ಮಧುಗಿರಿ:
ನಮ್ಮ ಜನಪ್ರಿಯ ಮುಖಂಡ ಕೆ.ಎನ್.ರಾಜಣ್ಣ ನವರ ವಿರುದ್ಧ ತುಮಕೂರಿನಲ್ಲಿ ಜೂನ್ 11ರಂದು ಕೆಲವರು ಹಮ್ಮಿಕೊಂಡಿರುವ ಪ್ರತಿಭಟನೆಗೆ ನಮ್ಮ ಬೆಂಬಲವಿಲ್ಲ ಎಂದು ತಾಲ್ಲೂಕು ಮಾದಿಗ ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಪಟ್ಟಣ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ತಾಲ್ಲೂಕು ಮಾದಿಗ ಸಮುದಾಯ ಹಾಗೂ ಕೆ.ಎನ್.ಆರ್ ಸ್ವಾಭಿಮಾನಿ ಅಭಿಮಾನಿಗಳ ವತಿಯಿಂದ ಪತ್ರಿಕಾ ಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಪ್ಪ ಮಾತನಾಡಿ ಈ ಹಿಂದೆ ಜಿಲ್ಲೆಯಲ್ಲಿ ನಡೆದ ಕೆಲವರು ಕೆ.ಎನ್.ಆರ್ ವಿರುದ್ದ ಪತ್ರಿಕಾ ಗೋಷ್ಠಿಗಳಲ್ಲಿ ಇಲ್ಲಾ ಸಲ್ಲದ ಆರೋಪಗಳನ್ನು ಮಾಡಿ ಅಪಪ್ರಚಾರ ಮಾಡಿರುವುದು ಸತ್ಯಕ್ಕೆ ದೂರವಾದದ್ದು ರಾಜಣ್ಣನವರು ಶಾಸಕರಾಗಿದ್ದ ಅವಧಿಯಲ್ಲಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಸಮೂದಾಯ ದ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾಗ ಕೆ.ಎನ್.ರಾಜಣ್ಣ ನವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತ ಪಡಿಸಿ ನಿಮಗೆ ಪೂರಕವಾಗಿ ಇರುತ್ತೇನೆ ಹಾಗೂ ಸದನದಲ್ಲಿ ಈ ಬಗ್ಗೆ ಚರ್ಚಿಸುತ್ತೇನೆಂದು ಹೇಳಿ ನಮಗೆ ಬಲ ನೀಡಿದ್ದರು. ರಾಜಣ್ಣನವರು ವ್ಯಕ್ತಿ ಅಲ್ಲ ಅವರು ನಮ್ಮ ಸಮುದಾಯದ ಶಕ್ತಿಯಾಗಿದ್ದು ನಮ್ಮ ಸಮುದಾಯದವರು ಅವರ ಜೊತೆಯಲ್ಲಿದ್ದು ಒಗಟ್ಟಿನಿಂದ ಬೆಂಬಲಿಸುತ್ತೇವೆ ಎಂದರು.
ತಾಪಂ ಸದಸ್ಯ ಸೊಸೈಟಿ ರಾಮಣ್ಣ ಮಾತನಾಡಿ ನಮ್ಮ ಸಮುದಾಯಕ್ಕೆ ಅವರ ಕೊಡುಗೆ ಅಪಾರ ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡುವಲ್ಲಿ ಸಹಕರಿಸಿದ್ದಾರೆ. ಆದರೆ ಇಲ್ಲಿನ ಶಾಸಕ ನಮ್ಮ ಸಮೂದಾಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ನಾವೆಲ್ಲಾ ರಾಜಣ್ಣನವರ ಅಭಿಮಾನಿಗಳೆಂದು ಸಭೆ ಸಮಾರಂಭಗಳನ್ನು ನಡೆಸಲು ಅನುಮತಿ ನೀಡುತ್ತಿಲ್ಲಾ ಎಂದು ಆರೋಪಿಸಿ ನಾವೆಲ್ಲಾ ರಾಜಣ್ಣನವರಿಗೆ ಶಕ್ತಿಯಾಗಿ ನಿಲ್ಲುತ್ತೆವೆಂದರು.
ಮುಖಂಡ ದೊಡ್ಡೇರಿ ಕಣಿಮಯ್ಯ ಮಾತನಾಡಿ ಈ ಹಿಂದೆ ಇಲ್ಲಿ ನಮ್ಮವರೆ ಮೂರು ಬಾರಿ ಸಚಿವರಾಗಿ ಕೆಲವರು ಶಾಸಕರಾಗಿ ಅಧಿಕಾರ ಅನುಭವಿಸಿದ್ದಾರೆ ಆದರೆ ಇವರ್ಯಾರು ನಮ್ಮ ಸಮದಾಯವನ್ನು ಸ್ವತಂತ್ರ ಪೂರ್ವದಿಂದಲೂ ಗುರುತಿಸಿಲ್ಲ. ಈ ಮೊದಲು ನಮ್ಮ ಕಾಲೋನಿಗಳಲ್ಲಿ ಮೊದಲು ಶುಚಿತ್ವವೇ ಇರುತ್ತಿರಲಿಲ್ಲಾ ರಾಜಣ್ಣನವರು ಶಾಸಕರಾಗಿ ಆಯ್ಕೆಯಾದ ಮೇಲೆ ಹೆಚ್ಚಾಗಿ ಕಾಲನಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಕೆ.ಎನ್ ರಾಜಣ್ಣನವರು ಸರಕಾರದ ನೆರವಿನೊಂದಿಗೆ ಕ್ಷೇತ್ರವನ್ನು ಅಭಿವೃದ್ದಿ ಪಡಿಸಿದ್ದಾರೆ ನಮ್ಮ ಸಮುದಾಯಕ್ಕೆ ಹೆಚ್ಚು ಹೊತ್ತು ನೀಡಿದ್ದಾರೆ ನಾವು ಮತ್ತು ಇತರೆ ಸಮೂದಾಯವರು ಸೇರಿ ರಾಜಣ್ಣನವರ ಪರವಾಗಿ ಮುಂದಿನ ದಿನಗಳಲ್ಲಿ ಜನಾಂದೊಲನ ನಡೆಸಲಾಗುವುದು ಎಂದರು.
ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಸಿದ್ದಗಂಗಪ್ಪ ಮಾತನಾಡಿ ತುಮಕೂರಿನಲ್ಲಿ ಜೂ.11 ರಂದು ಕೆ.ಎನ್.ಆರ್ ವಿರುದ್ಧ ನಡೆಸಲಿರುವ ಪ್ರತಿಭಟನೆಗೆ ನಮ್ಮ ಸಮೂದಾಯದ ಬೆಂಬಲವಿಲ್ಲ ಎಂದರು.
ಪತ್ರಿಕಾಗೋಷ್ಟಿಯಲ್ಲಿ ತಾಪಂ ಸದಸ್ಯ ರಾಮಣ್ಣ. ಮಾಜಿ ತಾಪಂ ಉಪಾಧ್ಯಕ್ಷ ಜಿ.ನರಸಿಂಹಯ್ಯ, ಮಾಜಿ ತಾಪಂ ಸದಸ್ಯ ನರಸಿಂಹಯ್ಯ, ಶಂಕರಪ್ಪ. ವಿ.ಎಸ್‍ಎಸ್‍ಎನ್ ಅಧ್ಯಕ್ಷ ಗರಣಿ ದೇವರಾಜು. ಮುದ್ದರಾಜು. ಪ್ರೆಸ್ ಕಂಬಣ್ಣ. ನಾರಾಯಣಪ್ಪ. ನಾಗರಾಜು. ಸಂಜೀವಯ್ಯ. ತುಂಗೋಟಪ್ಪ, ಬಿಜವಾರ ಮೂರ್ತಿ, ಬಸವನಹಳ್ಳಿ ನಾಗರಾಜು, ರಂಗಶ್ಯಾಮಣ್ಣ. ಪಾಂಡು. ಭೀಮಣ್ಣ. ಸದಾಶಿವು ರಂಗನಾಥ್ ಸರಿದಂತೆ ನೂರಾರು ಕಾರ್ಯಕರ್ತರು ಇದ್ದರು.