ಮಡಿವಂತಿಕೆ ಅಲ್ಲದ ಜನಪರ ಆರ್ಥಿಕತೆ ಬೇಕಾಗಿದೆ : ರಮೇಶ್ ಕುಮಾರ್

ಬೆಂಗಳೂರು:

    ‘ ಜನಪರ ಅರ್ಥ ವ್ಯವಸ್ಥೆಯಲ್ಲಿ ಪಾವಿತ್ರ್ಯತೆ ಇರಬೇಕು. ಅದು ಬಹಳ ಮುಖ್ಯ. ಈ ವ್ಯವಸ್ಥೆ ಇಷ್ಟು ಹಾಳಾಗಿ ಹೋಗಿರುವುದಕ್ಕೆ ಹಣದ ಬಗ್ಗೆ ಪಾವಿತ್ರ್ಯತೆ ಕಳೆದುಕೊಂಡಿರುವುದೇ ಕಾರಣ. ಹಾಗಾಗಿ ಈ ಪವಿತ್ರ ಆರ್ಥಿಕತೆ ಎಂದು ಕರೆದ ಈ ಪದಕ್ಕೆ ಅದಕ್ಕಾಗಿ ಈ ತರಹ ಒಂದು ಚಳುವಳಿ ಆರಂಭಿಸಿರೋದಕ್ಕೆ ನಾನು ತಲೆಭಾಗಿ ವಂದಿಸ್ತಿದ್ದೇನೆ’ ಎಂದು ಕರ್ನಾಟಕ ವಿಧಾನಸಭಾ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಮುಖಂಡ ಆರ್. ರಮೇಶ್ ಕುಮಾರ್ ಹೇಳಿದ್ದಾರೆ. ‘ಪವಿತ್ರ ಆರ್ಥಿಕತೆಗಾಗಿ’ ಪ್ರಸನ್ನ ಅವರು ಕೈಗೊಂಡ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ 2ನೇ ದಿನ ಅವರು ಭಾಗವಹಿಸಿ ಮಾತನಾಡಿದರು.

    ‘ಆರ್ಥಿಕ ಕ್ಷೇತ್ರದಲ್ಲಿ ಪಾವಿತ್ರ್ಯತೆ ಬೇಕು. ಹಾಗಂತ ಅದು ಮತ್ತೆ ಮಡಿವಂತಿಕೆ ಆಗಬಾರದು, ಜನಪರ ಆರ್ಥಿಕತೆ ಆಗಬೇಕಾಗಿದೆ. ಉತ್ಪಾದಕರು ಮತ್ತು ಬಳಕೆದಾರರ ಮಧ್ಯೆಯ ಅಂತರ ಕಡಿಮೆ ಆಗಬೇಕು. ಮಧ್ಯವರ್ತಿಗಳ ಹಾವಳಿ ಇಲ್ಲದ ಹಾಗೇ ಇದನ್ನು ಮೇಲೆತ್ತಬೇಕು. ನಾನಂತೂ ಈ ಚಳುವಳಿಗೆ ಕಾಯಾ ವಾಚಾ ಮನಸಾ ಜೊತೆಗಿದ್ದೇನೆ ‘ ಎಂದವರು ಸಂಪೂರ್ಣ ಬೆಂಬಲ ಸೂಚಿಸಿದರು.

    ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶರು ಗೋಪಾಲ ಗೌಡ ಅವರು 3ನೇ ದಿನ ಭಾಗವಹಿಸಿ ಮಾತನಾಡಿ, ‘ಮಾನವಹಕ್ಕುಗಳು ಮತ್ತು ಮನುಷ್ಯರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಎರಡೂ ಸರಕಾರಗಳು ಸೋತಿದ್ದಾವೆ.

     ಬಡತನ, ನಿರುದ್ಯೋಗ, ಅನಾರೋಗ್ಯ, ಪರಿಸರ ಹಾನಿ, ಸಂಪೂರ್ಣ ಕೆಳಗಿಳಿದ ದೇಶದ ಜಿಡಿಪಿ, ರೈತರ ಸರಣಿ ಆತ್ಮಹತ್ಯೆಗಳು, ಪ್ರಕೃತಿ ವಿಕೋಪಕ್ಕೊಳಗಾದ ಜಿಲ್ಲೆ ಹಾಗೂ ಜನರಿಗೆ ಇನ್ನೂ ತಲುಪದ ಪರಿಹಾರ ದಾರಿಗಳು ಇದೆಲ್ಲವನ್ನು ಗಮನದಲ್ಲಿರಿಸಿಕೊಂಡು ಸರಕಾರಗಳು ವರ್ತಿಸಬೇಕಿದೆ. ಗಾಂಧೀಜಿ ಮತ್ತು ಕಾರ್ಲ್ ಮಾರ್ಕ್ಸ್ ಅವರ ತತ್ವಾದರ್ಶಗಳ ನೆಲೆಯಲ್ಲಿ ಸಾಮಾನ್ಯ ಪ್ರಜೆಗಳ ಕೇಂದ್ರಿತವಾದ ಪಾಲಿಸಿಗಳನ್ನು ಮಾಡಬೇಕಿದೆ. ಜವಾಬ್ದಾರಿಯುತ ಸರಕಾರಗಳು ಇಲ್ಲಿ ಬಂದು ಈ ಸತ್ಯಾಗ್ರಹಕೆ ಪ್ರತಿಸ್ಪಂದನೆ ನೀಡಿ ‘ ಎಂದು ಕರೆ ನೀಡಿದರು.

     ಹಿರಿಯ ಚಿಂತಕಿ, ಬರಹಗಾರ್ತಿ ವಿಜಯಮ್ಮ, ಸಿಪಿಐಮ್ ಹಾಗೂ ಜೆಡಿಯು ಪಕ್ಷಗಳ ಮುಖಂಡರುಗಳು ಬಂದು ಜೊತೆಗಿದ್ದು ಬೆಂಬಲ ಸೂಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap