ಹಿರಿಯೂರು :
ಹುಚ್ಚವ್ವನಹಳ್ಳಿಗ್ರಾಮದಲ್ಲಿ ಸುಮಾರು 400-500 ವರ್ಷಗಳಷ್ಟು ಹಳೆಯದಾದ ಮತ್ತು ಸಂಪೂರ್ಣವಾಗಿ ಶಿಥಿಲಗೊಂಡಿರುವ ತುಂಬಾ ಮುದ್ದಾದ ವಿಗ್ರಹವಿದ್ದು, ಶ್ರೀ ವೀರಾಂಜನೇಯಸ್ವಾಮಿಯ ದೇವಸ್ಥಾನವನ್ನು ಕೆಲವು ಯುವಕರು ಟ್ರಸ್ಟ್‍ನ್ನು ನಿರ್ಮಿಸಿಕೊಂಡು ಸುಮಾರು 15 ಲಕ್ಷ ಬೆಲೆಬಾಳುವ ವೆಚ್ಚದಲ್ಲಿ ಬರೀ ದಾನಿಗಳಿಂದ ಮತ್ತು ಗ್ರಾಮಸ್ಥರು ಸಹಕಾರದಿಂದ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದು, ದೇವಸ್ಥಾನ ಬರೀ ಕಲ್ಲಿನಿಂದ ಕಟ್ಟಿದ್ದು, ಬಹಳ ಸುಂದರವಾಗಿದೆ.
ಬರಗಾಲದಿಂದ ತತ್ತರಿಸಿದ್ದ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ನಿರ್ಮಿಸಿದ್ದು, ಮೇಲಿನ ಶಿಖರ ಒಂದು ಬಾಕಿ ಇದ್ದು, ಇದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀಮಾನ್ ವೀರೇಂದ್ರ ಹೆಗ್ಗಡೆಯವರು ಸುಮಾರು ಒಂದು ಲಕ್ಷ ರೂಪಾಯಿಗಳನ್ನು ಸಹಾಯ ಧನವನ್ನಾಗಿ ದೇವಸ್ಥಾನಕ್ಕೆ ನೀಡಿರುತ್ತಾರೆ.
ಇದಕ್ಕಾಗಿ 16-5-19 ರಂದು ದೇವಸ್ಥಾನದ ಹತ್ತಿರ ಚೆಕ್ ವಿತರಣಾ ಸಮಾರಂಭದಲ್ಲಿ ಧರ್ಮಸ್ಥಳ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀ ಪಾತಲಿಂಗಪ್ಪನವರು ಮತ್ತು ಶ್ರೀ ಕುಮಾರಿಮಂಜುಳ, ಶಾಂತಕುಮಾರಿ, ಚೆಕ್ಕನ್ನು ವಿತರಿಸಿದರು.
ಸಮಾರಂಭದಲ್ಲಿ ದೇವಸ್ಥಾನ ನಿರ್ಮಾಣದ ಪ್ರಮುಖ ಪಾತ್ರ ವಹಿಸಿದ ಡಿ.ಗಿರೀಶ್. ತಿಮ್ಮೇಗೌಡ, ಟಿ.ವಿಶ್ವನಾಥ್, ಆರ್.ದೇವರಾಜ್, ಆರ್.ಕಸ್ತೂರಪ್ಪ, ಪೋಲೀಸ್ ಬೇಟಿ ಪ್ರಸನ್ನ, ಉದಯಶಂಕರ್, ಇ.ತಿಪ್ಪೇಸ್ವಾಮಿ, ಮತ್ತು ಗ್ರಾಮಸ್ಥರಾದ ಸಂತೋಷ್, ಪಾಪಣ್ಣ, ಈರಜಂಜಪ್ಪ, ರಾಮದಾಸ್ ಮತ್ತು ಧರ್ಮಸ್ಥಳ ಸಂಘದ ಪಂಕಜ, ನಿರ್ಮಲ, ಲಲಿತಮ್ಮ, ಲಕ್ಷ್ಮೀದೇವಿ, ಇತರರು ಹಾಜರಿದ್ದರು.