ವಿವಿಪ್ಯಾಟ್ ಪ್ರಾತ್ಯಕ್ಷಿಕೆ

ಹಾನಗಲ್ಲ :

    ನಮ್ಮ ದೇಶದ ಪ್ರಗತಿ ಪ್ರಜಾಪ್ರಭುತ್ವದ ಆಧಾರದಲ್ಲಿ ನಿರ್ಧಾರವಾಗುತ್ತದೆಯಲ್ಲದೆ, ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡಿದರೆ ಮಾತ್ರ ಉತ್ತಮ ವ್ಯಕ್ತಿಯ ಆಯ್ಕೆ ಮಾಡಲು ಸಾಧ್ಯ ಎಂದು ಹಾನಗಲ್ಲ ತಾಲ್ಲೂಕಿನ ಸೆಕ್ಟರ್ ಅಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ.ಬೇವಿನಮರದ ಮನವಿ ಮಾಡಿದರು.

    ತಾಲ್ಲೂಕಿನ ಇನಾಮಯಲ್ಲಾಪುರ ಮತ್ತು ಹನುಮಾಪುರ ಗ್ರಾಮಗಳಲ್ಲಿ ಮತದಾರರ ಸಭೆಯಲ್ಲಿ ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಮಾಡಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಮತದಾರರು ಮತದಾನದಿಂದ ದೂರವುಳಿವುದು, ಮತದಾನವನ್ನು ನಿರಾಕರಿಸುವುದು, ಉಪೇಕ್ಷಿಸುವುದು ಪ್ರಜಾಪ್ರಭುತ್ವ ವಿರೋಧಿಸಿದಂತೆ.

     ನಾವು ಜಗತ್ತಿನಲ್ಲಿಯೇ ದೊಡ್ಡದಾದ ಪ್ರಜಾಪ್ರಭುತ್ವವನ್ನು ಹೊಂದಿದ್ದೇವೆ. ಅದನ್ನು ರಕ್ಷಣೆ ಮಾಡಿಕೊಳ್ಳಬೇಕಾದರೆ ನಾವೆಲ್ಲಾ ಕಡ್ಡಾಯವಾಗಿ ಮತ ಚಲಾಯಿಸಬೇಕು. ನೌಕರ ವರ್ಗದವರು ತಮ್ಮ ತಮ್ಮ ವ್ಯಾಪ್ತಿಯ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಮನವೊಲಿಸಿ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಬಲಗೊಳಿಸಬೇಕು ಎಂದು ಸಲಹೆ ನೀಡಿದರು.

       ಕಲ್ಲಾಪುರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಾಯಕ್ಕ ಕೋಳಿ ಮಾತನಾಡಿ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ತಮ್ಮ ಸ್ವಂತ ವಿವೇಚನೆಯಿಂದ ಮತವನ್ನು ಚಲಾಯಿಸಬೇಕು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತದಾನ ಹೆಚ್ಚಾಗುವಂತೆ ಸಹಕರಿಸಬೇಕು ಎಂದು ಅಭಿಪ್ರಾಯಪಟ್ಟರು.

      ಸೆಕ್ಟರ್ ಅಧಿಕಾರಿ ಬಿ.ಎಂ.ಬೇವಿನಮರದ ನೆರೆದಿದ್ದ ಅಪಾರ ಸಂಖ್ಯೆಯ ಮತದಾರರಿಗೆ ಕಡ್ಡಾಯ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿಯನ್ನು ಭೋಧಿಸಿದರು ಮತ್ತು ಎಲ್ಲ ಮತದಾರರಿಗೆ ವಿವಿಪ್ಯಾಟ್ ಯಂತ್ರದ ಕುರಿತು ಪ್ರಾತ್ಯಕ್ಷಿಕೆ ಮಾಡುವ ಮೂಲಕ ಮತದಾನದ ಪ್ರಕ್ರಿಯೆಯನ್ನು ತಿಳಿಸಿ ಹೇಳಿದರು.

      ಸಿ.ಆರ್.ಪಿ. ಕುಮಾರ ಗೋಣಿಮಠ, ಮುಖ್ಯೋಪಾಧ್ಯಾಯರಾದ ಪಿ.ಆಯ್.ಬುಡ್ಡನವರ, ಸಿ.ಎಫ್.ಡೊಳ್ಳಿನ, ಬಿ.ಎಲ್.ಓ. ವಿ.ಆರ್.ಬುಳ್ಳಾಪುರ, ಆಶಾ ಕಾರ್ಯಕರ್ತೆರಾದ ಗೌರಮ್ಮ ಗುಡ್ಡೇರ, ರೇಣುಕಾ ಬಿದರಕೊಪ್ಪ, ಅಂಗನವಾಡಿ ಕಾರ್ಯಕರ್ತೆರಾದ ಶಿವಲೀಲಾ ಸೋಮಸಾಗರ, ಅನಿತಾ ಬಿದರಕೊಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರು, ಗ್ರಾಮಪಂಚಾಯತಿ ಸಿಬ್ಬಂದಿ ಅಬ್ದುಲ್‍ರಜಾಕ್ ಗೊಂದಿ, ಆನಂದ ಕುನ್ನೂರ, ಊರ ನಾಗರಿಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link