ತಿಪಟೂರು
ಮುದ್ರಿತ ದಾಖಲೆಗಳನ್ನು ಓದುವುದಾರೆ ಈ ಸಭೆಯನ್ನು ಮಾಡುವುದೇತಕ್ಕೆ, ಇಲ್ಲಿಬಂದು ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಈಡೇರಿಸಬೇಕೆ ಹೊರತು 16 ಸಾವಿರ ಖರ್ಚುಮಾಡಿ, ಸಮಯವನ್ನು ಹಾಳುಮಾಡುವುದು ಬೇಡವೆಂದು ನೂತನ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಶಿವಸ್ವಾಮಿ ಅಧಿಕಾರಿಗಳ ಮೇಲೆ ಹರಿಹಾಯ್ದರು.
ನಗರದ ತಾಲ್ಲೂಕು ಪಂಚಾಯಿತಿ ನೂತನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಧಿಕಾರಿಗಳು ಬಾರದೇ ಇದ್ದುದ್ದಕ್ಕೆ ಬೇಸರಗೋಂಡಿದ್ದಲ್ಲದೆ ಅರಣ್ಯ ಇಲಾಖೆಯಿಂದ ಬಂದಂತಹ ಅಧಿಕಾರಿಗೆ ನಿಮ್ಮ ಮೇಲಧಿಕಾರಿ ಎಲ್ಲಿ ಎಂದು ಕೇಳಿದ್ದಕ್ಕೆ ಅವರು ಚೌಡಲಾಪುರ-ಭದ್ರಾಪುರದ ಹತ್ತಿರ ಗಿಡಗಳನ್ನು ಹಾಕಿಸಲು ಹೋಗಿದ್ದಾರೆಂದು ತಿಳಿದ್ದಕ್ಕೆ ಅಧ್ಯಕ್ಷರು ತಂತ್ರಜ್ಞಾನವು ಇಷ್ಟೊಂದು ಮುಂದುವರೆದಿದೆ ಅದನ್ನು ನಾವು ಬಳಸಿಕೊಳ್ಳಬೇಕು ಅವರ ಜಿ.ಪಿ.ಎಸ್ ಲೊಕೇಶಷನ್ ಕಳುಹಿಸು ಎಂದಾಗ ಅರಣ್ಯಾಧಿಕಾರಿ ತಡಬಡಾಯಿಸಿದ ಘಟನೆ ನಡೆಯಿತು ಮತ್ತು ಮುಂದಿನ ಬಾರಿ ನೋಟೀಸ್ ತಲುಪಿದ ತಕ್ಷಣವೇ ತಾವು ಬರಲು ಸಾಧ್ಯವಿಲ್ಲದಿದ್ದರೆ ಸೂಕ್ತ ಕಾರಣನೀಡಿ ಹಿಂಬರಹ ನೀಡಬೇಕು ಹಾಗೂ ತಮ್ಮ ಕಛೇರಿಯ ಮಾಹಿತಿಯನ್ನು ಸಭೆಗೆ 4 ದಿನ ಮುಂಚಿತವಾಗಿ ಕಳುಹಿಸಬೇಕೆಂದು ಅಧಿಕಾರಿಗಳಿಗೆ ತಾಕೀತುಮಾಡಿದರು.
ತಾಲ್ಲೂಕಿನಲ್ಲಿ ಭೀಕರ ಬರಗಾಲವಿದ್ದು ಜಾನುವಾರುಗಳಿಗೆ ಸಮರ್ಪಕವಾಗಿ ವಿತರಿಸಲಾಗುತ್ತಿಲ್ಲವೆಂದು ಇದಕ್ಕೆ ಇಲ್ಲಿರುವ ಅಧಿಕಾರಿಗಳು ಉತ್ತರಿಸಲಿ ಇಲ್ಲವಾದರೆ ತಹಸೀಲ್ದಾರ್ ಬರಬೇಕೆಂದು ತಾ.ಪಂ ಸದಸ್ಯ ನ್ಯಾಕೇನಹಳ್ಳಿ ಸುರೇಶ್ ಆಗ್ರಹಿಸಿದರು. ಇದಕ್ಕೆ ಸಂಬಂಧಿಸಿದಂತೆ ಸಬೆಗೆ ಆಗಮಿಸಿದ ತಹಸೀಲ್ದಾರ್ ಆರತಿ ನಾವು ಈಗಾಗಲೇ ಮೇವನ್ನು ವಿತರಿಸುತ್ತಿದ್ದು ಕಿಬ್ಬನಹಳ್ಳಿ ಮತ್ತು ನೊಣವಿನಕೆರೆ ಭಾಗದಲ್ಲಿ ಮೇವಿಗೆ ಕೊರತೆ ಇಲ್ಲವೆಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಮಾಡಿರುವ ಸರ್ವೆಇಂದ ತಿಳಿದುಬಂದಿದೆ ಅದಕ್ಕಾಗಿ ನಾವು ಹೆಚ್ಚು ಅವಶ್ಯಕತೆಇರುವ ಹೊನ್ನವಳ್ಳಿ ಮತ್ತು ಕಸಬಾ ಹೋಬಳಿಗೆ ನೀಡುತ್ತಿದ್ದೇವೆಂದು ಉತ್ತರಿಸಿದರು.
ಇದರ ಮಧ್ಯೆ ಅಕ್ರಮವಾಗಿ ಕೆರೆ, ಗೋಮಾಳ ಒತ್ತುವರಿಬಗ್ಗೆ ಪ್ರಶ್ನೆಬಂದಾಗ ಮದ್ಯೆಮಾತನಾಡಿದ ತಾಲ್ಲೂಕು ದಂಡಾಧಿಕಾರಿಗಳು ನಾವು ಪ್ರತಿ ವಾರದಲ್ಲಿ ಒಂದು ಪ್ರತಿ ಹೋಬಳಿಯ 2 ಕರೆಗಳನ್ನು ನೋಡಿ ಒತ್ತುವರಿಯನ್ನು ತೆರವುಗೊಳಿಸಲಾಗುವುದುದೆಂದ್ದಿಕ್ಕೆ ಕಂಚಾಘಟ್ಟ ಸರ್ವೇ ನಂ 108ರಲ್ಲಿ 4 ಎಕರೆ ಅತಿಕ್ರಮಿಸಿ ಅದಕ್ಕೆ ತಂತಿಬೇಲಿಯನ್ನು ಹಾಕಿದ್ದಾರೆಂದು ಸದಸ್ಯರು ಪ್ರಶ್ನಿಸಿದ್ದಕ್ಕೆ ಅದನ್ನು ಪರಿಶೀಲಿಸಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳುವುದಾಗಿ ದಂಡಾಧಿಕಾರಿಗಳು ತಿಳಿಸಿದರು.
ಮಾಹಿತಿಯನ್ನು ಸದಸ್ಯರ ಮನೆಯವರಿಗೆ ತಿಳಿಸಿದ್ದ್ದೆ ಜಯಪ್ಪ : ಕೃಷಿ ಇಲಾಖೆಯಿಂದ ನಮಗೆ ಸೂಕ್ತರೀತಿಯಲ್ಲಿ ಯಾವ ಯಾವ ಯೋಜನೆಯಲ್ಲಿ ಏನು ದೊರೆಯುತ್ತದೆ ಎಂದು ಮಹಿಳಾ ಸದಸ್ಯರು ಕೇಳಿದ್ದಕ್ಕೆ ಸಹಾಯಕ ಕೃಷಿ ನಿರ್ದೇಶಕ ಜಯಪ್ಪ ಇಲ್ಲ ನಾನು ನಿಮ್ಮ ಮನೆಯವರಿಗೆ ಕರೆಮಾಡಿತಿಳಿಸಿದ್ದೆನೆಂದು ಉತ್ತರಿದಾಗ ಮಹಿಳಾ ಸದಸ್ಯರು ಸುಮ್ಮನಾದರು.
ನಿದ್ದೆ ಮತ್ತು ಮೊಬೈಲ್‍ನಲ್ಲಿ ಕಾಲಕಳೆದ ಮಹಿಳಾ ಸದಸ್ಯರು : ಇನ್ನೂ ಹೊಸ ಸಭಾಂಗಣದಲ್ಲಿ ಹಾಕಿಸಿದ್ದ ಮೆತ್ತನೆಯ ಖುರ್ಚಿಯಲ್ಲಿ ಕುಳಿತದ್ದ ಸದಸ್ಯರುಗಳು ಬಿಸಿಬಿಸಿ ಚರ್ಚೆಯಲ್ಲಿ ತೊಡಗಿದ್ದರೆ, ಇನ್ನೂ ಮಹಿಳಾ ಸದಸ್ಯರು ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂದತೆ ಕೆಲವು ಮಹಿಳಾ ಮೊಬೈಲ್‍ನಲ್ಲಿ ತಲ್ಲೀನರಾದರೆ ಇನ್ನುಕೆಲವು ನಿದ್ದೆಗೆ ಜಾರಿದ್ದರು.
ಕಳೆದಬಾರಿಯು ಸಭೆಗೆ ಬಾರದ ಅಧಿಕಾರಿಗಳ ವಿರುದ್ದ ಏನು ಶಿಸ್ತುಕ್ರಮ ಜರುಗಿಸಿದ್ದಿರೆಂದು ಕೇಳಿದ್ದಕ್ಕೆ ಸದಸ್ಯರು ಕೇಳಿದ್ದಕ್ಕೆ ತಾ.ಪಂ ಪ್ರಭಾರ ಈ.ಓ ನಾನು ಕಳೆದ ಬಾರಿ ಇರಲಿಲ್ಲ ನಾನು ಬಂದಾಗ ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇನೆಂದು ಹೇಳಿದ್ದಕ್ಕೆ ಮಾಜಿ ಅಧ್ಯಕ್ಷ ಸುರೇಶ್ ಇದನ್ನು ಬಿಡಿ ಹಿಂದಿನವು ಏನು ಆದೇಶಮಾಡಿದ್ದಾರೆಂದಿದಾಗ ಆಗ ಆದೇಶಪುಸ್ತಕವನ್ನು ಹುಡಿಕಿತಂದ ತಾ.ಪಂ ಸಿಬ್ಬಂದಿಗಳು ತೋರಿಸಿದರು. ಆದರೆ ನಿರ್ಮಿತಿ ಕೇಂದ್ರ, ಸಣ್ಣ ನೀರಾವರಿ ಇಲಾಖೆ, ಮತ್ತು ಭೂಸೇನೆಗಳ ಅಧಿಕಾರಿಗಳು ಯಾವುದೇ ಸಭೆಗೆ ಬರುತ್ತಿಲ್ಲ ಅವರಿಗೆ ನೋಟೀಸ್‍ನೀಡಿ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ನಡಾವಳಿಪುಸ್ತಕದಲ್ಲಿ ಬರೆಯಿರಿ ಎಂದು ಎಲ್ಲಾ ಸದಸ್ಯರುಗಳು ಒಕ್ಕೊರಲಿನಿಂದ ಆಗ್ರಹಿಸಿದರು.
ಸಭೆಯಲ್ಲಿ ಕೇವಲ ಶಿಕ್ಷಣ, ಪಶುಸಂಗೋಪನೆ, ಪಂಚಾಯತ್‍ರಾಜ್, ಆಕ್ಷರದಾಸೋಹ, ಕೃಷಿಇಲಾಖೆಗಳ ವಿಷಯಮಂಡಿಸಿ ಮಿಕ್ಕ ಇಲಾಖೆಗಳನ್ನು ಹಾಗೆಯೇ ಬಿಟ್ಟು ಕಾಟಾಚಾರಕ್ಕೆ ಸಭೆ ನಡೆಸಿ ಸಭೆಯನ್ನು ಮುಕ್ತಾಯಗೊಳಿಸಿದರು.ಸಭೆಯಲ್ಲಿ ತಾ.ಪಂ ಪ್ರಭಾರ ಇ.ಒ ಸುನೀಲ್‍ಕುಮಾರ್, ಭೂಸೇನೆ, ನಿರ್ಮಿತಿ ಕೇಂದ್ರ, ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳನ್ನು ಬಿಟ್ಟು ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.