ಎಲೆಬೇತೂರಿನಲ್ಲಿ ವಿಜೃಂಭಣೆಯ ಸಂಗಮೇಶ್ವರ ರಥೋತ್ಸವ

ದಾವಣಗೆರೆ :

     ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ಶ್ರೀಸವ ಗದ್ದಿಗೆ ಸಂಗಮೇಶ್ವರ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

     ಸ್ವಾಮಿಯ ಉಚ್ಚಯ್ಯ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಭಕ್ತರು ಸ್ವಾಮಿಗೆ ಹಣ್ಣುಕಾಯಿ ಎಡೆ ಕೊಟ್ಟು ಭಕ್ತಿ ಸಮರ್ಪಿಸಿದರು.

      ಸ್ವಾಮಿಯ ಪಲ್ಲಕ್ಕಿ ಉತ್ಸವದೊಂದಿಗೆ ಬಾಜಾ ಭಜಂತ್ರಿ, ನಂದಿಕೋಲು, ಸಮಾಳ, ಡೊಳ್ಳು ಕುಣಿತ ಇತರ ವಾದ್ಯ ವೃಂದಗಳೊಂದಿಗೆ ಸ್ವಾಮಿಯ ಮೆರವಣಿಗೆ ಮೂಲಕ ಬಂದು ರಥ ಏರುತ್ತಿದ್ದಂತೆ ಭಕ್ತರು ಶ್ರೀಸವ ಗದ್ದೆಗೆ ಸಂಗಮೇಶ್ವರ ಸ್ವಮಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಮೊಳಗಿಸಿದರು. ಬಳಿಕ ರಥೋತ್ಸವಕ್ಕೆ ಎಡೆ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಲಾಯಿತು.

       ಸ್ವಾಮಿಯ ಪಟ ಹರಾಜುನಲ್ಲಿ ಐದು ಲಕ್ಷದ ಒಂದು ರೂಪಾಯಿಗೆ ಎನ್.ಎಂ.ಬಸಪ್ಪ ಹರಾಜು ಕೂಗಿದರು. ಭಕ್ತರು ರಥೋತ್ಸವದ ಚಕ್ರಕ್ಕೆ ಕಾಯಿ ಒಡೆದು ಭಕ್ತಿ ಸಮರ್ಪಿಸಿದರು.ನಂದಿಕೋಲು ಸಮಳ ಭಕ್ತರನ್ನು ಆಕರ್ಷಿಸುವಂತೆ ಮಾಡಿತ್ತು ನಂತರ ರಥೋತ್ಸವ ಚಲಿಸುತ್ತಿದ್ದಂತೆ ರಸ್ತೆಯ ಅಕ್ಕಪಕ್ಕದಲ್ಲಿ ನಿಂತ ಭಕ್ತರು ಬಾಳೆಹಣ್ಣನ್ನು ಎಸೆದು ಕೈ ಮುಗಿದು ಭಕ್ತಿ ಸಮರ್ಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap