ವೆಬ್ ಟಾಕ್ ಮಿನಿ ಎಟಿಎಂಗೆ ಚಾಲನೆ…!!

ಶಿಗ್ಗಾವಿ :

     ವೆಬ್ಟಾಕ್ ಮಿನಿ ಎಟಿಎಂ ಸೇವೆಯನ್ನು ಪ್ರಾರಂಬಿಸುವುದರಿಂದ ಗ್ರಾಮೀಣ ಬಾಗದ ಜನತೆಗೆ ಹಣಕಾಸಿನ ಉತ್ತಮ ವ್ಯವಹಾರಗಳನ್ನು ಮಾಡಲು ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲಕರವಾಗಲಿದೆ ಎಂದು ಪಟ್ಟಣದ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.

      ಪಟ್ಟಣದ ರಾಜಶ್ರೀ ಚಲನಚಿತ್ರ ಮಂದಿರದ ಹತ್ತಿರವಿರುವ ಓಂಕಾರೇಶ್ವರ ಆಲೂರ ಅವರ ಮಳಿಗೆಯಲ್ಲಿ ವೆಬ್ಟಾಕ್ ಮಿನಿ ಎಟಿಎಂ ಸೇವೆಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರಕ್ಕಾಗಲಿ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಬ್ಯಾಂಕಗಳ ಮೂಲಕ ಎಟಿಎಂ ವ್ಯವಸ್ಥೆಯನ್ನು ನೀಡಲು ಸಾಧ್ಯವಿಲ್ಲ ಕಾರಣ ಇಂತಹ ಸಮಸ್ಯೆಗಳನ್ನು ಮನಗೊಂಡು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿ ಹಾಗೂ ಅವರು ಸಹಿತ ಆರ್ಥಿಕವಾಗಿ ಸಬಲೀಕರಣ ಹೊಂದಲಿ ಎಂದು ಖಾಸಗಿ ಕಂಪನಿಗಳು ಮುಂದೆ ಬಂದಿದ್ದು ಒಂದು ಉತ್ತಮ ಬೆಳವಣಿಗೆ ಎಂದು ಹೇಳಿದರು.

      ಕ್ಲಸ್ಟರ್ ವ್ಯವಸ್ಥಾಪಕ ರಾಘವೇಂದ್ರ ಎಮ್ ಮಾತನಾಡಿ ಇಂದಿನಿಂದ ಶಿಗ್ಗಾವಿ ಪಟ್ಟಣದಲ್ಲಿ ವೆಬ್ಟಾಕ್ ಮಿನಿ ಎಟಿಎಂ ಸೇವೆಯನ್ನು ತಾಲೂಕಿನ ಮಣಕಟ್ಟಿ, ಹಿರೇಬೆಂಡಿಗೇರಿ, ಮುಗಳಿ, ಬೆಳಗಲಿ, ಕೋಣನಕೇರಿ, ಕುನ್ನೂರ ಗ್ರಾಮಗಳಲ್ಲಿ ಪ್ರಾರಂಭ ಮಾಡಿದ್ದು ಇದರ ಉಪಯೋಗವನ್ನು ಗ್ರಾಮೀಣ ಪ್ರದೇಶದ ಜನರು ಹೆಚ್ಚು ಹೆಚ್ಚು ಇದರ ಲಾಭ ಪಡೆದುಕೊಳ್ಳಬೇಕು ಮತ್ತು ಯಾವುದೇ ಬ್ಯಾಂಕಿನ ಡೇಬಿಟ್ ಕಾರ್ಡನಿಂದ ಹಣವನ್ನು ಪಡೆದುಕೊಳ್ಳಬಹುದು ಹಾಗೂ ಯಾವುದೇ ಬ್ಯಾಂಕಿನ ಖಾತೆಗೆ ಸುಲಭವಾಗಿ ಹಣವನ್ನು ಜಮಾ ಮಾಡಲು ಮತ್ತು ಇನ್ನೊಬ್ಬರ ಖಾತೆಗೆ ವರ್ಗಾವಣೆ ಮಾಡಲು ತುಂಬಾ ಅನುಕೂಲಕರವಾಗಿದೆ ಎಂದು ಹೇಳಿದರು.

      ಈ ಸಂದರ್ಭದಲ್ಲಿ ಕಂಪನಿಯ ಶಶಿಕಾಂತ ತಡಸ, ಅಂಗಡಿಯ ಮಾಲಿಕರಾದ ಓಂಕಾರೇಶ್ವರ ಆಲೂರ, ರಾಜಶೇಖರ ಅಂಕಲಕೋಟಿ, ಈರಪ್ಪ ಮಂಟಗಣಿ, ರಂಗನಾಥ ಸರ ಮುಂತಾದ ಗ್ರಾಮಗಳಿಂದ ಆಗಮಿಸಿದ ಗ್ರಾಹಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link