ಬಳ್ಳಾರಿ
2030ರೊಳಗೆ ದೇಶದಲ್ಲಿ ಏಡ್ಸ್ ರೋಗ ಸಂಪೂರ್ಣ ನಿವಾರಣೆ ಮಾಡುವುದಕ್ಕೆ ಕಂಕಣಬದ್ಧರಾಗೋಣ. ಇದುವರೆಗೂ ಏಡ್ಸ್ ಪೀಡಿತರಾಗಿ ದಹನೀಯ ಬದುಕು ಸಾಗಿಸುತ್ತಿರುವವರನ್ನು ಕೂಡ ಸಮಾಜದ ಮುಖ್ಯ ವಾಹಿನಿಗೆ ತರುವುದಕ್ಕೆ ಶ್ರಮಿಸೋಣ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ ಕುಮಾರ ಹೇಳಿದರು
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ಕಾರ, ಸಂಘ-ಸಂಸ್ಥೆಗಳು ಹೆಚ್‍ಐವಿ ಸೊಂಕಿನ ಕುರಿತು ಪ್ರತಿಯೊಬ್ಬರಲ್ಲಿ ಅರಿವು ಮೂಡಿಸುತ್ತಿರುವುದರಿಂದ ಹೆಚ್‍ಐವಿ ಸೊಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗಿದೆ. ಈ ಜಾಗೃತಿ ಕಾರ್ಯಕ್ರಮವನ್ನು ಇನ್ನಷ್ಟು ದ್ವಿಗುಣಗೊಳಿಸಿ ಏಡ್ಸ್ ಮುಕ್ತ ದೇಶವಾಗಿಸೋಣ ಅವರು ಹೇಳಿದರು.
ಶಾಸಕ ಜಿ.ಸೋಮಶೇಖರಡ್ಡಿ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ 1988ರಲ್ಲಿ ಮೊದಲ ಬಾರಿಗೆ ಹೆಚ್‍ಐವಿ ಸೊಂಕಿತ ರೋಗಿಯನ್ನು ಪತ್ತೆ ಹಚ್ಚಲಾಯಿತು. ಅದಾದ ಬಳಿಕ ಎಚ್‍ಐವಿ ಸೊಂಕು ವ್ಯಾಪಕವಾಗಿ ಹರಡಿದ್ದರಿಂದ ಈಚೆಗೆ ಜಾಗೃತಿ, ರೋಗ ನಿವಾರಕಾ ಕ್ರಮಗಳನ್ನು ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ತ್ವರಿತವಾಗಿ ಹಮ್ಮಿಕೊಂಡಿದ್ದರಿಂದ ಹೆಚ್‍ಐವಿ ಪೀಡಿತರ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದ ಅವರು ಜಿಲ್ಲೆಯು 11ನೇ ಸ್ಥಾನವನ್ನು ಪಡೆದುಕೊಂಡಿದೆ ಮುಂದಿನ ದಿನಗಳಲ್ಲಿ ಕೊನೆಯ ಸ್ಥಾನಕ್ಕೆ ಇಳಿಮುಖವಾಗಬೇಕು ಎಂದರು. ಈ ಏಡ್ಸ್ ಮಹಾಮಾರಿ ಕುರಿತು ವ್ಯಾಪಾಕ ಪ್ರಚಾರ ಮಾಡಬೇಕು ಎಂದರು.
ಇದೇ ವೇಳೆ ಹೆಚ್‍ಐವಿ ಸೊಂಕಿನಿಂದ ನಿವಾರಣೆಯಾದ ಹಲವು ಮಹಿಳೆಯರು ತಮ್ಮ ಜೀವಾನುಭವ ಹಂಚಿಕೊಂಡು, ಜೀವನದಲ್ಲಿ ಹೆಚ್‍ಐವಿ ಸೊಂಕು ಬಂದರೇ ಎದೆಗುಂದದಿರಿ, ಸರಿಯಾದ ಚಿಕಿತ್ಸೆಯಿಂದ ಪಡೆಯುವುದರಿಂದ ಹೆಚ್‍ಐವಿ ಸೊಂಕಿನಿಂದ ನಿವಾರಣೆಯಾಗಬಹುದು ಎಂದರು.
ಏಡ್ಸ್ ಜಾಗೃತಿಗಾಗಿ ಸಮುದಾಯಗಳು ಬದಲಾವಣೆಯನ್ನುಂಟು ಮಾಡುತ್ತದೆ ಎನ್ನುವ ಘೋಷವಾಕ್ಯದೊಂದಿಗೆ ವಿವಿಧ ಕಲಾತಂಡಗಳಿಂದ ಪ್ರದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಪಂ ಸಿಇಒ ಕೆ.ನೀತೀಶ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಡಿಹೆಚ್‍ಒ ಡಾ.ಜನಾರ್ಧನ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರಡ್ಡಿ ಸೇರಿದಂತೆ ಮತ್ತಿತರರು ಇದ್ದರು.
ವಿಶ್ವ ಏಡ್ಸ್ ದಿನ ಆಚರಣೆ ಅಂಗವಾಗಿ ಜಾಥಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರಿನ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಬುಧುವಾರದಂದು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಜಾಥಾ ಕಾರ್ಯಕ್ರಮಕ್ಕೆ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಚಾಲನೆ ನೀಡಿದರು.
ಈ ಮೆರವಣಿಗೆಯು ಜಿಲ್ಲಾಸ್ಪತ್ರೆಯಿಂದ ಆರಂಭವಾಗಿ ಎಚ್.ಆರ್.ಗವಿಯಪ್ಪ ವೃತ್ತ ಮುಖಾಂತರ ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ನಡೆಯಿತು. ಏಡ್ಸ್ ರೋಗದ ಕುರಿತು ಅರಿವು ಮೂಡಿಸುವ ಫಲಕಗಳು ಮೆರವಣಿಗೆಯಲ್ಲಿ ಗಮನಸೆಳೆದವು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಬೆಂಗಳೂರಿನ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿಯ ಯೋಜನಾ ನಿರ್ದೇಶಕ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಪಂ ಸಿಇಒ ನಿತೀಶ್.ಕೆ, ಬೆಂಗಳೂರಿನ ಎನ್.ಹೆಚ್.ಎಮ್ ಅಪರ ನಿರ್ದೇಶಕ ಡಾ.ಬಿ.ಎಸ್. ಪಾಟೀಲ್, ಡಬ್ಲ್ಯೂಹೆಚ್‍ಒ ಕರ್ನಾಟಕ ಉಪಕ್ಷೇತ್ರ ಅಧಿಕಾರಿ ಡಾ.ಲೋಕೇಶ್ ಅಲಹರಿ ಸೇರಿದಂತೆ ಇತರೆ ವೈದ್ಯಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು, ಶಾಲಾಮಕ್ಕಳು ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ