ಮತದಾರರು ಮುಖಂಡರಿಗೆ ಬುದ್ಧಿಹೇಳುವ ಚುನಾವಣೆ ಇದು: ಕೆ ಎನ್ ರಾಜಣ್ಣ

ಮಧುಗಿರಿ:

        ಮತದಾರರು ಮುಖಂಡರಿಗೆ ಬುದ್ಧಿಹೇಳುವ ಚುನಾವಣೆ ಇದಾಗಿದೆ ಏ.8ರಂದು ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ಬೃಹತ್ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿದೆ ಕಾರ್ಯಕರ್ತರ ಅಭಿಪ್ರಾಯಗಳಂತೆ ಮುಂದಿನ ಚುನಾವಣಾ ಕಾರ್ಯ ತಂತ್ರವನ್ನು ರೂಪಿಸಲಾಗುವುದೆಂದು ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.

       ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪ ಕಾರ್ಯಕರ್ತರ ಕಛೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾಧ್ಯಮದ ವರೊಂದಿಗೆ ಮಾತನಾಡಿದ ಅವರು. ಮೈತ್ರಿ ಒಪ್ಪಂದದಿಂದಾಗಿ ಪಕ್ಷದ ಕಾರ್ಯಕರ್ತರ ಮನವೊಲಿಸುವುದು ಕಷ್ಟದ ಕೆಲಸವಾಗಿದ್ದು ಪಕ್ಷದ ಮುಖಂಡರು ತೆಗೆದುಕೊಂಡಿರುವ ತೀರ್ಮಾನದಿಂದ ಅನಿವಾರ್ಯವಾಗಿ ಕೆಲಸ ಮಾಡಬೇಕಾಗಿದೆ.

        ಚುನಾವಣಾ ಸಮಯದಲ್ಲಿ ಮೋದಿ ಸರಕಾರವನ್ನು ಬಿಜೆಪಿ ಪಕ್ಷವನ್ನು ಟೀಕಿಸುವ ಜೆಡಿಎಸ್ ನವರು ತುಮಕೂರಿನಲ್ಲಿ ಜಿಪಂ ಜೊತೆ ಅವರ ಹೊಂದಾಣಿಕೆಯಿಂದಲೇ ಅಧಿಕಾರ ನಡೆಸುತ್ತಿದ್ದಾರೆ ಅವರಿಗೆ ಬೇಕಾದ ಹಾಗೆ ಅಧಿಕಾರಕ್ಕಾಗಿ ಯಾವ ಪಕ್ಷದೊಂದಿಗಾದರೂ ಮೈತ್ರಿ ಮಾಡಿಕೊಳ್ಳುತ್ತಾರೆ ಇವರ ಪರ ನಾವು ಮತಯಾಚನೆ ಮಾಡುವುದಾದರೂ ಹೇಗೆ.

       ನಮ್ಮ ನೆಚ್ಚಿನ ನಾಯಕರು ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಲೋಕಸಭಾ ಚುನಾವಣಾ ಪ್ರಚಾರವನ್ನು ಜಿಲ್ಲೆಯಲ್ಲಿ ಏ.10 ರಿಂದ ಆರಂಭಿಸಲಿದ್ದಾರೆ ಅಂದು ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಜಿಲ್ಲೆಯಲ್ಲಿ ಮೈತ್ರಿಯ ಸಮಾರಂಭಗಳಿಗೆ ಭಾಗವಹಿಸಲು ಅವಕಾಶ ನೀಡದೆ ಅವರನ್ನು ಮೂಲೆಗುಂಪು ಮಾಡುತ್ತಿರುವುದು ಸಹ ಪಕ್ಷದ ಕಾರ್ಯಕರ್ತರಲ್ಲಿ ಬೇಸರ ತರಿಸಿದೆ.

          ರಾಜ್ಯದಲ್ಲಿ ಮೈತ್ರಿ ಧರ್ಮಪಾಲನೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಅನ್ಯಾಯವಾಗಿದ್ದು ಹಾಲಿ ಸಂಸದರಿಗೆ ಅವಕಾಶ ನೀಡದೆ ಜೆಡಿಎಸ್ ಈ ಕ್ಷೇತ್ರವನ್ನು ಪಡೆದಿರುವುದು ಜಿಲ್ಲೆಯಲ್ಲಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅತೃಪ್ತಿ ಇದ್ದು ಯಾವ ಕಾರಣಕ್ಕಾಗಿ ಈ ಕ್ಷೇತ್ರವನ್ನು ಬಿಟ್ಟುಕೊಡಬೇಕಾಯಿತು ಎಂಬುದನ್ನು ಪಕ್ಷದ ಕಾರ್ಯಕರ್ತರಿಗೆ ತಿಳಿಸಿ ಅವರನ್ನು ಜಾಗೃತ ಗೊಳಿಸಬೇಕಾಗಿದೆ.

          ಇದೇ ಸಂಧರ್ಭದಲ್ಲಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹಾಲಿ ಪುರಸಭಾ ಸದಸ್ಯ ತಿಮ್ಮರಾಯಪ್ಪ ಹಾಗೂ ಮತ್ತಿತರರು ಕಾಂಗ್ರೆಸ್ ಪಕ್ಷ ಸೇರ್ಪಡೆ ಯಾದರು. ಜಿಲ್ಲೆಯ ಜನತೆಗೆ ತಮ್ಮ ಹಾಗೂ ಪಕ್ಷದ ಪರವಾಗಿ ಶುಭಾಶಷಯಗಳನ್ನು ತಿಳಿಸಿ ಭಗವಂತ ಮುಂದಾದರೂ ಮಳೆ ಬೆಳೆಯನ್ನು ಕರುಣಿಸಿ ಜನತೆ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದರು.

        ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಸಹಕಾರ ಮಹಾಮಂಡಲದ ಎನ್.ಗಂಗಣ್ಣ, ಪುರಸಭಾ ಸದಸ್ಯರಾದ ಎಂ.ವಿ.ಗೋವಿಂದರಾಜು, ಎಂಎಸ್ ಚಂದ್ರಶೇಖರ್, ಆಲೀಂ, ತಾಪಂ ಸದಸ್ಯ ಸೊಸೈಟಿ ರಾಮಣ್ಣ, ಎ.ಪಿ.ಎಂ.ಸಿ.ಅಧ್ಯಕ್ಷ ಎಂ.ಬಿ.ಮರಿಯಣ್ಣ, ಮಾಜಿ ಪುರಸಭಾಧ್ಯಕ್ಷ ನಂಜುಂಡರಾಜು, ಅಯ್ಯೂಬ್, ಮುಖಂಡರಾದ ಮಾಜಿ. ಜಿ.ಪಂ ಸದಸ್ಯ ಎಚ್.ಡಿ.ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜ್‍ಗೋಪಾಲ್, ಮಾಜಿ ತುಮುಲ್ ಅಧ್ಯಕ್ಷ ನಾಗೇಶ್ ಬಾಬು, ಶಿವರಾಮಯ್ಯ, ಎಂ.ಎಸ್.ಶಂಕರನಾರಾಯಣ್, ಎಂ.ಜಿ.ಮಂಜುನಾಥ್, ಜಿ.ಎಸ್.ಜಗದೀಶ್‍ ಕುಮಾರ್ , ರಮೇಶ್ ಕನಕದಾಸ್, ರಘುಪತಿ, ಹೆಚ್.ಲೋಕೇಶ್, ಸಿದ್ದಾಪುರ ಈರಣ್ಣ, ಬಸವರಾಜು, ಬಾಬ ಫಕೃದ್ದೀನ್, ಕೃಷ್ಣಮೂರ್ತಿ, ಎಂ.ಜಿ.ರಘುಯಾದವ್ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap