ವಾಲ್ಮೀಕಿ ಜಯಂತಿಯಾಚರಣೆಯಷ್ಟೆ ಸಾಲದು : ಶೇ. 7.5 ಮೀಸಲಾತಿ ನೀಡದಿದ್ದರೆ ಹೋರಾಟ

ಪಾವಗಡ

     ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥ ಹಿಂದೂ ಧರ್ಮದ ಅತ್ಯನ್ನುತ ಸಾರ್ವಕಾಲಿಕ ಮಹಾಗ್ರಂಥವಾಗಿದೆ ಎಂದು ತಹಸೀಲ್ದಾರ್ ವರದರಾಜು ಅಭಿಪ್ರಾಯಪಟ್ಟರು.

ಚೇ      ಪಟ್ಟಣದ ತಹಸೀಲ್ದಾರ್ ಕರಿಯ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ವಾಲ್ಮೀಕಿ ಜಾಗೃತಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ವಾಲ್ಮೀಕಿ ರಾಮಾಯಣದಲ್ಲಿ 24 ಸಾವಿರ ಶ್ಲೋಕಗಳಿದ್ದು, ಈ ಶ್ಲೋಕಗಳ ಮಹತ್ವ ಅರಿಯಲು ಸಾರ್ವಜನಿಕರು ಮುಂದಾಗಬೇಕಿದೆ. ಮನುಷ್ಯನಿಗೆ ಬೇಕಾದ ಮಾನವೀಯ ಮೌಲ್ಯಗಳಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ರಾಮರಾಜ್ಯದ ಪರಿಕಲ್ಪನೆ ಬಂದಿದ್ದು ವಾಲ್ಮೀಕಿ ರಾಮಾಯಣದಿಂದ ಎಂದರು.

      ಮದಕರಿ ಸೇನೆ ತಾ. ಅಧ್ಯಕ್ಷ ಡಾ. ಓಂಕಾರ್ ನಾಯಕ ಮಾತನಾಡಿ,ಸರ್ಕಾರ ಪ್ರತಿವರ್ಷ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದೆ. ಆದರೆ ಶೇ.7.5 ಮೀಸಲಾತಿಯನ್ನು ನೀಡುವಂತೆ ಆಗ್ರಹಿಸುತ್ತಿದ್ದರೂ ಸರ್ಕಾರ ಕಿವಿಗೊಡುತ್ತಿಲ್ಲ. ಮೀಸಲಾತಿ ಜಾರಿಯಾಗಲು ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುತ್ತದೆ. ಈಗಲಾದರೂ ಸರ್ಕಾರ ಎಚ್ಚೆತ್ತು ವಾಲ್ಮೀಕಿ ಜನಾಂಗಕ್ಕೆ ಜಾತಿವಾರು ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.

       ಪುರಸಭಾ ಮುಖ್ಯಾಧಿಕಾರಿ ಜಿ. ನವೀನ್ ಚಂದ್ರ, ವಾಲ್ಮೀಕಿ ದೇವಸ್ಥಾನದ ಸಮಿತಿ ಅಧ್ಯಕ್ಷ ಡಿಸಿಸಿ ಸೀನಪ್ಪ, ಪುರಸಭಾ ಸದಸ್ಯರಾದ ಪಿ.ಎಚ್.ರಾಜೇಶ್, ಸುಬ್ರಹ್ಮಣಿ, ವಾಲ್ಮೀಕಿ ದೇವಸ್ಥಾನದ ಸಮಿತಿ ಖಜಾಂಚಿ ಕೆ.ಎನ್. ಈರಣ್ಣ, ವಿ.ಎಸ್.ಎಸ್.ಎನ್. ಕಾರ್ಯದರ್ಶಿ ನಾರಾಯಣಮೂರ್ತಿ, ವಾಲ್ಮೀಕಿ ಮುಖಂಡರಾದ ಗುಟ್ಟಹಳ್ಳಿ ಅಂಜಪ್ಪ, ಮುದ್ದರಂಗನಾಯಕ, ಆರ್‍ಎಂಸಿ ಸದಸ್ಯರಾದ ಮಾರಣ್ಣ, ಮಂಜುನಾಥ, ಶಿವಲಿಂಗನಾಯಕ, ತಾ.ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಮಹಿಳಾ ಮುಖಂಡರಾದ ರಂಗಮ್ಮ, ನಮ್ಮಹಕ್ಕು ಸಂಸ್ಥೆಯ ಗಿರಿ, ಕಸಬಾ ಆರ್.ಐ. ಬಸವರಾಜು, ಗ್ರಾಮಲೆಕ್ಕಿಗ ರಾಜಗೋಪಾಲ್, ಟಿ.ಎನ್. ಪೇಟೆ ರಮೇಶ್ ಮತ್ತಿತರರಿದ್ದರು.

        ಪಟ್ಟಣದ ಕುಮಾರಸ್ವಾಮಿ ಬಡಾವಣೆಯಲ್ಲಿರುವ ವಾಲ್ಮೀಕಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ತಹಸೀಲ್ದಾರ್ ಕಾರ್ಯಕ್ರಮ ನಡೆಯಿತು. ತಿರುಮಣಿ ಸರ್ಕಾರಿ ಕಾಲೇಜು ಸೇರಿದಂತೆ ಪಟ್ಟಣದ ಪುರಸಭಾ ಕಾರ್ಯಾಲಯ,  ಲೋಕೋಪಯೋಗಿ ಇಲಾಖೆ, ಜಿ.ಪಂ. ಮತ್ತಿತರ  ಹಾಗೂ ತಾಲ್ಲೂಕಿನ ಶಾಲಾ ಕಾಲೇಜುಗಳಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link