ಹರಪನಹಳ್ಳಿ:
ಪವಿತ್ರವಾದ ಮತವನ್ನು ಆಸೆ ಆಮೀಶಕ್ಕೆ ಬಲಿಯಾಗದೆ ಸದೃಢ ದೇಶ ಕಟ್ಟಲು ಚಲಾಯಿಸಿ ಎಂದು ಗುಂಡಗತ್ತಿ ಕ್ಲಸ್ಟರ್‍ನ ಸಿಆರ್‍ಪಿ ಐ.ಕೊಟ್ರೇಶ್ ಹೇಳಿದರು.ತಾಲೂಕಿನ ಗುಂಡಗತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ವೆಂಕಟೇಶ್ವರ ಪ್ರೌಢಶಾಲೆ ಸಹಯೋಗದೊಂದಿಗೆ ಆಯೋಜಿದ್ದ ಚುನಾವಣೆ ಜನಜಾಗೃತಿ ಹಾಗೂ ಮತದಾನದ ಮಹತ್ವದ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ದೇಶದ ಅಭಿವೃದ್ದಿ ಸಾದ್ಯ. ಆ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿ. ಸೂಕ್ತವ್ಯಕ್ತಿಯನ್ನು ಆಯ್ಕೆ ಮಾಡಿ ಎಂದರು.
ಬಿಆರ್‍ಪಿ ರವಿಕುಮಾರ್ ಕಗತೂರು ಮಾತನಾಡಿ. ಸಂವಿದಾನಾತ್ಮಕ ರಾಷ್ಟ್ರವನ್ನು ಕಟ್ಟುವಲ್ಲಿ ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು ಕಡ್ಡಾಯ ಮತದಾನವಾಗಿದೆ ಎಂದರು. ಮುಖ್ಯ ಶಿಕ್ಷಕ ಚಿದಾನಂದಸ್ವಾಮಿ ಮಾತನಾಡಿ. 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾನ ಮಾಡಿ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಮತ ಚಲಾಯಿಸಿ ದೇಶದ ಹಿತ ಕಾಪಾಡಿ ಎಂದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಹೆಚ್.ನಾಗರಾಜ್, ಶಿಕ್ಷಕರಾದ ಎಂ.ಪ್ರಭು, ಲಕ್ಯಾನಾಯ್ಕ್, ಕೆ.ಸಿದ್ದಪ್ಪ, ಸಿ.ರುದ್ರಪ್ಪ, ಹೆಚ್.ಪ್ರಭಾಕರ್, ಶಿವಶಂಕರ್, ಕೆಂಚಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.