತದೆ. 2016-17 ರ ಬೆಳೆವಿಮೆ ಬಾಕಿ 13 ಕೋಟಿ ರೂ ಬಾಕಿಗಾಗಿ ನಾವು ನಡೆಸಿದ ಹೋರಾಟಕ್ಕೆ ಜನಪ್ರತಿನಿಧಿಗಳು ಸ್ಪಂಧಿಸಿದ್ದರೆ ಯಾವಾಗಲೋ ಈ ಹಣ ಪಡೆಯಬಹುದಾಗಿತ್ತು. ಆದರೆ ಹಾಗಾಗದೇ ರೈತ ಸಂಘದ ಹೋರಾಟವೇ ಅನಿವಾರ್ಯವಾಯಿತು. ನಮಗೆ ಜಯ ಲಭಿಸಿದೆ ಎಮಾಧಾನವಿದ್ದರೂ ಕೂಡ ನ್ಯಾಯಯುತವಾಗಿ ಪಡೆಯುವುದಕ್ಕೆ ಹೋರಾಟವೇ ಬೇಕಾಗುತ್ತದೆ ಎಂಬ ವಿಷಾದವಿದೆ ಎಂದರು.
      ಬ್ಯಾಡಗಿ ತಾಲೂಕು ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ, ತಾಲೂಕು ಪದಾಧಿಕಾರಿಗಳಾದ ಮಲ್ಲೇಶಪ್ಪ ಪರಪ್ಪನವರ, ರುದ್ರಪ್ಪ ಹಣ್ಣಿ, ರಾಜು ದಾನಪ್ಪನವರ, ಸೋಮಣ್ಣ ಜಡೆಗೊಂಡರ, ಮಹಲಿಂಗಪ್ಪ ಅಕ್ಕಿವಳ್ಳಿ, ರಾಘವೇಂದ್ರ ಹುನುಗಂದ, ಮೋದಿನಸಾಬ ನಾಗರವಳ್ಳಿ, ರಾಮನಗೌಡ ಪಾಟೀಲ, ಕರಸಬಪ್ಪ ಮಾಕೊಪ್ಪ, ಚನ್ನಪ್ಪ ಪಾವಲಿ, ಶ್ರೀಕಾಂತ ದುಂಡಣ್ಣನವರ ಸೇರಿದಂತೆ ರೈತ ನಾಯಕರು ಮಾತನಾಡಿ ಹೋರಾಟದಲ್ಲಿ ಶಕ್ತಿ ಇದೆ.
         ನ್ಯಾಯಕ್ಕಾಗಿ ಹೋರಾಡೋಣ. ಪ್ರತಿ ಗ್ರಾಮದಲ್ಲೂ ರೈತ ಸಂಘಟನೆ ಬಲಪಡಿಸೋಣ, ರೈತರು ಯಾರದೋ ಕೈಗೊಂಬೆಯಾಗುವುದು ಬೇಡ. ಅನ್ನದಾತನಿಗೆ ಅನ್ಯಾಯವಾಗಲು ಅವಕಾಶ ನೀಡುವುದು ಬೇಡ. ಅಧಿಕಾರಿಗಳಿಂದಾಗಲೀ, ಜನಪ್ರತಿನಿಧಿಗಳಿಂದಾಗಲಿ ಸಕಾರಾತ್ಮಕ ಬೆಂಬಲ ಸಿಗದಿದ್ದರೆ ಸರಕಾರಕ್ಕೆ ಮೊರೆ ಹೋಗೋಣ. ಎಲ್ಲರೂ ರೈತ ಸಂಘದೊಂದಿಗೆ ಜೊತೆಗೂಡಿ ಎಂದು ಮನವಿ ಮಾಡಿದರು,.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link