ಹೊಸಪೇಟೆ:
ಅವೈಜ್ಞಾನಿಕವಾದ ಫಾರಂ 4 ಯಿಂದ ಚಾಲಕ ನಿರ್ವಾಹಕರ ಕೆಲಸದ ಬಾರ ಜಾಸ್ತಿಯಾಗಿದ್ದು ಹಾಗೂ ಕಾನೂನು ಪ್ರಕಾರ ಓವರ್ ಟೈಂ ನೀಡುತ್ತಿಲ್ಲ ಎಂದು ಆರೋಪಿಸಿ ಕೆ ಎಸ್ ಆರ್ ಟಿ ಸಿ ಸ್ಟಾಫ್ ಆಂಡ್ ವರ್ಕರ್ಸ್ ಯುನಿಯನ್ ಹೊಸಪೇಟೆ ವಿಭಾಗದ ಪದಾಧಿಕಾರಿಗಳು ನಗರದ ಬಸ್ ನಿಲ್ದಾಣ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನೌಕರರು ಕೆಲಸಕ್ಕೆ ಹಾಜರಾದಾಗ ಅನೇಕ ಕಾರಣಗಳಿಂದ ಅವರನ್ನು ಕರ್ತವ್ಯದ ಮೇಲೆ ಕಳುಹಿಸದೇ ಕಾರ್ಮಿಕರಿಗೆ ರಜೆ ಎಂದು ನಮೂದಿಸಿ ಅಥವಾ ಗೈರು ಹಾಜರಿ ಎಂದು ನಮೂದಿಸಿ ವೇತನ ಕಡಿತಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಪಾಸಣೆ ಹೆಸರಿನಲ್ಲಿ ತನಿಖಾಧಿಕಾರಿಗಳು ನಿರ್ವಾಹಕರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಹೂಡಲಾಗುತ್ತಿದ್ದು ಕೂಡಲೇ ಕೈಬಿಡಬೇಕು. ಪ್ರಯಾಣಿಕರು ಟಿಕೆಟ್ ಕಳೆದುಕೊಂಡರು ಎನ್ ಐ ಎನ್ ಸಿ ಪ್ರಕರಣಗಳು ದಾಖಲಿಸುವುದನ್ನು ನಿಲ್ಲಿಸಬೇಕು. ವೈದ್ಯಕೀಯ ಮರುಪಾವತಿ ಬಿಲ್ಲುಗಳು ಸಕಾಲದಲ್ಲಿ ನೌಕರರಿಗೆ ಪಾವತಿಸದೆ ತಪಾಸಣೆ ತನಿಖೆ ನೆಪದಲ್ಲಿ ತಿಂಗಳುಗಟ್ಟಲೆ ತಡಮಾಡುವುದು ಹಾಗೂ ಸಿಜಿಎಚ್ಎಸ್ ನೆಪವೊಡ್ಡಿ ಶೇ.50 ರಷ್ಟು ಹೆಚ್ಚು ಮರುಪಾವತಿ ಹಣ ಕಡಿತಗೊಳಿಸಬಾರದು.
ಕೈಗಾರೀಕರಣ ನ್ಯಾಯಾಲಯದ ಆದೇಶವನ್ನು 29/08/2017 ರಂದು ನೀಡಿದ್ದು ಸದರಿ ಆದೇಶವನ್ನು ಇತೀರ್ಪಿನಲ್ಲಿ ಇದ್ದಂತೆ ಅನುಷ್ಠಾನಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಯುನಿಯನ್ ಅಧ್ಯಕ್ಷ ಶ್ರೀನಿವಾಸಲು, ಪ್ರಧಾನ ಕಾರ್ಯದರ್ಶಿ ಬಸವನಗೌಡ, ಮುಖಂಡರಾದ ರವಿ ಕುಲಕರ್ಣಿ, ವಾಸು, ವಿರೂಪಾಕ್ಷ, ದಸ್ತಗಿರಿ, ರಾಜಶೇಖರ ಮುಂತಾದವರು ಇದ್ದರು.