ತಿಪಟೂರು :
ಅಂಗನವಾಡಿ, ಶಾಲೆಗಳ ಮಧ್ಯಾನ್ನದ ಬಿಸಿಯೂಟ ಮತ್ತು ಪಡಿತರ ವ್ಯವಸ್ಥೆಯಲ್ಲಿ ಆಗುತ್ತಿರುವ ದೋಷವನ್ನು ಸರಿಪಡಿಸುವ ಸಲುವಾಗಿ ನಾವು ರಾಜ್ಯದಾದ್ಯಂತ ಸಂಚರಿಸುತ್ತಿದ್ದೇವೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ ಎನ್.ಕೃಷ್ಣಮೂರ್ತಿ ತಿಳಿಸಿದರು.
ನಾವು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುವ ಮೊದಲು ರಾಜ್ಯದಲ್ಲಿ ಸುಮಾರು 17 ಕೋಟಿಯಷ್ಟು ಪಡಿತರ ಆಹಾರ ಧಾನ್ಯಗಳು ಸುಮ್ಮನೇ ವ್ಯರ್ಥವಾಗುತ್ತಿದ್ದು ನಾವು ಇದನ್ನು ಸರಿಪಡಿಸಿ ಗೋದಾಮುಗಳಲ್ಲಿದ್ದ ಆಹಾರವನ್ನು ವ್ಯರ್ಥವಾಗುವುದನ್ನು ತಪ್ಪಿಸುತ್ತಿದ್ದೇವೆ. ಮತ್ತು ನಮ್ಮ ಮುಖ್ಯ ಉದ್ದೇಶ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಟಿ ಆಹಾರ ಸಿಗಬೇಕು, ಮದ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ದೊರಕಿ ಅವರು ಲವಲವಿಕೆಯಿಂದ ಇರಬೇಕೆನ್ನುವುದು ಮತ್ತು ಹೆಚ್ಚು ಅಪೌಷ್ಟಿಕತೆಯಿಂದ ಕೂಡಿರುವ ಮಕ್ಕಳಿಗೆ ಜಿಲ್ಲೆಯ ಎನ್.ಆರ್.ಸಿ ಕೇಂದ್ರಗಳಲ್ಲಿ 10ದಿನಗಳಿಗೆ ದಾಖಲಿಸಿಕೊಂಡು ಅವರ ತಾಯಿಗೆ ತರಬೇತಿ ನೀಡಲಾಗುವುದೆಂದು ತಿಳಿಸಿದರು. ನಾಗರಿಕ ಆಹಾರ ಸರಬರಾಜಿನಲ್ಲಿ ಏನಾದರು ಸಮಸ್ಯೆಗಳು ಸಂಭವಿಸಿದರೆ 1967ಗೆ ಕರೆಮಾಡಿ ದೂರುಸಲ್ಲಿಸಲು ತಿಳಿಸಿದರು
ಇತ್ತೀಚಿನ ದಿನಗಳಲ್ಲಿ ಶಾಲೆಗಳ ಮದ್ಯಾಹ್ನದ ಬಿಸಿಯೂಟದ ತಯಾರಿಯನ್ನು ಖಾಸಗಿಯವರಿಗೆ ಹಸ್ತಾಂತರಿಸುವ ಕುರಿತು ಚರ್ಚೆಯ ಬಗ್ಗೆ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಆಹಾರ ಆಯೋಗದ ಸದಸ್ಯರಾದ ವಿ.ಬಿ.ಪಾಟೀಲ್ ನಾವು ಇದರ ಬಗ್ಗೆ ಸಾಕಷ್ಟು ಚಚಿರ್ಸಿಸಿದ್ದು ಸ್ಥಳಿಯರಿಗೆ ಉದ್ಯೋಗವಾಕಾಶಗಳು ದೊರೆಯುತ್ತಿದ್ದು ಸ್ಥಳಿಯರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಕಾರಕ್ಕೆ ವರದಿ ಸಲ್ಲಿಸಿ ಶಿಫಾರಸ್ಸುಮಾಡಲಾಗುವುದೆಂದು ತಿಳಿಸಿದರು.
ಅಂಗನವಾಡಿಗೆ ಬೇಟಿ : ಇದೇ ಸಂದರ್ಭದಲ್ಲಿ ನಗರದ ನಾಲಬಂದ್ವಾಡಿ-ಎ ಮತ್ತು ಬಂಡಿಹಳ್ಳಿ ಅಂಗನವಾಡಿಗೆ ಬೇಟಿ ನೀಡಿ ಪರಿಶೀಲಿಸಿದ ಅವರು ಉತ್ತಮವಾಗಿ ನಿರ್ವಹಿಸಿದ್ದೀರಿ ಇದನ್ನೇ ಇನ್ನಷ್ಟು ಉತ್ತಮಗೊಳಿಸಿ ಎಂದು ಸಿ.ಡಿ.ಪಿ.ಓಗೆ ಸೂಚಿಸಿದರು.
ಭೇಟಿಯ ಸಂದರ್ಭದಲ್ಲಿ ಆಹಾರ ಆಯೋಗದ ಸದಸ್ಯರಾದ ಹೆಚ್.ವಿ.ಶಿವಶಂಕರ್, ಡಿ.ಜಿ.ಹಸಬಿ, ಬಿ.ಎ.ಮಹಮದ್‍ಅಲಿ, ಸ್ಮಜಾತ ಹೊಸಮನಿ, ಮಂಜುಳಾಬಾಯಿ, ತಿಪಟೂರು ಕ್ಷೇತ್ರ ಶಿಕ್ಪ್ಷಣಾಧಿಕಾರಿ ಮಂಗಳಗೌರಮ್ಮ, ಆಹಾರಾಧಿಕಾರಿ, ರಂಗಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ದಿನೇಶ್, ಹಿಂದುಳಿದ ವರ್ಗಕಲ್ಯಾಣಾಧಿಕಾರಿ ಜಯಸಿಂಹ, ಸಿ.ಡಿ.ಪಿ.ಓ ಓಂಕಾರಪ್ಪ ಮುಂತಾದ ಅಧಿಕಾರಿಗಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
