ಮೈಸೂರು:
ಮಾನ್ಯ ಮುಖ್ಯಮಂತ್ರಿಗಳು ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಂದು ಅಚ್ಚರಿಯ ಹೇಳೀಕೆ ನೀಡಿದ್ದಾರೆ ಅದೇ “ನಾನು ಮುಖ್ಯಮಂತ್ರಿ ನೀವು ಪೊಲೀಸರು” ಅನ್ನೋ ಅಂತರ ಬೇಡ. ನಾವೆಲ್ಲ ಒಂದೇ ಕುಟುಂಬದವರು. ನಾನು ನಿಮ್ಮ ಜೊತೆ ಇದ್ದೇನೆ ಅಂತ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಪೊಲೀಸರಿಗೆ ದೈರ್ಯ ತುಂಬಿದ್ದಾರೆ.
ನಗರದಲ್ಲಿ ಡಿವೈಎಸ್ಪಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಮುಲಾಜಿಗೆ ಒಳಗಾಗಬೇಡಿ. ಸ್ಥಳ ನಿಯುಕ್ತಿಗಾಗಿ ರಾಜಕಾರಣಿಗಳ ಮನೆ ಬಾಗಿಲು ಬಡಿಯಬೇಡಿ. ನೀವು ನಿಷ್ಠಾವಂತರಾಗಿದ್ದರೆ ಯಾವ ರಾಜಕಾರಣಿಗಳು ನಿಮ್ಮನ್ನು ಏನೂ ಮಾಡುವುದಕ್ಕೆ ಆಗುವುದಿಲ್ಲ. ಸರಕಾರ ಬರುತ್ತೆ ಹೋಗುತ್ತೆ. ಮುಖ್ಯಮಂತ್ರಿಗಳು ಬರುತ್ತಾರೆ ಹೋಗುತ್ತಾರೆ. ನೀವು ಮಾತ್ರ ಸುದೀರ್ಘವಾಗಿ ಕರ್ತವ್ಯದಲ್ಲಿ ಇರುತ್ತಿರಿ ಅಂತ ಸಲಹೆ ನಿಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
