ಹುಳಿಯಾರು ಮತದಾರರ ಅಭಿಪ್ರಾಯ

ಹುಳಿಯಾರು:

ಮತದಾನ ಮಾಡುವುದು ದೇಶಭಕ್ತಿ

       ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಚುಣಾವಣೆ ಪ್ರಕ್ರಿಯೆ ಒಂದು ಹಬ್ಬದಂತೆ. ಈ ಹಬ್ಬದಲ್ಲಿ ಮತದಾನ ನಮಗೆ ಸಂವಿಧಾನ ನೀಡಿದ ಹಕ್ಕು. ಇಷ್ಟಪಟ್ಟು ಮತದಾನ ಮಾಡಬೇಕು. ಮತದಾನ ಮಾಡುವುದು ದೇಶಭಕ್ತಿ, ಮಾಡದೆ ಅಸಡ್ಡೆ ಮಾಡಿದರೆ ದೇಶದ್ರೋಹಿತನ. ನಮ್ಮ ದೇಶದಲ್ಲಿ ನಾನು ಕಂಡಂತೆ ಎಂದೂ ಶೇ 100 ರಷ್ಟು ಮತದಾನ ಆಗೇ ಇಲ್ಲ. ಯಾವಾಗಲೂ ಶೇ 70 ರಿಂದ 80 ರವರೆಗೆ ಆಗುತ್ತದೆ. ಇನ್ನು ಶೇ 20 ರಿಂದ 30 ಜನ ಮತದಾನಕ್ಕೆ ಬರುವುದಿಲ್ಲ. ಯಾಕೆ ಇವರಿಗೆ ಸರ್ಕಾರಗಳು ಬೇಡವೆ. ದೇಶದಲಿರುವ ಎಲ್ಲ ಸವಲತ್ತುಗಳು ಶೇ 100ರಷ್ಟು ಜನರಿಗೆ ಬೇಕು. ಮತದಾನ ಯಾಕೆ ಬೇಡ?

         ನಾವು ಬದಲಾಗಿ, ದೇಶದಲ್ಲಿ ಬದಲಾವಣೆ ಬಯಸೋಣ. ದೇಶವನ್ನು ಮತ್ತು ಸಮಾಜವನ್ನು ಶುದ್ಧಿ ಮಾಡೋಣ. ಎಲ್ಲರೂ ಮತದಾನ ಮಾಡೋಣ ಒಳ್ಳೆಯ ನಾಯಕರನ್ನು ಆರಿಸೋಣ. ದೇಶದಲ್ಲಿ ಅರಾಜಕತೆ, ಅಸಮಾನತೆ, ಅಭದ್ರತೆ ಇಲ್ಲದ ಭ್ರಷ್ಚಾಚಾರ ಮುಕ್ತ, ಸಂವಿಧಾನ ಬದ್ಧ ಸರ್ಕಾರವನ್ನು ತರೋಣ. ಸುಭದ್ರವಾದ ಸರ್ಕಾರ ರಚನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡೋಣ.
ಬಾಳೆಕಾಯಿ ಲಕ್ಷ್ಮೀಕಾಂತ್, ಕಾರ್ಯದರ್ಶಿ, ಕರವೇ, ಹುಳಿಯಾರು

ಮತದಾನದ ಮೂಲಕ ಯೋಗ್ಯರನ್ನು ಆರಿಸಿ

          ದೇಶದಲ್ಲಿ 18 ವರ್ಷ ತುಂಬಿದ ಪ್ರತಿ ವ್ಯಕ್ತಿಗೂ ಮೊದಲು ಸಿಗುವ ಮೂಲಭೂತ ಹಕ್ಕು ಮತದಾನ. ಇದರ ಮಹತ್ವ ಅರಿತವರು, ಜವಾಬ್ದಾರಿ ಇರುವವರು ಮತದಾನ ಮಾಡದೆ ಇರುವುದಿಲ್ಲ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜೆಗಳ ಮತ ಸ್ವೀಕರಿಸಿ, ಅದಕ್ಕೆ ಪೂರಕವಾಗಿ ಸರ್ಕಾರ ನಡೆಸಬೇಕೆಂಬುದು ಪ್ರಜಾತಂತ್ರದ ಮೂಲ ಆಶಯ.

          ಸರ್ಕಾರ ಜನಾಭಿಪ್ರಾಯದಂತೆ ನಡೆಯಬೇಕು. ಜನಕ್ಕೆ ಬೇಕಾದ ಆಹಾರ, ವಸತಿ, ಶಿಕ್ಷಣ, ನೀರು, ಔಷಧದಂತಹ ಮೂಲಸೌಕರ್ಯದ ಹಂಚಿಕೆಯನ್ನು ಸರ್ಕಾರವೇ ನಡೆಸಬೇಕು. ಈ ಹಿನ್ನೆಲೆಯಲ್ಲಿ ಆಯಾ ಪ್ರದೇಶದ ಪರವಾಗಿ ಮತದಾನದ ಮೂಲಕ ಯೋಗ್ಯ ಜನಪ್ರತಿನಿಧಿಗಳನ್ನು ಆರಿಸಿ ಸರ್ಕಾರ ನಡೆಸಲು ಕಳುಹಿಸುವ ಗುರುತರ ಜವಾಬ್ದಾರಿ ಜನರ ಮೇಲಿದೆ.

          ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರದಂತೆ ನಡೆಯಬೇಕೆಂಬುದು ಸಂವಿಧಾನದ ನಿಯಮ. ಜನವಿರೋಧಿ ಸರ್ಕಾರವನ್ನು ಅಧಿಕಾರದಿಂದ ದೂರವಿಡಲು ಮತದಾನ ಸಹಕಾರಿ. ಹೀಗೆ ಮತದಾನವು ಪ್ರಜೆಗಳಿಗೆ ಸರ್ಕಾರವನ್ನು ಸ್ಥಾಪಿಸುವ ಮತ್ತು ಅಧಿಕಾರದಿಂದ ಕೆಳಗಿಳಿಸುವ ಹಕ್ಕು ನೀಡಿದೆ. ಮುಕ್ತ ಮತ್ತು ನಿರ್ಭೀತ ಚುನಾವಣೆಯು ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣ. ಹೂವಿನ ಬಸವರಾಜು, ಅಧ್ಯಕ್ಷರು, ಫುಟ್‍ಪಾತ್ ವ್ಯಾಪಾರಿಗಳ ಸಂಘ, ಹುಳಿಯಾರು
 6 : ಹೂವಿನ ಬಸವರಾಜು,

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap