ಹಾವೇರಿ :
ಹಿರಿಯ ಚಿತ್ರನಟರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮುಖ್ಯಮಂತ್ರಿ ಚಂದ್ರರವರು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಿಆರ್ ಪಾಟೀಲ ಅವರ ಪರವಾಗಿ ನಗರದ ಜೆಪಿ ಸರ್ಕಲಿನಿಂದ ವಿವಿಧ ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡಿದರು. ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಿಆರ್ ಪಾಟೀಲ ಗಾಂಧಿ ತತ್ವದ ಅನುಯಾಯಿಯಾಗಿದ್ದು, ಉತ್ತಮ ಆಡಳಿತ ಅನುಭವ ಹೊಂದಿದ್ದಾರೆ.
ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಮಾದರಿ ಕೆಲಸಗಳಾಗುವಂತೆ ನಿಷ್ಠಾವಂತರಾಗಿ ಶ್ರಮವಹಿಸಿ ಕೆಲಸ ಮಾಡಲು ಅವರನ್ನು ಬೆಂಬಲಿಸಿ ಮತ ನೀಡುವಂತೆ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಉಡಚಪ್ಪ ಮಾಳಗಿ.ಮಾಲತೇಶ ಯಲ್ಲಾಪೂರ ಸೇರಿದಂತೆ ಕಾಂಗ್ರೇಸ್ ಪಕ್ಷ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡರು.