ಬಳ್ಳಾರಿ:
ರಂಗ ಕಲಾವಿಧರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ರಾಜ್ಯ ಪ್ರಶಸ್ತಿ ವಿಜೇತೆ, ರಂಗ ಕಲಾವಿಧೆ ಸುಜಾತಮ್ಮ ಹೇಳಿದರು.
ನಗರದ ಕಪ್ಪಗಲ್ ರಸ್ತೆಯ ಶ್ರೀ ಸತ್ಯಂ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ-2019ರ ನಿಮಿತ್ತ ಶ್ರೀ ಮಹಾದೇವ ತಾತಾ ಕಲಾ ಸಂಘ ಹಂದ್ಯಾಳು ಎವರು ಹಮ್ಮಿಕೊಂಡಿದ್ದ ರಂಗಗೀತೆಗಳ ಗಾಯನ, ರಂಗಭೂಮಿ ಕುರಿತು ಉಪನ್ಯಾಸ ಮಾಲಿಕೆ, ರಂಗ ಕಲಾವಿಧರಿಗೆ ಸನ್ಮಾನ ಹಾಗೂ ಮತದಾರರಿಗೆ ಜಾಗೃತಿ ಕುರಿತು ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.
ಶ್ರೀ ಮಹಾದೇವ ತಾತ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು ಅವರ ರಂಗ ಕಲಾವಿಧರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಿರಂತರ ಮಾಡುತ್ತಿದ್ದು, ಸಂತಸ ಮೂಡಿಸಿದೆ. ಇದಕ್ಕೆ ನಾನೇ ಸಾಕ್ಷೀಯಾಗಿರುವೆ ಎಂದರು. ನಂತರ ರಂಗಗೀತೆಗಳನ್ನು ಪ್ರಸ್ತುತ ಪಡಿಸಿ ಗಮನಸೆಳೆದರು.
ಜಿ.ಪಂ.ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಪ್ರತಿಯೋಬ್ಬರೂ ತಪ್ಪದೇ ಮತದಾನ ಮಾಡಿ, ಇನ್ನೋಬ್ಬರಿಗೆ ಮಾರ್ಗದರ್ಶನ ಮಾಡಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರಂಗಭೂಮಿ ಕುರಿತು ಉಪನ್ಯಾಸ ಮಾಲಿಕೆಯಲ್ಲಿ, ನಗರದ ಶ್ರೀ ಕೊಟ್ಟೂರು ಸ್ವಾಮೀ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ವಿ.ಎಂ.ರಾಜಶೇಖರ್ ಅವರು ಮಾತನಾಡಿ, ಹಿಂದಿನ ಹಾಗೂ ಪ್ರಸ್ತುತ ರಂಗಭೂಮಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ನಾಟಕವನ್ನು ವೀಕ್ಷಿಸುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ. ಮುಂದಿನ ಉತ್ತಮ ಭವಿಷ್ಯಕ್ಕೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಶ್ರೀಮಹಾದೇವ ತಾತಾ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು ಅವರು ಮಾತನಾಡಿ, ವಿಶ್ವ ರಂಗಭೂಮಿ ದಿನಾಚರಣೆ ಹಿನ್ನೆಲೆಯಲ್ಲಿ ರಂಗ ಕಲಾವಿಧರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ, ಸಂಘ ಸಂಸ್ಥೆಯ ಮುಖ್ಯಸ್ಥರು ಕೇವಲ ಕಾರ್ಯಕ್ರಮಕ್ಕೆ ಅಷ್ಟೇ ಸೀಮಿತವಾಗದೇ, ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಬೇಕು.
ಈ ನಿಟ್ಟಿನಲ್ಲಿ ಸಂಘದ ಆಶ್ರಯದಲ್ಲಿ ಮತದಾನ ಜಾಗೃತಿ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು. ಕಾಲೇಜು ಪ್ರಾಚಾರ್ಯ ರವೀಂದ್ರ ಮಲ್ಲಯ್ಯ ಹಿರೇಮಠ್ ಅವರು ಸಮಾರಂಭದ ಅಧ್ತಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭಧಲ್ಲಿ ಕಲಾವಿಧರಾದ ಸುಜಾತಮ್ಮ, ಕುಡುತಿನಿ ಹಳ್ಳದ ಬಸಪ್ಪ, ಶ್ರೀಧಗಡ್ಡೆ ಸಿದ್ದ ಬಸಪ್ಪ, ಇವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಾ.ಪಂ.ಇಒ ಜಾನಕಿರಾಂ, ಚಿತ್ರಕಲಾವಿಧ ಮಂಜುನಾಥ್ ಗೊವಿಂದವಾಡ್ ಇತರರು ಉಪಸ್ಥಿತರಿದ್ದರು. ಜಡೇಶ ಎಮ್ಮಿಗನೂರು ಹಾಗೂ ಸಾಯಿ ಶೃತಿ ಹಂದ್ಯಾಳು ಅವರು ಜಾನಪದ ಗೀತೆಗಳ ಗಾಯನ, ಭಾವ ಗೀತೆಗಳ ಗಾಯನ, ರಂಗ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಆಲಂ ಭಾಷಾ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ನಾಗೇಶ್ ಬಾಬು ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
