ಕೊಟ್ಟೂರು
ಸಾರಿಗೆ ಇಲಾಖೆ ನೌಕರರಾದ ನಮ್ಮನ್ನು ರಾಜ್ಯ ಸರ್ಕಾರ ಕೊಡಲೇ ಸರ್ಕಾರಿ ನೌಕರರೆಂದು ಪರಿಗಣಿಸಿ ಸರ್ಕಾರ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಶನಿವಾರ ಸ್ಥಳೀಯ ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ.ನೌಕರರು ಪತ್ರಚಳುವಳಿ ನಡೆಸಿದರು.
ಕೆ.ಎಸ್.ಆರ್.ಟಿ.ಸಿ.ಯ ನಾಲ್ಕು ವಿಭಾಗದಲ್ಲಿ ಸಾರಿಗೆ ನೌಕರರು ಹಗಲಿರುಳು ದುಡಿಯುತ್ತಿದ್ದ ಸಂಸ್ಥೆಯ ಆಧಾಯವನ್ನು ವೃದ್ದಿಸಿದ್ದಾರೆ. ಹಾಗೂ ಇತರೆ ರಾಜ್ಯಗಳ ಸಾರಿಗೆ ಸಂಸ್ಥೆಗಳಿಗಿಂತ ಉತ್ತಮ ಸೇವೆ ಸಲ್ಲಿಸುತ್ತಿದ್ದೇವೆ ಎಂದರು.
ಮುಖ್ಯಮಂತ್ರಿ ಕುಮಾರ ಸ್ವಾಮಿ, ವಿಧಾನ ಸಭಾ ಚುನಾವಣೆ ಪೂರ್ವದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಸಂಪೂರ್ಣ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ್ದರು. ಅದನ್ನೀಗ ಜಾರಿಗೊಳಿಸುವಂತೆ ಒತ್ತಾಯಿಸಿದರು.ಸಾರಿಗೆ ನೌಕರರ ಪ್ರಾಣಿಕತೆ, ಸೇವೆನಿಷ್ಟೆಯ ಫಲವಾಗಿ ಸಾರಿಗೆ ಸಂಸ್ಥೆ ಉತ್ತಮವಾದ ಹೆಸರಿದೆ. ಹಲವಾರು ಪ್ರಶಸ್ತಿಗಳು ಸಹಾ ಬಂದಿವೆ. ಸಂಸ್ಥೆಯ ಶ್ರೇಯಸ್ಸಿಗೆ ನೌಕರರು ಶ್ರಮಿಸಿದ್ದರೂ ನಮ್ಮನ್ನು ಸರ್ಕಾರ ಕಡೆಗಣಿಸಿದೆ ಎಂದು ತಮ್ಮ ಅಳನ್ನು ತೋಡಿಕೊಂಡರು.ಮುಖ್ಯ ಮಂತ್ರಿ ಕುಮಾರ ಸ್ವಾಮಿ, ತಾವು ಕೊಟ್ಟ ಮಾತಿನಂತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಆದೇಶ ಹೊರಡಿಸಬೇಕೆಂದು ಆಗ್ರಹ ಪಡಿಸಿದರು.
ಈ ಕುರಿತು ನಮ್ಮ ಮನವಿಯನ್ನು ಪೋಸ್ಟ್ ಕಾರ್ಡ ಮೂಲಕ ಸಾರಿಗೆ ನೌಕರರು ತಮ್ಮ ಮುಖ್ಯಮಂತ್ರಿಗೆ ಸಾಮೂಹಿಕವಾಗಿ ಬರೆದು ಅಂಚೆ ಡಬ್ಬಕ್ಕೆ ಹಾಕಿದರು.ಇಲ್ಲಿನ ಸಂಚಾರಿ ನಿಯಂತ್ರಕ ಪಿ.ಜಾಹಾಂಗೀರ, ಎನ್.ಎಂ. ಚನ್ನಬಸಯ್ಯ, ಯು.ಎಸ್. ಮಲ್ಲಿನಾಥ್, ಕೆ.ಎಂ. ವೀರಪ್ಪ, ಟಿ. ಕೊಟ್ರೇಶ, ಕೆ.ನಾಗರಾಜ್, ವೈ. ಲೋಕನಾಥ್ ಮುಂತಾದವರು ಇದ್ದರು.