ನಿಷೇಧಾಜ್ಞೆಯ ಕುರಿತು ಕಾನೂನು ಬದ್ದತೆ ಪರಿಶೀಲನೆ ನಡೆಸಲಾಗುವುದು : ಹೈಕೋರ್ಟ್

ಬೆಂಗಳೂರು
   ರಾಜ್ಯದಲ್ಲಿ ಡಿ.19ರಿಂದ 21ರವರೆಗೆ ಸೆಕ್ಷನ್ 144 ವಿಧಿಸಿದರ ಕುರಿತು ಕಾನೂನು ಬದ್ಧತೆಯನ್ನು ಪರಿಶೀಲನೆ ನಡೆಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.
    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿದ್ದ ಪ್ರತಿಭಟನೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರದಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ನಿಷೇದಾಜ್ಞೆಯನ್ನು ಬಿಎಸ್ ಯಡಿಯೂರಪ್ಪ ಸರ್ಕಾರ ವಿಧಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಹೈ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈ ಕೋರ್ಟ್ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದೆ.
     ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಯನ್ನು ನಿಷೇಧಿಸುತ್ತೀರಾ. ಈ ಹಿಂದಿನ ಪ್ರಕ್ರಿಯೆಗಳ ಬಳಿಕ ಹೇಗೆ ನೀವು ನೀಡಿದ ಅನುಮತಿಯನ್ನು ರದ್ದುಗೊಳಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಪ್ರಶ್ನಿಸಿದ್ದಾರೆ.ಅಲ್ಲದೇ ಪ್ರತಿಭಟನೆ ನಡೆಸಲು ಪೆÇಲೀಸರು ಅವಕಾಶ ನೀಡಿದ್ದರಾ ಬಳಿಕ ಸೆಕ್ಷನ್  144 ಜಾರಿ ಮಾಡಲಾಗಿತ್ತಾ ಎಂಬ ಬಗ್ಗೆ ವರದಿ ನೀಡುವಂತೆ ಸಂಜೆ ನಾಲ್ಕು ಗಂಟೆಯೊಳಗೆ ವರದಿ ನೀಡುವಂತೆ ಅಡ್ವಕೇಟ್ ಜನರಲ್ ಅವರಿಗೆ ಕೋರ್ಟ್ ಸೂಚಿಸಿದೆ.
    ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಗಳು ಹಿಂಸಾತ್ಮಕವಾಗುತ್ತದೆ ಎಂಬ ಊಹೆ ಮೇಲೆ ಮುಂದುವರೆಯಲು ಸಾಧ್ಯವೇ? ಸರ್ಕಾರದ ನಿರ್ಧಾರದ ಬಗ್ಗೆ ಶಾಂತಿಯುತ ಪ್ರತಿಭಟನೆ ನಡೆಸಬಾರದೇ ಎಂದು ಇದೇ ವೇಳೆ ನ್ಯಾಯಾಮೂರ್ತಿಗಳು ಪ್ರಶ್ನಿಸಿದ್ದಾರೆ.
    ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯನ್ನು ಕಳೆದ ವಾರ ಸದನದಲ್ಲಿ ಪಾಸ್ ಮಾಡಿ ಕೇಂದ್ರ ಸರ್ಕಾರ ಅಂಗೀಕಾರಕ್ಕೆ ರಾಜ್ಯಪಾಲರಿಗೆ ಕಳುಹಿಸಿದೆ. ಈ ಕಾಯ್ದೆ ವಿರುದ್ಧ ಈಗ ದೇಶದ್ಯಾಂತ ವಿರೋಧ ವ್ಯಕ್ತವಾಗಿದ್ದು, ಜನರು ವಿದ್ಯಾರ್ಥಿಗಳು, ಪ್ರಗತಿಪರರು ಬೀದಿಗಳಿದು ಹೋರಾಟ ಮಾಡುತ್ತಿದ್ದಾರೆ.
    ಈಶಾನ್ಯ ರಾಜ್ಯ ಹಾಗೂ ದೆಹಲಿಯಲ್ಲಿ ಈ ಕಾಯ್ದೆ ವಿರುದ್ಧ ಹೊರಟದ ಕಿಚ್ಚು ಹೆಚ್ಚಾಗಿದ್ದು, ರಾಜ್ಯದಲ್ಲಿ ಕೂಡ ಗುರುವಾರದಿಂದ ಈ ಪ್ರತಿಭಟನೆ ಜೋರುಗೊಂಡಿದೆ.ಇದನ್ನು ಓದಿ: ಸಂವಿಧಾನ ಬದಲಾವಣೆ ಮಾಡಲು ಈ ಕಾಯ್ದೆ ಅಡಿಪಾಯ ; ಡಿಕೆ ಶಿವಕುಮಾರ್ ಆಕ್ರೋಶ. ನಿನ್ನೆ ನಗರದ ಟೌನ್ ಹಾಲ್ ಎದುರು ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಸೇರಿದಂತೆ ಇತಿಹಾಸತಜ್ಞ ರಾಮಚಂದ್ರಗುಹಾ  ಹಾಗೂ ಅನೇಕ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.ಈ ಬಗ್ಗೆ ಪ್ರಶ್ನಿಸಿದ ಹೈ ಕೋರ್ಟ್ ನೀವು ಮಕ್ಕಳನ್ನು ಕೂಡ ಪೆÇಲೀಸ್ ಸ್ಟೇಷನ್ ಕರೆದುಕೊಂಡು ಹೋಗಬೇಕಿತ್ತಾ ಎಂದು ಕೂಡ ಪ್ರಶ್ನಿಸಿದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap