ವಿಶ್ವಾಸ ಕಿರಣ ಯೋಜನೆ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಭವಿಷ್ಯದ ಬದುಕಿನ ಆಶಾಕಿರಣವಾಗಲಿ

ಚಳ್ಳಕೆರೆ

        ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿ ರಜೆ ಅವಧಿಯಲ್ಲೂ ಸಹ ವಿವಿಧ ವಿಷಯಗಳ ಬಗ್ಗೆ ವಿಶ್ವಾಸ ಕಿರಣ ಎಂಬ ಯೋಜನೆಯಡಿ ಉತ್ತಮ ತರಬೇತಿಯನ್ನು ಹಮ್ಮಿಕೊಂಡಿದ್ದು, ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುವ ಮೂಲಕ ಇಲಾಖೆಯ ಯೋಜನೆಯನ್ನು ಸಾರ್ಥಕಗೊಳಿಸುವಂತೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎನ್.ಕೃಷ್ಣಪ್ರಸಾದ್ ತಿಳಿಸಿದರು.

        ಅವರು ಸೋಮವಾರ ಕಾಲೇಜು ಸಭಾಂಗಣದಲ್ಲಿ ಪ್ರಸ್ತುತ ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ವಿಶ್ವಾಸ ಕಿರಣ ಯೋಜನೆಯ ಆಂಗ್ಲ ತರಬೇತಿ ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿ ಮತನಾಡಿದರು. ಸರ್ಕಾರ ಕಳೆದ ಮೂರು ವರ್ಷಗಳಿಂದ ಈ ಯೋಜನೆಯನ್ನು ಜಾರಿಗೆ ತರುವ ಮೂಲಕ ಈ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ವಿದ್ಯಾರ್ಥಿಗಳು ತರಬೇತಿ ಕಾರ್ಯಗಾರಕ್ಕೆ ಗೈರು ಹಾಜರಾಗದೆ ಈ ಯೋಜನೆಯನ್ನು ಯಶಸ್ಸಿಗೊಳಿಸುವಂತೆ ಮನವಿ ಮಾಡಿದರು.

       ಕಾರ್ಯಕ್ರಮ ಉದ್ಘಾಟಿಸಿದ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ.ವೀರಣ್ಣ ಮಾತನಾಡಿ, ಇಂಗ್ಲಿಷ್ ಭಾಷೆಯ ಕಲಿಕೆಯ ಬಗ್ಗೆ ವಿದ್ಯಾರ್ಥಿಗಳು ಅನಗತ್ಯವಾಗಿ ಗಾಬರಿಗೆ ಒಳಗಾಗುತ್ತಾರೆ. ಆಂಗ್ಲ ಭಾಷೆ ಪ್ರಾರಂಭದ ಹಂತದಲ್ಲಿ ಕಷ್ಟವೆನ್ನಿಸಿದರೂ ಈ ಭಾಷೆಯನ್ನು ಕಲಿತ ಮೇಲೆ ಅದು ವಿದ್ಯಾರ್ಥಿಗಳಿಗೆ ಹೊಸ ಚೈತನ್ಯವನ್ನು ತುಂಬಲು ನೆರವಾಗುತ್ತದೆ. ಇಂಗ್ಲಿಷ್ ಭಾಷೆಯನ್ನು ಹೊರತು ಪಡಿಸಿ ಅಭ್ಯಾಸ ಮಾಡಲು ಸಾಧ್ಯವೇ ಇಲ್ಲ. ಇತರ ಎಲ್ಲಾ ಭಾಷೆಗಳಂತೆ ಇಂಗ್ಲಿಷ್ ಭಾಷೆ ಕಲಿಕೆಯೂ ಸಹ ಅವಶ್ಯಕವಾಗಿದೆ. ಇಂಗ್ಲಿಷ್ ಭಾಷೆಯ ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮೌಲ್ಯ ವೃದ್ದಿಯಾಗುತ್ತದೆ. ಬುದ್ದಿ ಕೌಶಲ್ಯವನ್ನು ಸದೃಢಗೊಳಿಸಲು ಆಂಗ್ಲ ಭಾಷೆ ಕಲಿಕೆಯಿಂದ ಮಾತ್ರ ಸಾಧ್ಯವೆಂದರು.

       ಆಂಗ್ಲ ಭಾಷೆ ಉಪನ್ಯಾಸಕ ವೆಂಕಟೇಶ್‍ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ವ್ಯವಹಾರಗಳನ್ನು ಇಂಗ್ಲಿಷ್ ಭಾಷೆಯ ಮೂಲಕ ಪ್ರಾರಂಭಿಸಿದರೆ ಅವರಿಗೆ ಈ ಭಾಷೆಯ ಮೇಲೆ ಹಿಡಿತ ಮತ್ತಷ್ಟು ಗಟ್ಟಿಯಾಗುತ್ತದೆ. ಪ್ರತಿಯೊಂದು ಹಂತದಲ್ಲೂ ಗ್ರಾಮರ್ ಬಳಸುವ ಅಗತ್ಯವಿಲ್ಲ. 400 ವರ್ಷಗಳಿಂದ ಈ ಭಾಷೆ ನಮ್ಮಲ್ಲಿ ಬಳಕೆಯಾಗುತ್ತಿದೆ. ಇಂಗ್ಲೀಷ್ ಬಳಕೆಯಿಂದ ಪ್ರಾದೇಶಿಕ ಭಾಷೆಯನ್ನು ಅಲಕ್ಷಿಸಬಾರದು. ಎಲ್ಲಾ ಭಾಷೆಯಗಳ ಕಲಿಕೆಯೂ ಶಿಕ್ಷಣದ ಪ್ರಗತಿಗೆ ನಾಂದಿಯಾಗುತ್ತದೆ. ಇಂಗ್ಲೀಷ್ ಭಾಷೆಯನ್ನು ಶಿಕ್ಷಣಕ್ಕೆ ಪೂರಕವಾಗಿ ಕಲಿಯಬೇಕು. ಆದರೆ, ನಮ್ಮ ಬದುಕಿನ ನೈಜ್ಯ ಶಕ್ತಿಯಾಗಿ ಕನ್ನಡವನ್ನೇ ಹೆಚ್ಚು ಅವಲಂಬಿತವಾಗಬೇಕು ಎಂದರು.

         ಜಿಲ್ಲಾ ಉಪನ್ಯಾಸಕರುಗಳ ಸಂಘದ ಅಧ್ಯಕ್ಷ ಎಸ್.ಲಕ್ಷ್ಮಣ್ ಮಾತನಾಡಿ, ತಾಲ್ಲೂಕಿನೆಲ್ಲೆಡೆ ಕಳೆದ ಕೆಲವು ವರ್ಷಗಳಿಂದ ಬರ ನಮಗೆ ಶಾಪವಾಗಿ ಪರಿಣಮಿಸಿದರೂ ಈ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಶಿಕ್ಷಣ ಕಲಿಕೆಗೆ ಬರವಿಲ್ಲದಂತೆ ಎಲ್ಲರೂ ಜಾಗ್ರತೆ ವಹಿಸಿದ್ದಾರೆ. ಇಂದಿನ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣವನ್ನೇ ಹೆಚ್ಚು ಕಲಿತಲ್ಲಿ ಮಾತ್ರ ಅವರ ಭವಿಷ್ಯದ ಬದುಕು ಉತ್ತಮಗೊಳ್ಳುವುದರಲ್ಲಿ ಸಂಶವಿಲ್ಲವೆಂದರು.

        ಕಾರ್ಯಕ್ರಮವನ್ನು ಉದ್ದೇಶಿಸಿ ಭೌತಶಾಸ್ತ್ರ ಉಪನ್ಯಾಸಕ ವೆಂಕಟರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ರವೀಶ್, ಅಭೀಬ್, ವಂಸತಕುಮಾರ್, ಗುರುಸಿದ್ದಸ್ವಾಮಿ ಮುಂತಾದವರು ಭಾಗವಹಿಸಿದ್ದರು. ಆಂಗ್ಲ ಉಪನ್ಯಾಸಕ ನಾಗರಾಜಬೆಳಗಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap