ಹಾವೇರಿ :
ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಮ್ಮಾ ಸಂಸ್ಥೆ(ರಿ)ಹಿರೇಮುಗದೂರ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ ಮತದಾನ ಜಾಗೃತ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸ್ವಯಂ ಸೇವಾ ಸಂಸ್ಥೆಯ ಪ್ರೇರಕ ಫಕ್ಕಿರೇಶ ಕಾಳಿ ಮಾತನಾಡಿ ಭಾರತೀಯರಿಗೆ ಸಂವಿಧಾನ ನೀಡಿದ ಪರಮ ಅಧಿಕಾರ ಮತದಾನದ ಹಕ್ಕು.
ಭವಿಷ್ಯದ ಆಡಳಿತ ನಿರ್ಧರಿಸಲು ಚುನಾವಣೆ ಜರುಗುತ್ತಿರುವ ಈ ಸಂದರ್ಭದಲ್ಲಿ ನಮ್ಮ ಹಕ್ಕನ್ನು ತಪ್ಪದೇ ಚಲಾಯಿಸಿ ಪ್ರಜಾಪ್ರಭುತ್ವದ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕಾಗಿದೆ. ಈ ನಿಮಿತ್ಯ ಅಮ್ಮಾ ಸಂಸ್ಥೆ(ರಿ) ಕಾಳಜಿ ತೊರುತ್ತಿದೆ. ಕರಪತ್ರಗಳನ್ನು ಹಂಚುವ ಮೂಲಕ ಸ್ವಯಂ ಕೆಲಸ ಮಾಡುತ್ತಿರುವುದು ಹೆಮ್ಮೆ ವಿಷಯ ಎಂದರು.
ಊರ ಹಿರಿಯರಾದ ಹನುಮಂತಪ್ಪ ಹೊಸಮನಿ.ಶೇಖರಯ್ಯ ಹಿರೇಮಠ,ಗುಡ್ಡಪ್ಪ ಕಾಳಿ.ಪರಮೇಶಪ್ಪ ತಳವಾರ ಮತದಾನ ಜಾಗೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಲಾಯಿತು.ಚಿಕ್ಕಮುಗದೂರ, ಅಳ್ಳಳ್ಳಿ,ನೀರಲಗಿ, ಡೊಂಬರಮತ್ತೂರ.ಇಚಲ ಯಲ್ಲಾಪೂರ.ಕೆಬಿ ತಿಮಾಪೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿತರಿಸಲು ಹಿರಿಯರಿಂದ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಊರ ಹಿರಿಯರಾದ ್ಳಬಸಯ್ಯ ಮಠದ,ನಿಂಗ್ಪಪ ದೊಡ್ಡಮನಿ,ಗದಿಗೆಪ್ಪ ನಡುವಿನಮನಿ,ಮಾಲಿಂಗಪ್ಪ ಬಾರ್ಕಿ,ಶಿವಪ್ಪ ಅಳ್ಳಳ್ಳಿ, ಪ್ರಕಾಶ ಬಾರ್ಕಿ,ಚಂದ್ರಪ್ಪ ಹೊಸಮನಿ,ಪ್ರಭು ಅಂಗಡಿ ಅಮ್ಮಾ ಸಂಸ್ಥೆ(ರಿ) ಪದಾಧಿಕಾರಿಗಳು ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಿದರು.