ಬಳ್ಳಾರಿ
ಬಳ್ಳಾರಿಯ ವಿಮ್ಸ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಆರೋಗ್ಯ ಸೌಲಭ್ಯ ನೀಡಿಕೆಯಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕು. ಈ ದಿಸೆಯಲ್ಲಿ ಅಗತ್ಯ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ವಿಮ್ಸ್‍ನ ನಿರ್ದೇಶಕರ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಮುಂದಿನ 30 ರಿಂದ 40 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಮ್ಸ್‍ನಲ್ಲಿ ಅಡ್ವಾನ್ಸ್ ಟೆಕ್ನಾಲಜಿ ಇಕ್ಯೂಪ್‍ಮೆಂಟ್‍ನ್ನು ಅಳವಡಿಸಬೇಕು. ಇಲ್ಲಿಗೆ ಬರುವ ರೋಗಿಗಳಿಗೆ ಔಷಧಿ ಕೊರತೆಯ ಕುರಿತು ದೂರುಗಳು ಕೇಳಿ ಬರಬಾರದು.
ಆರೋಗ್ಯ ವಿಷಯದಲ್ಲಿ ಯಾವುದೇ ಹೊಂದಾಣಿಕೆ ನಡೆಯುವುದಿಲ್ಲ. ವಿಮ್ಸ್‍ನಲ್ಲಿ ನೀರಿನ ಲಭ್ಯತೆ ಕುರಿತು ಕೇಳಿದಾಗ, ವಿಮ್ಸ್ 3 ಲಕ್ಷ ಲೀ. ಸಾಮಥ್ರ್ಯದ ಒವರ್ ಹೆಡ್ ಟ್ಯಾಂಕ್ ಹೊಂದಿದೆ. ಆದರೆ ಸುಮಾರು 8 ಲಕ್ಷ ಲೀ. ನೀರಿನ ಟ್ಯಾಂಕ್‍ನ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ಹೇಳಿದರು.
ಇದಕ್ಕಾಗಿ ಅಲ್ಲೀಪುರ ನಿಂದ ನೇರವಾಗಿ ವಿಮ್ಸ್‍ಗೆ ನೀರಿನ ಸಂಪರ್ಕ ಕಲ್ಪಿಸಲು ಅಗತ್ಯ ಯೋಜನೆ ರೂಪಿಸಿ, ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಸಲ್ಲಿಸುವಂತೆ ಸೂಚಿಸಿದ ಸಚಿವರು, ವಿಮ್ಸ್ ಚಿಕಿತ್ಸೆಗೆ ಮತ್ತು ಸೌಲಭ್ಯದಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
