ಕನ್ನಡಿಗರಿಗೆ ಸ್ಪಂದಿಸದಿದ್ದರೆ ಮುಖ್ಯಮಂತ್ರಿ ಮನೆಗೆ ಮುತ್ತಿಗೆ

ಮಧುಗಿರಿ

     ಕನ್ನಡಿಗರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ತಿಳಿಸಿದರು.

     ಅವರು ತಾಲ್ಲೂಕಿನ ಗಡಿ ಗ್ರಾಮ ಪುಲಮಘಟ್ಟದಲ್ಲಿ ಕರುನಾಡ ಸೇನೆ ಹಾಗೂ ಸ್ನೇಹ ಜೀವಿ ಗಣಪತಿ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ದೇವತೆ ಮಾರಮ್ಮ ದೇವಿ ಉತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು . ನಾಡು-ನುಡಿ, ನೆಲ-ಜಲ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಜನ ಪ್ರತಿನಿಧಿಗಳು ಸ್ಪಂದಿಸದೆ ಹೋದರೆ ಯಾವುದೇ ಹೋರಾಟಕ್ಕೂ ನಾವು ಸಿದ್ದರಿದ್ದೇವೆ. ಶಾಶ್ವತ ಬರಗಾಲಕ್ಕೆ ತುತ್ತಾಗಿರುವ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸುತ್ತೇವೆ ಎಂದರು.

    ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿ.ಆರ್.ಭಾಸ್ಕರ್ ಮಾತನಾಡಿ, ಗಡಿ ಗ್ರಾಮದಲ್ಲಿ ಪ್ರತಿ ವರ್ಷವೂ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯ. ಕನ್ನಡ ಪರ ಒಕ್ಕೂಟಗಳು ಕೇವಲ ರಾಜ್ಯೋತ್ಸವಗಳನ್ನು ನವೆಂಬರ್ ತಿಂಗಳಿಗೆ ಸೀಮಿತಗೊಳಿಸದೆ, ವರ್ಷವಿಡೀ ಆಚರಿಸಿ ಸ್ವಾಭಿಮಾನಿ ಕನ್ನಡಿಗರಾದಾಗ ಮಾತ್ರ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕೂ ಸಾರ್ಥಕ. ಇತ್ತೀಚಿನ ದಿನಗಳಲ್ಲಿ ಕೆಲವು ಸಂಘಟನೆಗಳ ಹೋರಾಟಗಳು ಸ್ವಾರ್ಥಕ್ಕೆ ಸೀಮಿತವಾಗಿ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿವೆ. ಜನಪರ ಹೊರಾಟಗಳನ್ನು ನಿಸ್ವಾರ್ಥವಾಗಿ ಮಾಡಿ ಜನರ ನಂಬಿಕೆಯನ್ನು ಉಳಿಸಿ ಕೊಳ್ಳಬೇಕೆಂದು ತಿಳಿಸಿದರು.

    ದಿವ್ಯ ಸಾನಿಧ್ಯವನ್ನು ನಿಟ್ಟರಹಳ್ಳಿ ಸಿರಿ ಸೌಭಾಗ್ಯಲಕ್ಷ್ಮೀ ಮಂದಿರದ ಧರ್ಮದರ್ಶಿ ಶ್ರೀ ರಾಮ್ ರಾಮ್‍ಜೀ, ಮುಖಂಡರಾದ ಪಿ.ಯು ಪಾಪಣ್ಣ, ಎಂ.ಜಿ. ಶ್ರೀನಿವಾಸಮೂರ್ತಿ, ಬಿ. ನಾಗೇಶ್ ಬಾಬು, ಗೋವಿಂದರೆಡ್ಡಿ, ನರಸಿಂಹಮೂರ್ತಿ, ನವೀನ್‍ಗೌಡ, ನಾನಾ ಕನ್ನಡ ಪರ ಸಂಘಟನೆಗಳ ರಾಜ್ಯಾಧ್ಯಕ್ಷರುಗಳು, ಸಂಘಟಕ ಭರತ್ ತಗ್ಗಿನಮನೆ, ಪದಾಧಿಕಾರಿಗಳಾದ ನಂದೀಶ್, ಸಂದೀಪ್, ಜಗದೀಶ್, ನವೀನ್, ಪವನ್, ನರಸಿಂಹರಾಜು, ವಿಕಾಸ್, ಸಿದ್ದರಾಜು, ತಿಲಕ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link