ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ 25 ಸ್ಥಾನ ಗೆಲ್ಲಲಿದೆ: ಹೆಚ್.ಎಸ್. ಶಿವಶಂಕರ್

ಹರಿಹರ :

      ಮೇ 29 ರಂದು ನಡೆಯುವ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಭ್ರಷ್ಟ ರಹಿತ, ಪಾರದರ್ಶಕ ಆಡಳಿತದ ಹೆಸರಿನಲ್ಲಿ ಮತ ಯಾಚಿಸಿ ಕನಿಷ್ಠ 25 ಸ್ಥಾನ ಗೆಲ್ಲಲಿದೆ ಎಂದು ಮಾಜಿ ಶಾಸಕ ಎಚ್ ಎಸ್ ಶಿವಶಂಕರ್ ಹೇಳಿದರು.

       ನಗರದ ಶ್ರೀ ರಾಘವೇಂದ್ರ ಮಠದ ಸಭಾಂಗಣದಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಮತ್ತು ನಗರಸಭೆ ಚುನಾವಣೆಯ ಆಕಾಂಕ್ಷಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಬಾರಿಯ ಚುನಾವಣೆ ಯಲ್ಲಿ ಹೆಚ್ಚಾಗಿ ಯುವಕರು ಗೆದ್ದ ಮೇಲೆ ಪಕ್ಷ ತೊರೆಯದಂತಹವರನ್ನು ಅಭ್ಯರ್ಥಿಗಳನ್ನಾಗಿಸಿ ಚುನಾವಣೆ ಎದುರಿಸಲಿದ್ದೇವೆ ಎಂದರು.

       ಅಭ್ಯರ್ಥಿಗಳು ಯಾರ ವಿರುದ್ಧವೂ ಮಾತ ನಾಡದೇ ಕೇವಲ ಮತದಾರರನ್ನು ಒಲಿಸುವ ಕೆಲಸ ಮಾಡಬೇಕು.31 ವಾರ್ಡುಗಳಲ್ಲಿ ಪ್ರತಿಯೊಂದು ವಾರ್ಡಿಗೆ ಅನೇಕ ಆಕಾಂಕ್ಷಿಗಳಿದ್ದಾರೆ ಎಲ್ಲರ ಮನವೊಲಿಸಿ ಒಬ್ಬ ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸಲಾಗುವುದು.ಆದ್ದರಿಂದ ಎಲ್ಲ ಕಾರ್ಯಕರ್ತ ರುಗಳು ಮತದಾರರ ಮನವೊಲಿಸಿ ಮತ ಯಾಚಿಸಬೇಕೆಂದು ಸೂಚ್ಯವಾಗಿ ತಿಳಿಸಿದರು.

       ಕಳೆದ ಬಾರಿ ನಗರಸಭೆಯಲ್ಲಿ ಕೆಲವರು ನಮ್ಮಿಂದ ಅಧಿಕಾರವನ್ನು ಪಡೆದು ತಮ್ಮ ಸ್ವಾರ್ಥ ಸಾಧನೆಗೆ ಪಕ್ಷ ತ್ಯಜಿಸಿದ್ದು ನಾವು ವಿಶೇಷವಾಗಿ ಗಮನಿಸಿದ್ದೇವೆ. ನಮ್ಮ ಪಕ್ಷದ ಬಾಗಿಲು ಸದಾ ತೆರೆದಿದೆ ಹೋಗುವವರು ಈಗಾಗಲೇ ಹೋಗಿದ್ದಾರೆ. ಪಕ್ಷಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.

        ಇತ್ತೀಚಿನ ಚುನಾವಣೆಗಳಲ್ಲಿ ಮುಖ್ಯವಾಗಿ ಜನ ಬಲ, ಹಣ ಬಲ ಹಾಗೂ ವಿಶ್ವಾಸವನ್ನು ಹೊಂದಿ ರುವುದು ಮುಖ್ಯವಾಗಿದ್ದು ಅಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿ ಟಿಕೆಟ್ ನೀಡಬೇಕು ಎನ್ನುವ ಆಶಯವನ್ನು ಪಕ್ಷ ಪಾಲನೆ ಮಾಡಲಿದೆ.ಟಿಕೆಟ್ ವಂಚಿತರು ಹತಾಶರಾಗದೆ ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯಬೇಕು ಎಂದು ಹೇಳಿದರು.

         ಅಭಿವೃದ್ಧಿಯೇ ಮೂಲ ಮಂತ್ರವೆಂದು ಭಾವಿಸಿ ಅಭ್ಯರ್ಥಿಗಳು ಚುನಾವಣೆಯನ್ನು ಎದುರಿಸಬೇಕು ಯಾರೇ ಆಗಲಿ ವೈಯಕ್ತಿಕವಾಗಿ ಯಾರನ್ನೂ ದೂಷಣೆ ಮಾಡಿದೆ ಪಕ್ಷವನ್ನು ಗೆಲ್ಲಿಸುತ್ತಾ ಪ್ರಯತ್ನ ಪಡಬೇಕು ಎಂದು ಅಭ್ಯರ್ಥಿಗಳಿಗೆ ಮತ್ತು ಕಾರ್ಯಕರ್ತರನ್ನು ಹುರಿದುಂಬಿಸಿದರು.

         2018 ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಅತಿಯಾದ ಉತ್ಸಾಹ, ಅತಿಯಾದ ಆತ್ಮವಿಶ್ವಾಸ ಮತ್ತು ಗೆದ್ದೇ ಗೆಲ್ಲುತ್ತೇವೆ ಎನ್ನುವ ಕೆಲವರ ನಿರ್ಲಕ್ಷ್ಯತನದಿಂದ ನಾನು ಪರಾ ಭವ ಹೊಂದಬೇಕಾಯಿತು. ನನ್ನ ಅವಧಿಯ ಅನುದಾನಗಳ ಕಾಮಗಾರಿಗಳು ಈಗಲೂ ನಡೆ ಯುತ್ತಿವೆ ಇದನ್ನು ಮತದಾರರು ಗಮನಿಸುತ್ತಿದ್ದಾರೆ. ಎಂದು ತಮ್ಮ ವಿಧಾನಸಭಾ ಚುನಾವಣೆಯ ಸೋಲನ್ನು ನೆನೆಪು ಮಾಡಿಕೊಂಡರು.

        ಜಾತ್ಯತೀತ ಶಕ್ತಿಗಳು ಗೆಲ್ಲಬೇಕು,ಕೋಮುವಾದಿ ಶಕ್ತಿ ಸೋಲಬೇಕು ಎನ್ನುವ ನಿಲುವನ್ನು ಪಕ್ಷ ಹೊಂದಿದ್ದು ಜೆಡಿಎಸ್ ಪಕ್ಷವು ಈ ಸಾರಿ ನಗರಸಭೆಯ ಚುಕ್ಕಾಣಿಯನ್ನು ಹಿಡಿಯಲಿದ್ದು ಖಂಡಿತವಾಗಿಯೂ ಜನರು ಆಶೀರ್ವದಿಸಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಬಿ.ಚಿದಾನಂದಪ್ಪ, ಹಿರಿಯ ವಕೀಲರಾದ ವಾಮನಮೂರ್ತಿ,ಹೆಚ್.ಕೆ.ಕೊಟ್ರಪ್ಪ ,ಮುಜಾಮಿಲ್ ,ಎಸ್.ಕೆ.ಸಮೀವುಲ್ಲಾ,ಕೆ.ಜಿ.ಎಸ್ ಪಾಟೀಲ್,ರಮೇಶ್ ಮಾನೆ, ಹಾಲೇಶ್ ಗೌಡ, ಏ.ಕೆ.ನಾಗಪ್ಪ, ಜಂಬಣ್ಣ, ಎಚ್.ಸುಧಾಕರ್,ಸಿರಿಗೇರಿ ಪರಮೇಶ್ ಗೌಡ್ರು ಮುಂತಾದವರು ಪಕ್ಷದ ಸಂಘಟನೆಯ ಬಗ್ಗೆ ಮಾತನಾಡಿದರು.

        ಸಭೆಯ ವೇದಿಕೆಯಲ್ಲಿ ಮಾಜಿ ನಗರಸಭಾ ಅಧ್ಯಕ್ಷ ರುಗಳಾದ ಪ್ರತಿಭಾ ಕುಲಕರ್ಣಿ,ಹೊನ್ನಮ್ಮ ವಿಜಯ್ ಕುಮಾರ್,ಮಲೇಬೆನ್ನೂರು ಪುರಸಭೆ ಅಧ್ಯಕ್ಷೆ ಹೇಮಾವತಿ ವಿಜಯ್ ಕುಮಾರ್, ಮುಖಂಡರುಗಳಾದ ಅತಾವುಲ್ಲಾ, ಅಲ್ತಾಫ್, ಹಾಜಿ ಅಲಿ,ಎಚ್.ನಿಜಗುಣ, ಲಕ್ಷ್ಮಿ ಆಚಾರ್, ಪಿ.ಎನ್. ವಿರೂಪಾಕ್ಷ ಮುಂತಾದವರಿದ್ದರು.

        ಸಭೆಯಲ್ಲಿ ಮುಖಂಡರಾದ ನಂಜಪ್ಪ,ಪ್ರೇಮ್ ಕುಮಾರ್ ಅಡಕೆ, ಸುರೇಶ್ ಪೈ ಚಂದಾಪುರ ಹಲವಾರು ಮುಖಂಡರುಗಳು ಅಲ್ಲದೆ ಅನೇಕ ಟಿಕೆಟ್ ಆಕಾಂಕ್ಷಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link