ಉದ್ಯೋಗ ಮೀಸಲಾತಿಗಾಗಿ ಸರ್ಕಾರ ಶ್ರಮಿಸಲಿದೆ : ದಿನೇಶ್ ಗುಂಡೂರಾವ್

ಬೆಂಗಳೂರು

       ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ದೊರಕಿಸಿಕೊಡಲು ರಾಜ್ಯದ ಸಮ್ಮಿಶ್ರ ಸರ್ಕಾರ ಶ್ರಮಿಸಲಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ತಿಳಿಸಿದ್ದಾರೆ .ರಾಜ್ಯದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡುವುದು ಎಲ್ಲರ ಕರ್ತವ್ಯವಾಗಿದೆ ಖಾಸಗಿ ಕಂಪನಿಗಳು ಸಂಸ್ಥೆಗಳು ಕಾರ್ಖಾನೆಗಳಲ್ಲಿನ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ದೊರೆಯಲು ಆಡಳಿತ ವಿರೋಧ ಪಕ್ಷ ಎನ್ನದೇ ಎಲ್ಲರೂ ಶಕ್ತಿಮೀರಿ ಶ್ರಮಿಸಬೇಕು ಎಂದು ಹೇಳಿದರು.

       ನಗರದ ಥಣಿಸಂದ್ರ ಮುಖ್ಯರಸ್ತೆಯ ಆರ್‍ಕೆ ಹೆಗಡೆ ನಗರದಲ್ಲಿ ಸಾಯಿ ಕಲ್ಯಾಣ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ವತಿಯಿಂದ ಆಯೋಜಿಸಿದ್ದ ಸಾಯಿ ಕಲ್ಯಾಣ್ ಸುಪೇರಿಯಾಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಉದ್ಯೋಗದಲ್ಲಿ ಕನ್ನಡವರಿಗೆ ಮೀಸಲಾತಿ ನೀಡಬೇಕು ಎನ್ನುವುದರ ಬಗ್ಗೆ ಮೇ 23 ರ ನಂತರ ಸಮನ್ವಯ ಸಮಿತಿಯಲ್ಲಿ ವಿಸ್ತøತ ಚರ್ಚೆ ನಡೆಸುತ್ತೇವೆ ಎಂದರು.

      ರಾಜ್ಯದಲ್ಲಿ ಕನ್ನಡರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ಎಲ್ಲರ ಆಶಯವಾಗಿದೆ ಕನ್ನಡ ಭಾಷೆಗೆ ಆದ್ಯತೆ ಇರಬೇಕೆ ವಿನ: ಬೇರೆ ಭಾಷೆಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

        ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದೆ ಕನ್ನಡ ಭಾಷೆ ಸಂಸೃತಿ ಕಲೆಯ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಶಾಸ್ತ್ರಿ ಸ್ಥಾನಮಾನ ದೊರೆತಿರುವ ಕನ್ನಡವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಸಲಾಗಿದೆ ಎಂದರು.ಕನ್ನಡ ನಾಡು ನುಡಿ ಗಡಿ ನೆಲ ಜಲದ ವಿಚಾರದಲ್ಲಿ ರಾಜ್ಯದ ಜನತೆ ಏಕತೆ ಪ್ರದರ್ಶಿಸಿದ್ದಾರೆ ಇಲ್ಲಿಯವರೆಗೆ ಆಡಳಿತ ನಡೆಸಿದ ಸರ್ಕಾರಗಳು ಕೂಡ ನಾಡಿನ ಜನರ ಭಾಷೆ ಸಂಸ್ಕøತಿಯ ಏಳಿಗೆಗಾಗಿ ಶಕ್ತಿಮೀರಿ ಶ್ರಮಿಸಿವೆ ಎಂದ ಅವರು ಕನ್ನಡ ಭಾಷೆ ಸಂಸ್ಕøತಿಗೆ ಧಕ್ಕೆ ಬಂದರೆ ಸರ್ಕಾರ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕನ್ನಡಿಗರಿಗೆ ಆದ್ಯತೆ

        ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಯಿ ಕಲ್ಯಾಣ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಅಧ್ಯಕ್ಷ ವೇಣುಗೋಪಾಲ್‍ಅವರು ನಮ್ಮ ವಸತಿ ಯೋಜನೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ಆರ್‍ಕೆ ಹೆಗಡೆ ನಗರದಲ್ಲಿ ಸಾಯಿ ಕಲ್ಯಾಣ್ ಸುಪೇರಿಯಾ ವಸತಿ ಸಮುಚ್ಚಯ ಯೋಜನೆಯು ಆರಂಭಗೊಂಡಿದ್ದು ಉದ್ಯೋಗದಲ್ಲಿ ಮನೆ ಒದಗಿಸಿಕೊಡುವಲ್ಲಿ ಕನ್ನಡಿಗೆ ಆದ್ಯತೆ ನೀಡಿ ಕನ್ನಡ ಸಂಸ್ಕøತಿ ಕಲೆ ಬಿಂಬಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link