11 ಬಾಲಕಿಯರ ಅಪಹರಣ ಪ್ರಕರಣ : ಆರೋಪಿ ಸೇರಿ 32 ಮಂದಿ ಬಂಧನ …!

ನವದೆಹಲಿ : 

    ಅಮಾಯಕ ಬಾಲಕಿಯರನ್ನು ಮೋಸದ ಬಲೆಗೆ ಬೀಳಿಸಿ ಅವರನ್ನು ಮದುವೆಯಾಗುವುದಾಗಿ ನಂಬಿಸುತ್ತಿದ್ದ ಈ ಅಂಕಿತ್​. ಈತನ ಐಷಾರಾಮಿ ಜೀವನವನ್ನು ನೋಡಿದ ಆ ಹೆಣ್ಣುಮಕ್ಕಳೂ ಈಗ ಹನುಮ ಭಕ್ತನೇ ಇರಬೇಕು ಎಂದುಕೊಂಡು ಬಲೆಗೆ ಬೀಳುತ್ತಿದ್ದರು. ಹೀಗೆ ಇದಾಗಲೇ ಈತ ಅದೆಷ್ಟೋ ಅಪ್ರಾಪ್ತೆಯರನ್ನು ತನ್ನ ಮೋಹದ ಜಾಲದೊಳಗೆ ಸಿಲುಕಿಸಿದ್ದಾನೆ. 

   ನಗರದಲ್ಲಿ ಹೆಚ್ಚುತ್ತಿರುವ ವೇಶ್ಯಾವಾಟಿಕೆ ದಂಧೆಯ  ಜಾಡು ಹಿಡಿದು ಹೋದ ಪೊಲೀಸರ ಕೈಗೆ ಸಿಕ್ಕಿದ್ದು ಈ ‘ಅಂಕಿತ್​ ತಿವಾರಿ’ ಹಾಗೂ ಈತನ ಪ್ರೇಯಸಿ ‘ಕತ್ರೀನಾ’. ಇವರ ಹಿನ್ನೆಲೆ ಕೆದಕಿದಾಗ ಪೊಲೀಸರಿಗೆ ಶಾಕಿಂಗ್ ವಿಷಯವೊಂದು ತಿಳಿದುಬಂದಿತ್ತು. ಅದೇನೆಂದರೆ, ಈತನ ಹೆಸರು ಅಂಕಿತ್​ ಅಲ್ಲ ಬದಲಿಗೆ   ಅಫ್ತಾಬ್ ಖಾನ್​ ಎನ್ನುವುದು. ಈತನ ಪ್ರೇಯಸಿ ಕತ್ರೀನಾ ಅಲ್ಲ ಬದಲಿಗೆ ಜುಬೀದಾ ಎನ್ನುವುದು ತಿಳಿದುಬಂತು. ಇನ್ನಷ್ಟು ಈತನ ಬಗ್ಗೆ ಕೆದಕಿದಾಗ ಮತ್ತಷ್ಟು ಕರಾಳ ಮುಖ ಬೆಳಕಿಗೆ ಬಂತು. ಹಲವಾರು ಬಾಲಕಿಯರನ್ನು ಮದುವೆಯ ಹೆಸರಿನಲ್ಲಿ ಈತ ವಂಚಿಸುತ್ತಿದ್ದ. ತಾನು ಅಂಕಿತ್​, ಹನುಮ ಭಕ್ತ ಎಂದು ಹೇಳಿಕೊಂಡು ಅಮಾಯಕ ಬಾಲಕಿಯರನ್ನು ಮದುವೆಯಾಗುವುದಾಗಿ ಹೇಳುತ್ತಿದ್ದ. ಅವರನ್ನು ಕರೆದುಕೊಂಡು ಬಂದು ಕೊನೆಗೆ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ವಿಷಯ ತಿಳಿದ ಪೊಲೀಸರು, ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸದ್ಯ 11 ಬಾಲಕಿಯರನ್ನು ವೇಶ್ಯಾಗೃಹದಿಂದ ರಕ್ಷಣೆ ಮಾಡಲಾಗಿದೆ.  

    ಪೊಲೀಸರ ಪ್ರಕಾರ,  ಪೂರ್ಣಿಯಾ ಜಿಲ್ಲೆಯಲ್ಲಿ ಅಫ್ತಾಬ್ ಖಾನ್ ನೇತೃತ್ವದ ಮುಸ್ಲಿಮರ ಗುಂಪೊಂದು ಹಿಂದೂ ಹುಡುಗಿಯರನ್ನು ಲೈಂಗಿಕ ದಂಧೆಗೆ ಸಿಲುಕಿಸುವ ಕಾರ್ಯದಲ್ಲಿ ತೊಡಗಿದೆ.  ಜನವರಿ 30ರಂದು ಪೂರ್ಣಿಯಾದ ಕಥಿಯಾರ್ ಮೋರ್ ಪ್ರದೇಶದಲ್ಲಿ ದಾಳಿ ನಡೆಸಿದಾಗ ವಿಷಯ ತಿಳಿದೆ. 11 ಅಪ್ರಾಪ್ತ ವಯಸ್ಕರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಿರುವ ವಿಷಯ ಬೆಳಕಿಗೆ ಬಂದಿದೆ ಎಂದಿದ್ದಾರೆ ಪೊಲೀಸರು.  ಇನ್ನೂ ಎಷ್ಟು ಮಂದಿಯನ್ನು ಎಲ್ಲಿಗೆ ಈ ಗುಂಪು ಮಾರಾಟ ಮಾಡಿದೆ ಎನ್ನುವುದನ್ನು ಇನ್ನಷ್ಟೇ ತನಿಖೆಯಿಂದ ಬೆಳಕಿಗೆ ಬರಬೇಕಿದೆ ಎಂದಿದ್ದಾರೆ ಅವರು. 

   ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 32 ಜನರನ್ನು ಬಂಧಿಸಿದ್ದಾರೆ.  ಅವನ ಸಹಾಯಕರಲ್ಲಿ ಮೊಹಮ್ಮದ್ ಶಕೀಬ್, ಮೌಸಮ್ ಖಾನ್, ಗುಡ್ಡು ಖಾನ್ ಮತ್ತು ಜುಬೇದಾ ಸೇರಿದ್ದಾರೆ. ಶಕೀಬ್ ಮತ್ತು ಮೌಸಮ್ ‘ರಾಜೀವ್ ಶಾ’ ಮತ್ತು ‘ರಿಷಭ್ ಶಾ’ ಎಂಬ ಹಿಂದೂ ಹೆಸರನ್ನು ಇಟ್ಟುಕೊಂಡಿದ್ದರೆ,  ಜುಬೀದಾ ‘ಕತ್ರಿನಾ’ ಎಂಬ ಹೆಸರು ಇಟ್ಟುಕೊಂಡಿದ್ದಳು.  ಶಕೀಬ್ ವಿವಿಧ ಪ್ರದೇಶಗಳಿಂದ ಹಿಂದೂ ಹುಡುಗಿಯರನ್ನು ಖರೀದಿಸುತ್ತಿದ್ದ.  

   ಇಂಟರ್​ನೆಟ್​ ಮೂಲಕ ಹಿಂದೂ ಹುಡುಗಿಯರ ಸ್ನೇಹ ಬೆಳೆಸುತ್ತಿದ್ದ. ಗುಡ್ಡು ಖಾನ್ ಮತ್ತು ಜುಬೀದಾ ಕೂಡ ‘ವೇಶ್ಯಾವಾಟಿಕೆ ಜಾಲ’ವನ್ನು ನಡೆಸಲು ಸಹಾಯ ಮಾಡುತ್ತಿದ್ದರು. ಅಫ್ತಾಬ್ ಖಾನ್ ನಡೆಸುತ್ತಿದ್ದ  ಗ್ಯಾಂಗ್, ಗ್ರಾಹಕರಿಂದ ಪ್ರತಿ ರಾತ್ರಿಗೆ  10 ಸಾವಿರ ಶುಲ್ಕ ವಿಧಿಸುತ್ತಿತ್ತು. ಅವರು ಇತರ ರಾಜ್ಯಗಳಲ್ಲಿ ಈ ಬಾಲಕಿಯರನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವು ದಲ್ಲಾಳಿಗಳಿಂದ  5 ಲಕ್ಷಕ್ಕೂ ಅಧಿಕ ಹಣ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  

Recent Articles

spot_img

Related Stories

Share via
Copy link