ಮೂಲಸೌಕರ್ಯ ಹಾಗೂ ಕಲ್ಯಾಣ ಕಾರ್ಯಗಳನ್ನು ರೂಪಿಸುವ ಆರ್ಥಿಕ ನೀತಿ ಬೇಕು

ಬೆಂಗಳೂರು
       
         ಶ್ರಮಕ್ಕೆ ಪ್ರತಿಫಲವಾಗಿರುವ ಅನ್ನ, ಮೂಲಸೌಕರ್ಯ ಹಾಗೂ ಕಲ್ಯಾಣ ಕಾರ್ಯಗಳನ್ನು ರೂಪಿಸುವ ಆರ್ಥಿಕ ನೀತಿ ಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ, ಹಣದ ಆರ್ಥಿಕ ನೀತಿ ಚಾಲ್ತಿಯಲ್ಲಿದ್ದು, ಹಣವನ್ನು ದುಪ್ಪಟ್ಟು ಮಾಡುವ ಕಾಲಚಕ್ರದಲ್ಲಿ ಸಿಲುಕಿದ್ದೇವೆ ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರು ಆತಂಕ ವ್ಯಕ್ತಪಡಿಸಿದರು.
       ಆನಂದ ರಾವ್ ವೃತ್ತದ ಕೆಇಬಿ ಸಭಾಂಗಣದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಆಯೋಜಿಸಿದ್ದ, ಖಾಯಮೇತರ ಕೆಲಸಗಳು-ಉದ್ಯೋಗದ ಹಕ್ಕು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದ ಅವರು ದೇಶದ ಅಭಿವೃದ್ಧಿಗೆ ‘ಅನ್ನ ಮೂಲ ಆರ್ಥಿಕ’ ನೀತಿ ತ್ವರಿತವಾಗಿ ರೂಪಿಸುವ ಅಗತ್ಯವನ್ನು ಪ್ರತಿಪಾದಿಸಿದರು.
         ಖಾಸಗೀಕರಣ ಮತ್ತು ಖಾಸಗಿ ಆಸ್ತಿ ಹಕ್ಕು  ಅನ್ನು ಸಂವಿಧಾನದಲ್ಲಿ ಒತ್ತು ನೀಡಬಾರದೆಂದು ಡಾ. ಬಿ.ಆರ್. ಅಂಬೇಡ್ಕರ್, ಜವಹರ್ ನೆಹರು ವಿರೋಧಿಸಿದ್ದರು.ಆದರೆ, ಇನ್ನಿತರರು ಮನ್ನಣೆ ನೀಡಿದ ಪರಿಣಾಮ, ನಾವು ಖಾಸಗೀಕರಣ ವ್ಯಾಪ್ತಿ ಹೆಚ್ಚಿಸಿಕೊಂಡು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ  ಎಂದು ಅವರು ಹೇಳಿದರು.
ಸಣ್ಣ ಕೈಗಾರಿಕೆ ನಾಶ
 
        ಕೇಂದ್ರ ಸರ್ಕಾರವು ದಿಢೀರ್ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದಿಂದ ದೇಶದಲ್ಲೆಡೆ, ಬರೋಬ್ಬರಿ, 2.30 ಲಕ್ಷ ಸಣ್ಣ ಕೈಗಾರಿಕೆಗಳು ನಾಶವಾಗಿದ್ದು, 70 ಲಕ್ಷ ಉದ್ಯೋಗ ಕಣ್ಮರೆಯಾಯಿತು. ಇದಕ್ಕೆ ಬೃಹತ್ ಬಂಡವಾಳಶಾಹಿಗಳು ಒಂದು ಕಾರಣವಾಗಿರುವುದು ಆರ್‍ಬಿಐ ಬಿಡುಗಡೆ ಮಾಡಿರುವ ವರದಿಯಲ್ಲಿ ಬಯಲಾಗಿದೆ ಎಂದು ನುಡಿದರು.
         ಶಿಕ್ಷಣ ಕ್ಷೇತ್ರದಲ್ಲಿಯೇ ದೇಶ ವ್ಯಾಪ್ತಿ 50ಲಕ್ಷ ಉದ್ಯೋಗ ಖಾಲಿ ಇದೆ. ಹಾಗಾಗಿ, ಕೇಂದ್ರ-ರಾಜ್ಯ ಸರ್ಕಾರಗಳೆರಡು, ಉದ್ಯೋಗ ನೀತಿ ರಚಿಸಬೇಕು.ಈ ನಿಟ್ಟಿನಲ್ಲಿ ಎಲ್ಲಾ ವಲಯದ ಅಸಂಘಟಿತ ಕಾರ್ಮಿಕರು ಹೋರಾಟ ನಡೆಸಬೇಕಾದ ಅಗತ್ಯತೆ ಇದೆ ಇತ್ತೀಚಿನ ಕಾಲಘಟ್ಟದಲ್ಲಿ ಮಾನವ ಶಕ್ತಿ ಕಡಿಮೆಗೊಳಿಸುವ ತಂತ್ರಜ್ಞಾನ ಬಳಕೆಗೆ ನಾವು ಮುಂದಾಗಿದ್ದೇವೆ. ಇದರ ಅರ್ಥ ನಾವು, ತಂತ್ರಜ್ಞಾನ, ಆಧುನಿಕತೆಯ ವಿರೋಧಿ ಅಲ್ಲ. ಇನ್ನೂ, ಖಾಸಗೀಕರಣ ಗಳಿಂದಲೇ ದೇಶ ಪ್ರಗತಿ ಸಾಧಿಸಲಿದೆ ಎನ್ನುವ ವಾದ ತಪ್ಪು ಎಂದು ತಿಳಿಸಿದರು.
ಗುತ್ತಿಗೆ ಕೆಲಸ ಬೇಸರ
 
           ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, 2001ರ ಐಎಲ್‍ಓ ವರದಿ ಅನ್ವಯ, ಜಗತ್ತಿನ ಮೂರರ ಒಂದರಷ್ಟು ಭಾಗ, ಶ್ರಮಿಕರು, ಯಾವುದೇ ಉದ್ಯೋಗ ಇಲ್ಲದೆ, ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಮಗ್ರ ವರದಿ ನೀಡಿತ್ತು. ಆದರೆ, ಸರ್ಕಾರಗಳು ಇದುವರೆಗೂ ಎಚ್ಚೆತ್ತುಕೊಂಡಿಲ್ಲ ಎಂದು ಹೇಳಿದರು.
           ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವ ಕರಡು ವರದಿ ಸಿದ್ದವಾಗಿದೆ.ಆದರೆ, ರಾಜ್ಯ ಸರ್ಕಾರ ಅಡಿಯಲ್ಲಿರುವ ನೌಕರರಿಗೆ ಪ್ರಯೋಜನ ಆಗಿಲ್ಲ ಎಂದ ಅವರು, ವಿಶ್ವವಿದ್ಯಾಲಯ, ಬೆಸ್ಕಾಂ ಸೇರಿದಂತೆ ಹತ್ತಾರು ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುತ್ತೀರುವುದು ಬೇಸರ ತಂದಿದೆ ಎಂದು ನುಡಿದರು.
       ವಿಚಾರ ಸಂಕಿರಣದಲ್ಲಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಎನ್.ಮೀನಾಕ್ಷಿ ಸುಂದರಮ್, ಪ್ರೊ.ಟಿ.ಆರ್.ಚಂದ್ರಶೇಖರ್,  ಹುಬ್ಬಳ್ಳಿ ಕಾನೂನು ವಿವಿಯ ಪ್ರಾಧ್ಯಾಪಕ ಡಾ.ಶರತ್ ಬಾಬು, ಕಾರ್ಮಿಕ ಮುಖಂಡ ವಿಜೆಕೆ ನಾಯರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap