ನೀರಿನ ಘಟಕ ಅವ್ಯವಹಾರ : ಸದನ ಸಮಿತಿ ರಚಿಸಲು ಸಿದ್ದ

ಬೆಂಗಳೂರು:

    ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಹಾರ ಪ್ರಕರಣ ಸಂಬಂಧ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಅಗತ್ಯ ಬಿದ್ದರೆ ಸದನ ಸಮಿತಿಯನ್ನು ರಚಿಸಲೂ ಸಿದ್ದವಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಸದನಕ್ಕೆ ಭರವಸೆ ನೀಡಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರಘುನಾಥ್ ಮಲ್ಕಾಪುರೆ ಸಾವಿರಾರು ಕೋಟಿ ರೂ.ಖರ್ಚು ಮಾಡಿ ಆರಂಭಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ಹಾಳಾಗಿದ್ದು ಸರ್ಕಾರ ಈ ಬಗ್ಗೆ ಕೈಗೊಂಡ ಕ್ರಮಗಳೇನು ಎಂದು ಪ್ರಶ್ನಿಸಿದರು.

    ಇದಕ್ಕೆ ಉತ್ತರಿಸಿದ ಸಚಿವ ಕ.ಎಸ್.ಈಶ್ವರಪ್ಪ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಿರುವ 17154 ನೀರು ಶುದ್ದೀಕರಣ ಘಟಕಗಳ ಪೈಕಿ 12602 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 4552 ನೀರು ಶುದ್ದೀಕರಣ ಘಟಕಗಳು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವುದಿಲ್ಲ. ಕೆ.ಆರ್.ಐ.ಡಿ.ಎಲ್. ಸಂಸ್ಥೆರವರು ಅನುಷ್ಠಾನಗೊಳಿಸಿರುವ ನೀರು ಶುದ್ದೀಕರಣ ಘಟಕಗಳ ನಿರ್ವಹಣೆಗಾಗಿ ನೀಡಿದ ವಾರ್ಷಿಕ ನಿರ್ವಹಣೆ ಗುತ್ತಿಗೆಯು 2019 ಆಗಸ್ಟ್ 31 ಕ್ಕೆ ಕೊನೆಗೊಂಡಿದ್ದು, ಆ ಘಟಕಗಳ ನಿರ್ವಹಣೆಗಾಗಿ ನಿಯಮಾನುಸಾರದಂತೆ ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯಲಾಗಿದೆ, ಟೆಂಡರ್‍ನಲ್ಲಿ ಅನುಮ ಗುತ್ತಿಗೆದಾರರಿಗೆ ಸದರಿ ಘಟಕಗಳನ್ನು ಮುಂದಿನ 5 ವರ್ಷಗಳ ನಿರ್ವಹಣೆಗಾಗಿ ಹಸ್ತಾಂತರ ಮಾಡಲು ಕ್ರಮವಹಿಸಲಾಗಿದೆ ಕ್ರಮವಹಿಸಲಾಗಿದೆ ಎಂದರು

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಟೆಂಡರ್ ಮೂಲಕ ಕೆಆರ್‍ಐಡಿಎಲ್ ಸಂಸ್ಥೆ ಮೂಲಕ ಸಹಕಾರ ಸಂಘ,ಸಂಸ್ಥೆ ಮುಖೇನ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಇತರೆ ಅನುದಾನದಲ್ಲಿ ಅನುಷ್ಠಾನಗೊಳಿಸಿರುವ ಘಟಕಗಳ ಪೈಕಿ, ನಿರತವಹಣೆ ಅವದಿ ಮುಗಿದಿರವ ಇಲ್ಲವೇ ಸಮಸ್ಯೆ ಇರುವ 8142 ಘಟಕಗಳನ್ನು 134 ಪ್ಯಾಕೇಜ್ ಮಾಡಿ ಜಿಲ್ಲಾ ಮಟ್ಟದಲ್ಲಿ ನಿಯಮಾನುಸಾರ 2020 ರ ಫೆಬ್ರವರಿ 28 ರ ಮಾಹಿತಿ ಪ್ರಕಾರ 7312 ನೀರು ಶುದ್ದೀಕರಣ ಅನುಮೋದನೆಯಾದ ಟೆಂಡರ್‍ನಲ್ಲಿ ಮುಂದಿನ 5 ವರ್ಷಗಳ ನಿರ್ವಹಣೆಗಾಗಿ ಹಸ್ತಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

   ಇದಕ್ಕೆ ತೃಪ್ತರಾಗದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು,ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ ಗುತ್ತಿಗೆಯನ್ನು ಯಾವುದೋ ಕಂಪನಿಗೆ ನೀಡುವ ಬದಲು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ನೀಡುವಂತೆ ಹಾಗು ಘಟಕ ಸ್ಥಾಪನೆಗೆ ಶಾಸಕರ ಅನುದಾನ ಬಳಸಿಕೊಳ್ಳಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.

    ಪಕ್ಷಾತೀತವಾಗಿ ಸದಸ್ಯರಿಂದ ಬಂದ ಬೇಡಿಕೆಯನ್ನು ಪರಿಗಣಿಸಿದ ಸಚಿವ ಕೆ.ಎಸ್ ಈಶ್ವರಪ್ಪ,ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತದೆ, ಘಟಕ ನಿರ್ವಹಣೆ ಅವ್ಯವಹಾರ ಆರೋಪ ಕುರಿತ ಘಟಕೆ ಸಂಬಂಧ ವರದಿ ಬರುತ್ತಿದ್ದಂತೆ ತಪ್ಪಿತಸ್ಥ ರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಅಗತ್ಯ ಬಿದ್ದರೆ ಸದನ ಸಮಿತಿ ಮಾಡಲೂ ನಾವು ಸಿದ್ದ ಇದ್ದೇವೆ ಎಂದು ಸದನಕ್ಕೆ ಭರವಸೆ ನೀಡಿದರು.

    ಇನ್ನು ನೀರಿನ ಘಟಕಗಳ ನಿರ್ಮಾಣ, ನಿರ್ವಹಣೆ ಗುತ್ತಿಗೆ ನೀಡುವ ಕುರಿತು ಖುದ್ದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ, ಶೇ.50 ರ ಸಹಭಾಗಿತ್ವದಲ್ಲಿ ಘಟಕಗಳ ಸ್ಥಾಪನೆ ಮಾಡಿ 15 ವರ್ಷ ನಿರ್ವಹಣೆ ಮಾಡುವ ಗುತ್ತಿಗೆ ಅವರಿಗೇ ನೀಡಿವ ಕುರಿತು ವೀರೇಂದ್ರ ಹೆಗ್ಗಡೆಯವರ ಜೊತೆ ಮಾತುಕತೆ ನಡೆಸಲಿದ್ದೇನೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap