ಬೆಂಗಳೂರು
ನಗರದ ಹೊರವಲಯದ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ರೌಡಿ ದಿಲೀಪ್‍ನನ್ನು ಕರೆತಂದು ಬೆತ್ತಲೆಗೊಳಿಸಿ ಹೊಡೆದು ಬಾಯ್ಬಿಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೌಡಿ ದಿಲೀಪ್‍ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಬೆತ್ತಲೆಗೊಳಿಸಿ ಹೊಡೆದು ಶಿಕ್ಷೆ ನೀಡಲಾಗಿರುವ ವಿಡಿಯೋಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.ಕಳೆದ ಸೆಪ್ಟೆಂಬರ್ 3 ರಂದು ದಿಲೀಪ್ ಸಹೋದರ ಸ್ಕೋಪಿ ಕೊಲೆಯಾಗಿದ್ದನು. ವಿಶ್ವೇಶ್ವರಯ್ಯ ಲೇಔಟ್ ಬಳಿ ಸ್ಕೋಪಿ ಕೊಲೆಯಾಗಿತ್ತು. ತನ್ನ ಸಹೋದರನ್ನು ಕೊಲೆ ಮಾಡಿದ್ದ ದುಷ್ರ್ಕಮಿಗಳ ಮೇಲೆ ಪತ್ರಿಕಾರ ತೀರಿಸಿಕೊಳ್ಳಲು ದಿಲೀಪ್ ಸಿದ್ಧತೆ ನಡೆಸಿ ಸಂಚು ರೂಪಿಸಿದ್ದನು.ಇದನ್ನು ತಿಳಿದ ಪೊಲೀಸರು ಠಾಣೆಗೆ ದಿಲೀಪ್‍ನನ್ನು ಕರೆತಂದಿದ್ದರು.
ವಿಡಿಯೋದಲ್ಲಿ ಆರೋಪಿ ದಿಲೀಪ್ ನನ್ನು ಬೆತ್ತಲೆಗೊಳಿಸಿ, ಹಿಂದೆಯಿಂದ ಅಂದರೆ ಮುಖಕಾಣದಂಗೆ ನಿಂತುಕೊಂಡು ಹಲ್ಲೆ ಮಾಡಿದ್ದಾರೆ. ಮುಂದೆ ಹಲ್ಲೆ ಮಾಡುತ್ತಿರುದನ್ನು ವಿಡಿಯೋ ಮಾಡಿದ್ದಾರೆ. ಆದರೆ ಹಲ್ಲೆ ಮಾಡಿದವರು, ವಿಡಿಯೋ ಮಾಡುತ್ತಿರುವವರು ಯಾರು ಎಂದು ತಿಳಿದುಬಂದಿಲ್ಲ. ಆದರೆ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಯ ನೆಪದಲ್ಲಿ ವಿಕೃತಿ ಮೆರೆತಿದ್ದಾರೆ ಎನ್ನುವ ಪ್ರತಿಕ್ರಿಯೆ ವ್ಯಕ್ತವಾಗಿದೆ.
