ವ್ಯಾಪಾರಸ್ತರಿಗೆ ತೊಂದರೆ ಕೊಟ್ಟರೆ ತಕ್ಕ ಪಾಠ : ಬಿ ಎಸ್ ವೈ

ರಾಣೇಬೆನ್ನೂರು

    ವ್ಯಾಪಾರ ವಹಿವಾಟಿನಲ್ಲಿ ದೇಶಕ್ಕೆ ಸುಪ್ರಸಿದ್ಧಿ ಹೊಂದಿ ಹೆಸರುವಾಸಿಯಾಗಿರುವ ರಾಣೇಬೆನ್ನೂರು ನಗರದಲ್ಲಿನ ವ್ಯಾಪಾರಸ್ಥರಿಗೆ ನೀಡುವ ಕಿರುಕುಳ, ಗುಂಡಾ ಪ್ರವೃತ್ತಿಯಂತಹ ನೀಚ ಸಂಸ್ಕøತಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಖಡಕ್ ಆಗಿ ಶಪಥ ಮಾಡಿದರು.

    ನಗರದ ನಗರಸಭೆ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾಭಿಮಾನದಿಂದ ತಮ್ಮ ಮಂತ್ರಿ ಸ್ಥಾನಕ್ಕಾಗಿ ರಾಜೀನಾಮೆ ಸಲ್ಲಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಚುಕ್ಕಾಣಿ ಹಿಡಿಯಲು ಕಾರಣೀಭೂತರಾದ ಆರ್.ಶಂಕರ್ ತ್ಯಾಗವನ್ನು ಜೀವನದುದ್ದಕ್ಕೂ ಮರೆಯುವುದಿಲ್ಲ. ಅವರಿಗೆ ಮುಂದಿನ ದಿನಗಳಲ್ಲಿ ಎಮ್‍ಎಲ್‍ಸಿ ಸ್ಥಾನ ನೀಡಿ ಮಂತ್ರಿಸ್ಥಾನವನ್ನೂ ನೀಡಿ ಈ ಭಾಗ ಅಭಿವೃದ್ಧಿಗೆ ಸಹಕರಿಸುತ್ತೇನೆ ಜೊತೆಗೆ ಈ ಕ್ಷೇತ್ರದಲ್ಲಿ ಟಿಕೆಟ್ ವಂಚಿತರಾಗಿರುವ ನೇಕಾರ ಸಮುದಾಯದ ಬಿಜೆಪಿ ಮುಖಂಡ ಡಾ. ಬಸವರಾಜ ಕೇಲಗಾರವರಿಗೂ ಸೂಕ್ತ ಸ್ಥಾನಮಾನ ನೀಡುತ್ತೇನೆಂದು ಭರವಸೆ ನೀಡಿದರು.

    ಬಿಜೆಪಿ ಸರ್ಕಾರವು ಯಾವತ್ತೂ ಜನಹಿತ ಕಾಯುವ ಪಕ್ಷವಾಗಿದ್ದು ಹಿಂದಿನ ಅಪವಿತ್ರ ಮೈತ್ರಿ ಸರ್ಕಾರವು ರೈತರನ್ನು ಮರೆತರು, ನೀರಾವರಿಗೆ ಆದ್ಯತೆ ನೀಡಲಿಲ್ಲ, ಹಿಂದುಳಿದವರ ಕಲ್ಯಾಣಕ್ಕಾಗಿ ಶ್ರಮಿಸದೇ ಪೊಳ್ಳು ಭರವಸೆಗಳನ್ನೇ ನೀಡುತ್ತಾ ಜನರ ತಿರಸ್ಕಾರಕ್ಕೆ ಗುರಿಯಾಗಿದ್ದಾರೆ ಎಂದರು.

     ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಸೂರು ನೀಡುವ ಗುರಿ ಇದೆ. ನೀರಾವರಿಗೆ ಆಧ್ಯತೆ ನೀಡಿ ರೈತ ಬೆಳೆದ ಬೆಳೆಗೆ ಬೆಂಬಲ ಸಿಗುವಂತೆ ಮಾಡಲಾಗವುದು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಭಾಗ್ಯಲಕ್ಷ್ಮಿ ಯೋಜನೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ನೇಕಾರರ ಅಭಿವೃದ್ಧಿಗೆ ಆದ್ಯತೆ ಕಲ್ಪಿಸಿ ಸಾಲಮನ್ನಾ ಯೋಜನೆಗಳು ಇಂದಿಗೂ ಎಲ್ಲರ ಮನದಲ್ಲಿ ನೆಲಿಯೂರಿವೆ.

    ರಾಣೇಬೆನ್ನೂರು ತಾಲೂಕು ಸೇರಿದಂತೆ ನಗರದ ಸೌಂದರ್ಯ ಹೆಚ್ಚಿಸಲು ಕೆರೆ ಅಭಿವೃದ್ಧಿ ಮಾಡಿ ಪ್ರವಾಸಿ ತಾಣ ನಿರ್ಮಾಣ, ಪೂರ್ವ-ಪಶ್ಚಿಮ ಬಡಾವಣೆಗಳಿಗೆ ಶಾಶ್ವತ ಪರಿಹಾರ, ಆಹಾರ ಸಂಸ್ಕರಣ ಘಟಕ ಸ್ಥಾಪನೆ, ಸಿದ್ಧ ಉಡುಪುಗಳ ಕಾರ್ಖಾನೆ ಸ್ಥಾಪಿಸಿ ನಿರುದ್ಯೊಗಿಗಳಿಗೆ ಉದ್ಯೊಗ ಕಲ್ಪಿಸಲಾಗುವುದು. ಈ ಎಲ್ಲ ಕಾರ್ಯಗಳು ಆಗಬೇಕಾದರೆ ಅದು ಬಿಜೆಪಿ ಸರ್ಕಾರದಿಂದ ಮಾತ್ರ ಸಾಕಾರವಾಗಲು ಸಾಧ್ಯ ಆದ್ದರಿಂದ ಬಿಜೆಪಿ ಅಭ್ಯರ್ಥಿ ಅರುಣಕುಮಾರಗೆ ಮತ ನೀಡಿ 25 ಸಾವಿರ ಅಂತರದಿಂದ ಗೆಲ್ಲಿಸಿದರೆ ಆರ್.ಶಂಕರ್ ಅವರಿಗೆ ಮಹತ್ವ ಬಂದಂತಾಗುವುದು ಎಂದು ಹೇಳಿದರು.

     ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರ್.ಶಂಕರ್, ಸಂಸದ ಬಿ.ವೈ.ರಾಘವೇಂದ್ರ, ಶಿವಕುಮಾರ ಉದಾಸಿ ಮಾತನಾಡಿದರು.ಸಂಸದ ಜಿ.ಎಂ.ಸಿದ್ದೇಶ್ವರ, ಬಿಜೆಪಿ ವರಿಷ್ಠರಾದ ಪ್ರಭು ಚವ್ಹಾಣ, ಶಾಸಕ ಅರವಿಂದ ಬೆಲ್ಲದ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಎಂ.ಪಿ ರೇಣುಕಾಚಾರ್ಯ, ಮುಖಂಡರಾದ ಡಾ. ಬಸವರಾಜ ಕೇಲಗಾರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ್, ತಾಲೂಕ ಅಧ್ಯಕ್ಷ ವಿಶ್ವನಾಥ ಪಾಟೀಲ, ನಗರ ಘಟಕದ ಅಧ್ಯಕ್ಷ ಚೋಳಪ್ಪ ಕಸವಾಳ, ಮಂಜುನಾಥ ಓಲೇಕಾರ, ಭಾರತಿ ಅಳವಂಡಿ, ಎಸ್.ಎಸ್.ರಾಮಲಿಂಗಣ್ಣನವರ, ಕೆ.ಶಿವಲಿಂಗಪ್ಪ, ಭಾರತಿ ಜಂಬಗಿ, ಪ್ರಕಾಶ ಬುರಡಿಕಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link