ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಮುದ್ದಪುರ ಗ್ರಾಮದ ಶ್ರೀ ಶನಿದೇವರ ಸ್ವಾಮಿ ದೇವಾಲಯಕ್ಕೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ನಾಯಕ ವಿಜಯೇಂದ್ರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಮುಂದಿನ ದಿನಗಳಲ್ಲಿ ಯೂಡಿವರಪ್ಪ ನವರು ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರ ಮಾಡುವ ಕಾಲ ಹತ್ತಿರದಲ್ಲಿ ಇದೆ. ಆಗಾಗಿ ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳನ್ನು ಬಿಜೆಪಿಗೆ ಜನರು ಆರ್ಶಿವಾದ ಮಾಡಿದ್ದು ನರೇಂದ್ರ ಮೋಧಿಯವರ ಜನಪರ ಯೋಜನೆಗಳನ್ನು ಜಾರಿಗೆ ತಂದು ಒಳೆಯ ಆಡಳಿತ ನೀಡುತ್ತಿದ್ದಾರೆ. ಎಂದು ತಿಳಿಸಿದರು.
ಯೂಡಿವರಪ್ಪನವರು ಮುಖ್ಯಮಂತ್ರಿಯಗಿದ್ದಾಗ ಸಾಕಷ್ವು ಮಠ ಮಾನ್ಯಗಳಿಗೆ ಸಾಕಷ್ವು ಅನುದಾನ ನೀಡಿದ್ದಾರೆ. ಇವತ್ತು ಮಠ ಮಾನ್ಯಗಳು ದೊಡ್ಡದಾಗಿ ನಿರ್ಮಾಣ ಮಾಡಿರುವುದಕ್ಕೆ ಯೂಡುವರಪ್ಪನವರ ಅನುದಾನ ಎಂದರು. ಮುಖ್ಯಮಂತ್ರಿ ಆದಾಗ ಸಾಕಷ್ವು ಜನಪರ ಯೋಜನೆಗಳನ್ನು ಜಾರಿಗೆ ತಂದು ಒಳೆಯ ಜನಪರ ಆಡಳಿತ ಮಾಡಿದ್ದರು. ಮುಂದೆ ಶನಿದೇವರ ಆರ್ಶಿವಾದ ಸದಾ ಯೂಡಿವರಪ್ಪನವರ ಮೇಲೆ ಇದೆ ಮುಂದಿನ ದಿನಗಳಲ್ಲಿ ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಕಸ ಜ್ಯೋತಿಗಣೇಶ್ , ಬಿಜೆಪಿ ಮುಖಂಡ ಬೆಟ್ಟಸ್ವಾಮಿ , ತಾಲ್ಲೂಕ್ ಪ್ರದಾನ ಕಾರ್ಯದರ್ಶಿ ಎಂ ಎನ್ ಭೀಮಶೆಟ್ಟಿ , ಟಿಎಪಿಎಂಸಿ ಅಧ್ಯಕ್ಷ ಕಿಡಿಗಣ್ಣಪ್ಪ ಗ್ರಾಮ ಪಂಚಾಯಿತಿ ಸದಸ್ಯೆ ನೀಲಮ್ಮ ಸಿದ್ದರಾಮೆಶ್ ,ಮುಖಂಡರಾದ ಸೋಮಲಾಪುರ ಸೋಮಣ್ಣ , ಜಾನಿ ಸಿದ್ದರಾಮೇಶ್ , ವಿಜಯ್ ಕುಮಾರ್ , ಅಣ್ಣಿ , ಮುಂತಾದವರು ಭಾಗವಹಿಸಿದ್ದರು.