ಜಗಳೂರು:
ತಾಲೂಕಿನ ಕೊಡದಗುಡ್ಡ ಗ್ರಾಮದ ಪುರಾತನ ಪ್ರಸಿದ್ಧ ವೀರಭದ್ರೇಶ್ವರಸ್ವಾಮಿ ರಥೋತ್ಸವ ಶುಕ್ರವಾರ ಅಪಾರ ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಂಭ್ರಮ, ಸಡಗರದಿಂದ ಶುಕ್ರುವಾರ ನೆರವೇರಿತು.ವೀರಗಾಸೆ, ತಮಟೆ ಮತ್ತು ನಂದಿ ಕೋಲು ಕುಣಿತ ಮುಂತಾದ ಕಲಾ ತಂಡಗಳ ಮೇಳದೊಂದಿಗೆ ವೀರಭದ್ರೇಶ್ವ ರಸ್ವಾಮಿ ಉತ್ಸವ ಮೂರ್ತಿಯನ್ನು ಮೆರವ ಣಿಗೆಯ ಮೂಲಕ ರಥದಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ಸಾವಿರಾರು ಮಹಿಳೆಯರು ಹಾಗೂ ಭಕ್ತರು ರಥದ ಮೇಲೆ ಸೂರು ಮೆಣಸು, ದವನ, ಮಂಡಕ್ಕಿ ಹಾಗೂ ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ಹರಕೆಯನ್ನು ಸಮರ್ಪಿಸಿದರು. ನಂತರ ನೆರೆದಿದ್ದ ಭಕ್ತರು ರಥವನ್ನು ಎಳೆಯಲು ಪ್ರಾರಂಭಿಸಿದರು.
ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನ ನಡೆಯುವ ರಥೋತ್ಸವಕ್ಕೆ ರಥೋತ್ಸವಕ್ಕೆ ದಾವಣಗರೆ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು, ಮೈಸೂರು, ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಟ್ರಾಕ್ಟರ್, ಆಪೇ ಆಟೋ, ಎತ್ತಿನ ಬಂಡಿಗಳಲ್ಲಿ, ದ್ವಿಚಕ್ರ ವಾಹಗಳಲ್ಲಿ ಆಗಮಿಸಿದ್ದರು. ಇನ್ನು ಕೆಲವು ಭಕ್ತರು ತಮ್ಮ ಇಷ್ಟಾರ್ಥಿ ಸಿದ್ದಿಗಾಗಿ ರಥೋತ್ಸವಕ್ಕೆ ಪಾದಯಾತ್ರೆ ಮೂಲಕ ಗುಡ್ಡಕ್ಕೆ ತೆರಳಿ ಸ್ವಾಮಿ ದರ್ಶನ ಪಡೆದು ಪುನೀತರಾಗಿದ್ದು ಕಂಡು ಬಂದಿತು.ವೀರಭದ್ರಸ್ವಾಮಿಯ ಪಟವನ್ನು ರೇವಣ್ಣ ಎಂಬುವವರು 5.55 ಲಕ್ಷ ರೂ. ಹರಾಜು ಪಡೆದುಕೊಂಡರು.
ದೇವಸ್ಥಾನದ ಸಮಿತಿಯಿಂದ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಭಕ್ತರು ವೀರಭದ್ರೇಶ್ವರಸ್ವಾಮಿ ದರ್ಶನ ಪಡೆದರು.ರಥೋತ್ಸವಕ್ಕೆ ಶಾಸಕ ಎಸ್.ವಿ. ರಾಮಚಂದ್ರ, ಮಾಜಿ ಶಾಸಕ ಹೆಚ್.ಪಿ. ರಾಜೇಶ್, ವೀರಭದ್ರೇಶ್ವರಸ್ವಾಮಿಯ ಸಮಿತಿ ಪದಾಧಿಕಾರಿಗಳು ಸೇರಿದಂತೆ ಇನ್ನಿತರೆ ಜನಪ್ರತಿನಿಧಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.