ವಿಶ್ವ ಮಹಿಳಾ ದಿನಾಚರಣೆ

ರಾಣಿಬೆನ್ನೂರು :

        ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ(ನೀಡ್ಸ್) ರಾಣೇಬೆನ್ನೂರ,ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಹಾಗೂ ನವೋದಯ ಮಹಿಳಾ ಸಂಸ್ಥೆ ರಾಣೇಬೆನ್ನೂರ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 25.03.2019ರಂದು ಮದ್ಯಾಹ್ನ 12.00ಕ್ಕೆ ನಗರಸಭೆಆವರಣದಲ್ಲಿ“ವಿಶ್ವ ಮಹಿಳಾ ದಿನಾಚರಣೆ”ಯನ್ನುಹಮ್ಮಿಕೊಳ್ಳಲಾಯಿತು.

       ಕಾರ್ಯಕ್ರಮದಅಧ್ಯಕ್ಷತೆಯನ್ನುನವೋದಯಾಮಹಿಳಾ ಸಂಸ್ಥೆಯಅದ್ಯಕ್ಷರಾದಶ್ರೀಮತಿ ಸುನೀತಾ ಪಿ ಜಾಧವಇವರು ಮಾತನಾಡುತ್ತಾತಮ್ಮ ಮಹಿಳೆಯರಿಗಾಗುವ ತೊಂದರೆಗಳ ಬಗ್ಗೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ಮಾತಾನಾಡಿದರು.

      ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಶ್ರೀಮತಿ ಶಿಲ್ಪಾ ಮುದಿಗೌಡ್ರಇವರು ಮಹಿಳಾ ದಿನಾಚರಣೆಯಉದ್ದೇಶ ಮತ್ತು ಮಹಿಳೆಯರು ಅಬಲೆಯಲ್ಲ ಸಬಲೆ ಎಂದು ಹೇಳಿದರು.ನೀಡ್ಸ್ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಎಚ್‍ಎಫ್ ಅಕ್ಕಿ ಇವರು ಮಾರ್ಗದರ್ಶನ ನೀಡುವವರುಇಲ್ಲದಿದ್ದರೇನು ಹೊಸ ಮಾರ್ಗ ಸೃಷ್ಠಿಸುವ ದೈರ್ಯತಾಕತ್ತು ಹೆಣ್ಣು ಮಕ್ಕಳಿಗಿದೆ ಎಂದು ಹೇಳಿದರು.

      ಗಂಗೋತ್ರಿ ಬಿಎಸ್‍ಡಬ್ಲೂ ಪದವಿ ಮಹಾ ವಿದ್ಯಾಲಯಕೊಟ್ಟೂರು ವಿದ್ಯಾರ್ಥಿನಿಯರಾದಕುಮಾರಿ ಸಂದರ್ಶಿನಿ ಕೆ, ಹಾಗೂ ಕುಮಾರಿರೋಜಾಆರ್‍ಇವರು ಈ ಮಹಿಳಾ ದಿನವನ್ನು ವಿಶ್ವ ಶಾಂತಿಯರಜಾ ದಿನವಾಗಿ ಆಚರಿಸಲಾಗುತ್ತಿತ್ತು ನಂತರಇದನ್ನು ವಿಶ್ವ ಮಹಿಳಾ ದಿನವನ್ನಾಗಿಆಚರಿಸಲಾಗುತ್ತಿದೆಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಪುಷ್ಪಾ ಅಕ್ಕಿ, ಶ್ರೀ ಮಾಲತೇಶ ಹೊನ್ನಮ್ಮನವರ, ಶ್ರೀ ಸುರೇಶ ಪಾಟೀಲ್, ನವೋದಯ ಮಹಿಳಾ ಸಂಸ್ಥೆಯ ಪಧಾದಿಕಾರಿಗಳು ಹಾಗೂ ನೀಡ್ಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಬಿಎಸ್‍ಡಬ್ಲ್ಯೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link