ವಿಶ್ವ ತಂಬಾಕು ಸೇವನೆ ವಿರೋಧಿ ದಿನಾಚರಣೆ

ಹೊಳಲ್ಕೆರೆ:

    2003 ತಂಬಾಕು ಸೇವನೆಯನ್ನು ನಿಷೇಧವನ್ನು ಸರಕಾರ ಜಾರಿಗೆ ತಂದಿದ್ದರು ಇಲ್ಲಿಯವರೆಗೆ ಯಾವುದೇ ಪ್ರತಿಫಲ ದೊರೆಯದೆ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರೇಮ ವಸಂತರಾವ್ ಪವಾರ್ ಅಸಮಧಾನ ವ್ಯಕ್ತಪಡಿಸಿದರು.

    ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ಸೇವನೆ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

     ಪ್ರತಿವರ್ಷ ತಂಬಾಕು ಸೇವನೆ ನಿಷೇದ ಮತ್ತು ವಿರೋಧದ ಬಗ್ಗೆ ಕಾರ್ಯಕ್ರಮಗಳು ದೇಶ ವ್ಯಾಪಿ ನಡೆದರು ಇಲ್ಲಯವರೆಗೆ ಜನಸಾಮನ್ಯರಲ್ಲಿ ಜಾಗೃತಿ ಮೂಡಿ ಬಂದಿಲ್ಲ. ಸರಕಾರ ದ್ವಂದ ನೀತಿಯನ್ನು ಅನುಸರಿಸುತ್ತಿದೆ.

      ಒಂದು ಕಡೆ ತಂಬಾಕಿನಿಂದ ಅದರ ಉತ್ಪನ್ನಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಪರವಾನಗಿ ನೀಡುತ್ತದೆ. ಆದರೆ ಅದನ್ನು ಸಂಪೂರ್ಣವಾಗಿ ನಿಷೇಧಿಸಲು ಇನ್ನು ಸಾಧ್ಯವಾಗಿಲ್ಲ. ಒಟ್ಟಾರೆ ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಅನೇಕ ದುಶ್ಪರಿಣಾಮಗಳು ಬೀರುತಿದ್ದರು ಅದರ ಬಗ್ಗೆ ಜನರು ಕಿಂಚಿತ್ತು ಚಿಂತಿಸುತ್ತಿಲ್ಲ. ತಂಬಾಕು ಸೇವಾನೆ ಮಾಡುವುದರಿಂದ ಮುಂದೆ ಒದಗುವ ಅನಾವುತಗಳನ್ನು ಇಂದಿನ ಯುವ ಜನರು ಅರಿತುಕೊಳ್ಳಬೇಕು. ಈ ದಂದೆಯನ್ನು ಸಂಪೂರ್ಣವಾಗಿ ಕೈ ಬಿಟ್ಟು ಜೀವನ್ ಮುಕ್ತಿಯನ್ನು ಪ್ರತಿಯೊಬ್ಬರು ಪಡೆಯಬೇಕೆಂದು ನ್ಯಾಯಾಧೀಶೆ ಸಲಹೆ ನೀಡಿದರು.

      ಮುಖ್ಯ ಅತಿಥಿಗಳಾಗಿ ನ್ಯಾಯಧೀಶರಾದ ರವಿಕುಮಾರ್ ಎನ್. ಮಾತನಾಡಿ, ಯುವಜನತೆ ತಂಬಾಕು ಉತ್ಪನ್ನಗಳ ಸೇವನೆಗೆ ಮಾರು ಹೋಗಬಾರದು ಎಂಬ ಜಾಹಿರಾತುಗಳನ್ನು ನೀಡುವುದು ಒಂದು ಕಡೆಯಾದರೆ ಅದೇ ಜಾಹಿರಾತು ಮತ್ತೊಂದು ಕಡೆ ತಂಬಾಕು ಸೇವನೆಯನ್ನು ಪ್ರಚೋದಿಸಿ ಮುಗ್ದರನ್ನ ಸೆಳೆಯುವ ಬಗ್ಗೆ ಪ್ರತಿಯೊಬ್ಬರು ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.

       ತಂಬಾಕು ಸೇವನೆಯಿಂದ ತಮ್ಮ ದೇಹಕ್ಕೆ ಹಾನಿಯಾಗುವುದಲ್ಲದೆ ತಮ್ಮ ಘನತೆ ಗೌರವಕ್ಕೆ ಚ್ಹುತಿ ಬರುತ್ತದೆ ಈ ಬಗ್ಗೆ ಪ್ರತಿಯೊಬ್ಬರು ಚಿಂತಿಸಬೇಕಾಗಿದೆ. ಈ ಮಾರಕ ದುಶ್ಚಟಗಳನ್ನು ಬಿಡುವುದು ಬಹಳ ಕಷ್ಠ ಈ ಒಂದು ದಿನಾಚರಣೆ ತಂಬಾಕು ಸೇವನೆಯನ್ನು ಸಂಪೂರ್ಣ ನಿಷೇಧಿಸಬೇಕು. ಮತ್ತು ಅದರಿಂದಾಗುವ ಅನಾವುತಗಳನ್ನು ತಡೆಯುವ ದೃಷ್ಟಿಯಿಂದ ಕಾನೂನು ಸೇವಾ ಸಮಿತಿ, ತಂಬಾಕು ಸೇವನ ರಕ್ಷಣಾ ಇಲಾಖೆ ಯುವ ಜನರಿಗೆ ತಿಳುವಳಿಕೆ ಮತ್ತು ಜಾಗೃತಿಯನ್ನು ಮೂಡಿಸುವ ಹಿತದೃಷ್ಟಿಯಿಂದ ಪ್ರತಿವರ್ಷ ವಿಶ್ವ ತಂಬಾಕು ಸೇವನೆ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

      ಮುಖ್ಯ ಉಪನ್ಯಾಸಕರಾಗಿ ಜಿಲ್ಲಾ ತಂಬಾಕು ನಿಷೇಧ ಇಲಾಖೆಯ ತಿಪ್ಪೇಸ್ವಾಮಿ ಮಾತನಾಡಿ, ತಂಬಾಕು ಸೇವನೆಯಿಂದ ಉಂಟಾಗುವ ಅನಾವುತಗಳ ಬಗ್ಗೆ ಕೂಲಂಕುಶವಾಗಿ ವಿವರಿಸಿದರು.ಅಧ್ಯಕ್ಷತೆಯನ್ನು ವಕಿಲಸ ಸಂಘದ ಜಿ.ರಂಗಸ್ವಾಮಿ ವಹಿಸಿ ಮಾತನಾಡಿದರು. ವಿಶೇಷ ಅಹ್ವಾನಿತರಾಗಿ ಉಪಾಧ್ಯಕ್ಷ ಆರ್.ಜಗದೀಶ್, ಕಾರ್ಯದರ್ಶಿ ಜಿ.ಪಿ.ಪ್ರದೀಪ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ವಕೀಲ ಬಿ.ಎನ್.ಪ್ರಶಾಂತ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link