ಚಿತ್ರದುರ್ಗ
ಹಲವು ವರ್ಷಗಳಿಂದ ತೀವ್ರ ಬರಕ್ಕೆ ತುತ್ತಾಗಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿಯಿಂದ ಧಾರಾಕಾರವಾಗಿ ಮಳೆಯಾಗಿದೆ ಜಿಲ್ಲೆಯಲ್ಲಿ ತಡ ರಾತ್ರಿ ಮಳೆ ಆರ್ಭಟಿಸಿದೆ. ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ, ತಾಲೂಕುಗಳಲ್ಲಿ ವರುಣ ಭರ್ಜರಿಯಾಗಿ ಆರ್ಭಟಿಸಿದ್ದಾನೆ. ಹೊಸದುರ್ಗ ತಾಲೂಕಿನ ವಿವಿಧೆಡೆಯೂ ಭಾರೀ ಮಳೆ. ಕೋಡಿಹಳ್ಳಿ, ಬೆನಕನಹಳ್ಳಿ, ನಾಗತಿಹಳ್ಳಿ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕಿನಲ್ಲಿ ರಾತ್ರಿ ಸುರಿದ ಮಳೆಗೆ ಕೆರೆ, ಕಟ್ಟೆಗಳು ತುಂಬಿ ಹರಿದಿವೆ. ಹೊಸದುರ್ಗ ತಾಲೂಕಿನ ಕೆಲ್ಲೋಡು ಚೆಕ್ ಡ್ಯಾಂ ತುಂಬಿ ಹರಿಯುತ್ತಿದ್ದು ತರೀಕೆರೆ ಭಾಗದಲ್ಲಿ ಸಹ ಉತ್ತಮ ಮಳೆಯಾಗಿರುವುದರಿಂದ ವಿವಿ ಸಾಗರಕ್ಕೆ 75 ರಿಂದ 80 ಅಡಿ ನೀರು ಬರುವ ಸಾಧ್ಯತೆ ಇದೆ. ಹೊಸದುರ್ಗದ ಆಲದಹಳ್ಳಿ ದಲಿತ ಕಾಲೋನಿ ಗ್ರಾಮದಲ್ಲಿ 15 ಮನೆಗಳಿಗೆ ನೀರು ನುಗ್ಗಿದೆ. ದೇವಪುರ ಗ್ರಾಮಕ್ಕೆ ನೀರು ನುಗ್ಗಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ. ಅಜ್ಜಂಪುರ ಸಮೀಪ ರಸ್ತೆಯಲ್ಲಿ ನೀರು ಜೋರಾಗಿ ಹರಿಯುವುದರಿಂದ ಬಂಣಂತಿಯ ಹೆರಿಗೆಗೆ ತೆರಳಿದ್ದ ಅಂಬುಲೇನ್ಸ್ ಮುಂದೆ ಹೋಗಲು ಪರಾದಡಾಬೇಕಾಯಿತು ಎಂದು ವರದಿಯಾಗಿದೆ.
ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕಿನಲ್ಲಿ ರಾತ್ರಿ ಸುರಿದ ಮಳೆಗೆ ಕೆರೆ,ಕಟ್ಟೆಗಳು ತುಂಬಿ ಹರಿಯುತ್ತಿದ್ದು ವಿವಿಧ ಹಳ್ಳಿಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಹೊಸದುರ್ಗ ತಾಲೂಕಿನ ಆಲದಹಳ್ಳಿ ದಲಿತ ಕಾಲೋನಿ ಗ್ರಾಮದಲ್ಲಿ 15 ಮನೆಗಳಿಗೆ ನೀರು ನುಗ್ಗಿದ್ದು ಯಾವುದೇ ಪ್ರಾಣಾ ಅಪಾಯವಾಗಿಲ್ಲ.
ಹೊಸದುರ್ಗ ತಾಲೂಕಿನಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ. ತುಂಬಿ ಹರಿಯುತ್ತಿರುವ ದೊಡ್ಡ ಕಿಟ್ಟದಹಳ್ಳಿ ಬಳಿಯ ಗುಂಡಿಹಳ್ಳ ಭೀಕರ ಬರದಿಂದ ತತ್ತರಿಸಿದ್ದ ಜನರಲ್ಲಿ ವರುಣಾಗಮನ ದಿಂದ ಸಂಭ್ರಮವಾದರೆ ಕೆಲವೆಡೆ ಮಳೆಯ ಅಬ್ಬರದಿಂದ ರಸ್ತೆ, ಮನೆಗಳು ಜಲಾವೃತ. ವೇದಾವತಿ ನದಿತುಂಬಿ ಹರಿಯುತ್ತಿರುವುದರಿಂದ ಕೆಲ್ಲೋಡು ಗ್ರಾಮದ ಬಳಿಯ ಸೇತುವೆಯಲ್ಲಿ ಜಲಾಧಾರೆಯ ಭೋರ್ಗರೆತ. ಆಲದಹಳ್ಳಿ ಗ್ರಾಮದಲ್ಲಿ 15 ಮನೆಗಳಿಗೆ ಹಾನಿಯಾಗಿದೆ. ಮಳೆ ಹಿನ್ನೆಲೆ ಹೊಳಲ್ಕೆರೆ ತಾಲೂಕು ಚನ್ನಸಮುದ್ರ ಗ್ರಾಮದ ಗಂಗಮ್ಮನಕೆರೆ ಕೋಡಿ ಬಿದ್ದಿದೆ ಹಾಗೂ ಕೆರೆಯ ಏರಿ ಒಡೆದಿದೆ. ಆದರೆ ನೀರು ಹಳ್ಳಕ್ಕೆ ಹರಿದ ಕಾರಣ ತಪ್ಪಿದ ಅನಾಹುತವಾಗಿದೆ. ಹಾನಿಗೊಳಾಗಾದ ಗ್ರಾಮಗಳಿಗೆ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಭೇಟಿ ನೀಡಿ ಪರೀಶಿಲಿಸಿದ್ದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಶೀಘ್ರ ಪರಿಹಾರದ ಭರವಸೆ ನೀಡಿ ಧೈರ್ಯ ಹೇಳಿದರು.
ನಾಯಕರಕಟ್ಟೆ ಗ್ರಾಮ ಬಳಿಯ 30 ಗುಡಿಸಲು ಜಲಾವೃತ ಹೊಳಲ್ಕೆರೆ ತಾಲೂಕಿನ ನಾಯಕರಕಟ್ಟೆ ಗ್ರಾಮ.ಮನೆ ನಿರ್ಮಾಣ ಯೋಜನೆ ಸಾಕಾರಗೊಳ್ಳದ ಹಿನ್ನೆಲೆ ಗುಡಿಸಲುಗಳಲ್ಲಿದ್ದ ಗೃಹೋಪಯೋಗಿ ವಸ್ತುಗಳು ನೀರುಪಾಲಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಗೃಹ ನಿರ್ಮಾಣ ಯೋಜನೆ ನೆನೆಗುದಿಗೆ ಬಿದ್ದಿದೆ.ಮನೆ ನಿರ್ಮಾಣದ ಸ್ಥಳದಲ್ಲಿ ಜನ ಗುಡಿಸಲು ನಿರ್ಮಿಸಿ ಕೊಂಡಿದ್ದರು. ಸುಡುಗಾಡು ಸಿದ್ಧ ಸಮುದಾಯದ ಜನರು ಇವರಾಗಿದ್ದು, ಈಗ ಅವರ ಗುಡಿಸಲುಗಳು ಜಲಾವೃತಗೊಂಡಿವೆ.
ಚತ್ರದುರ್ಗದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಹೊಳಲ್ಕೆರೆ ತಾಲ್ಲೂಕಿನ ಪಾಪೇನಹಳ್ಳಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದ ಶಾಲೆ ನೀರು ತುಂಬಿ ಕೆರೆಯಂತಾಗಿರುವ ಶಾಲಾ ಕೊಠಡಿಗಳಿಂದ ವಿದ್ಯಾರ್ಥಿಗಳು ನೀರನ್ನು ಹೊರ ತೆಗೆಯುತ್ತಿದ್ದರು ಸ್ಥಳಕ್ಕೆ ಧಾವಿಸದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ದೇವಾಪುರ ಬಳಿ ಪ್ರವಾಹಕ್ಕೆ ಸಿಲುಕಿದ್ದ ಇಬ್ಬರು ರೈತರ ರಕ್ಷಣೆ ಮಾಡಿದ್ದಾರೆ, ಹೊಸದುರ್ಗ ತಾಲೂಕಿನ ದೇವಾಪುರ ಗ್ರಾಮದ ದೇವಾಪುರ ಕೆರೆ ಕೋಡಿ ಬಿದ್ದಿದ್ದು ಜಮೀನಿನಲ್ಲಿ ಉಳಿದಿದ್ದ ಇಬ್ಬರು
ಮೆಕ್ಕೆಜೋಳ ಕಾಯಲು ಹೋಗಿದ್ದ ಇಬ್ಬರು ಪ್ರವಾಹಕ್ಕೆ ಸಿಲುಕಿದ್ದರು ಹಳ್ಳ ದಾಟಿ ಊರಿಗೆ ಬರಲಾಗದೆ ಜಮೀನಿನಲ್ಲಿ ಉಳಿದಿದ್ದರು ಅಗ್ನಿಶಾಮಕದಳ , ಸ್ಥಳೀಯರಿಂದ ಇಬ್ಬರ ರಕ್ಷಣೆ ಬೋಟ್ ಮೂಲಕ ದೇವಾಪುರದ ಕರಿಯಪ್ಪ ಮತ್ತು ಗಂಗಮ್ಮ ರಕ್ಷಣೆ ಮಾಡಿದ್ದಾರೆ. ಹೊಳಲ್ಕೆರೆ ತಾಲೂಕಿನ ಅರೆಹಳ್ಳಿ ಬಂಡೆಹಟ್ಟಿ ಗ್ರಾಮದ ದೇಗುಲಕ್ಕೆ ಹಾನಿಯಾಗಿದ್ದು ಐತಿಹಾಸಿಕ ಶ್ರೀ ಹರಿಹರೇಶ್ವರ ಸ್ವಾಮಿ, ವೀರಭದ್ರೇಶ್ವರ ಸ್ವಾಮಿ ದೇಗುಲಕ್ಕೆ ಹಾನಿ ದೇಗುಲದ ಅಂಕಣ ಗೋಡೆಗಳು, ಗೋಪುರಕ್ಕೆ ಹಾನಿ ದೇಗುಲ ಶೀಘ್ರ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರ ಆಗ್ರಹ ಮಾಡಿದ್ದಾರೆ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ವಿವಿದೆಡೆ ಜನಜೀವನ ಅಸ್ತವ್ಯಸ್ತ ಹಲವೆಡೆ ಮನೆಗಳಿಗೆ ಹಾನಿ, ತೋಟ, ಜಮೀನುಗಳಿಗೆ ನೀರುನುಗ್ಗಿ ಬೆಳೆಹಾನಿಯಾಗಿದೆ.
ಮಳೆ ಇಲ್ಲದೆ ಕಂಗೆಟ್ಟಿದ್ದ ಚಿತ್ರದುರ್ಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಸತತ ಮಳೆಯಾಗುತ್ತಿರುವು ದರಿಂದ ಹಿರಿಯೂರಿನ ವಿವಿ ಸಾಗರ ಜಲಾಶಯಕ್ಕೆ ನೀರು ಹರಿದು ಬಂದಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 71.30 ಅಡಿಯಾಗಿದೆ. ಈ ಹಿಂದೆ ಸುಮಾರು 61 ಅಡಿಯಷ್ಟು ನೀರಿತ್ತು. ಹೊಳಲ್ಕೆರೆ ತಾಲೂಕಿನಲ್ಲಿ ಮಳೆಯಾಗಿದ್ದು ಗುಂಡಿಹಳ್ಳ, ದೊಡ್ಡಕಿಟ್ಟದಹಳ್ಳಿ, ಮಾಡದಕೆರೆ ಇನ್ನಿತರ ಕಡೆ ಭರ್ಜರಿ ಮಳೆಯಾಗಿದ್ದು, ಗಂಗೆ ವಾಣಿವಿಲಾಸದ ಕಡೆ ಮುಖ ಮಾಡಿದ್ದಾಳೆ
ಚೆಕ್ ಡ್ಯಾಂ ಸುತ್ತಮುತ್ತ ಇರುವ ಬೋರ್‍ವೆಲ್‍ಗಳಿಗೆ ಇದರಿಂದ ಅನುಕೂಲವಾಗಲಿದ್ದು ಕೆಲವು ಕಡೆ ಬೋರ್ ವೆಲ್ ಗಳಲ್ಲಿ ಸೀಪೆಜ್ ಆಗಿರುವುದರಿಂದ ನೀರು ಹರಿದು ಬರುತ್ತಿದೆ. ನೀರಿಲ್ಲದೇ ಜಿಲ್ಲೆಯಲ್ಲಿ ತೋಟಗಳು ಒಣಗಿದ್ದವು, ಇರುವ ತೆಂಗು, ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೂಲಕ ನೀರು ಹಾಯಿಸಿ ಹರಸಹಾಸ ಪಡುತ್ತಿದ್ದರು. ಇದೀಗ ಉತ್ತಮ ಮಳೆಯಾಗಿರುವುದು ಎಲ್ಲರಲ್ಲೂ ಭರವಸೆ ಮೂಡಿಸಿದೆ.







