ಕುಖ್ಯಾತ ಸರಗಳ್ಳರ ಬಂಧನ…!!

ಬೆಂಗಳೂರು

    ನಗರದಲ್ಲಿ ಮತ್ತೆ ಪೊಲೀಸರ ಗುಂಡು ಸದ್ದು ಮಾಡಿದೆ.ದೆಹಲಿಯಿಂದ ನಗರಕ್ಕೆ ಬಂದು ವೇಶ್ಯೆಯೊಬ್ಬರ ನೆರವು ಪಡೆದು ನಗರದ ವಿವಿಧೆಡೆ ಬೈಕ್‍ನಲ್ಲಿ ಸಂಚರಿಸುತ್ತಾ 20ಕ್ಕೂ ಹೆಚ್ಚು ಕಡೆಗಳಲ್ಲಿ ಸರಗಳವು, ಸುಲಿಗೆ ಕೃತ್ಯಗಳನ್ನು ನಡೆಸಿದ್ದ ಇಬ್ಬರು ಕುಖ್ಯಾತ ಸರಗಳ್ಳ ಹಾಗೂ ಸುಲಿಗೆಕೋರರಿಗೆ ಭಾನುವಾರ ಬೆಳಿಗ್ಗೆ ಗುಂಡಿನ ರುಚಿ ತೋರಿಸಿದ್ದಾರೆ.

     ಉತ್ತರ ವಿಭಾಗದ ಪೆÇಲೀಸರ ಗುಂಡೇಟು ತಗುಲಿ ಎರಡೂ ಕಾಲುಗಳಿಗೆ ಗಾಯಗೊಂಡಿರುವ ಮಾದನಾಯಕನಹಳ್ಳಿಯ ಸುರೇಂದ್ರ ಸಿಂಗ್ (27) ಹಾಗೂ ಕರಣ್ ಗುಪ್ತ (28) ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇವರಿಬ್ಬರೂ ದೆಹಲಿ ಮೂಲದ ಆರೋಪಿಗಳಾಗಿದ್ದಾರೆ

      ಆರೋಪಿಗಳನ್ನು ಬಂಧಿಸುವ ವೇಳೆ ನಡೆಸಿದ ಹಲ್ಲೆಯಿಂದ ಉತ್ತರ ವಿಭಾಗದ ಬಾಗಲಗುಂಟೆ ಹಾಗೂ ಸೋಲದೇವನಹಳ್ಳಿ ಪೊಲೀಸ್ ಠಾಣೆಗಳ ತರಬೇತಿನಿರತ ಸಬ್‍ಇನ್ಸ್‍ಪೆಕ್ಟರ್‍ಗಳಾದ ಪ್ರಭು, ರಾಜಾಸಾಬ್, ಪೇದೆಗಳಾದ ಪ್ರಕಾಶ್ ಹಾಗೂ ಗಣೇಶ್ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

    ದೆಹಲಿಯಲ್ಲಿ ಗೋಬಿ ಮಂಜೂರಿ ಹಾಗೂ ಚಾಟ್ಸ್ ಅಂಗಡಿ ನಡೆಸುತ್ತಿದ್ದ ಆರೋಪಿಗಳು ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದರಿಂದ ಅಪರಾಧ ಕೃತ್ಯಕ್ಕೆ ಇಳಿದಿದ್ದು, ಹೈದರಾಬಾದ್, ಚೆನ್ನೈ, ದೆಹಲಿಯಲ್ಲಿ ಸರಗಳವು, ಸುಲಿಗೆ, ಬೆದರಿಕೆ, ಇನ್ನಿತರ ಅಪರಾಧ ಕೃತ್ಯಗಳನ್ನು ನಡೆಸಿದ್ದಾರೆ.

ತಾಯಿ ಚಿಕಿತ್ಸೆಯ ನೆಪ

     ಕೃತ್ಯಗಳನ್ನು ದಾಖಲಿಸಿ ಪೆÇಲೀಸರು ಬೆನ್ನುಬೀಳುವಷ್ಟರಲ್ಲಿ ಬೇರೊಂದು ನಗರಕ್ಕೆ ಪರಾರಿಯಾಗುತ್ತಿದ್ದ ಇವರಿಬ್ಬರು ಕಳೆದ ಕೆಲದಿನಗಳ ಹಿಂದೆ ನಗರಕ್ಕೆ ಬಂದು ಆರೋಗ್ಯ ಸರಿಯಿಲ್ಲದ ತಾಯಿಯನ್ನು ಆಸ್ಪತ್ರೆಗೆ ತೋರಿಸಬೇಕೆಂದು ಮಾಲೀಕರಿಗೆ ಸುಳ್ಳು ಹೇಳಿ ಮಾದನಾಯಕನಹಳ್ಳಿಯಲ್ಲಿ ಬಾಡಿಗೆ ಮನೆಮಾಡಿಕೊಂಡಿದ್ದರು.

      ಸುರೇಂದ್ರ ಸಿಂಗ್ ಜೊತೆಯಲ್ಲಿ ಪತ್ನಿಯನ್ನು ಕರೆತಂದಿದ್ದರೆ, ಕರಣ್ ಗುಪ್ತ ಸ್ಥಳೀಯ ವೇಶ್ಯೆಯೊಬ್ಬರ ಸಂಗ ಬೆಳೆಸಿ ಆಕೆಯನ್ನು ಬಾಡಿಗೆಗಿದ್ದ ಮನೆಗೆ ತಂದಿಟ್ಟುಕೊಂಡಿದ್ದ. ಆಕೆಯ ಮೂಲಕ ಕಳವು ಮಾಡಿದ ಚಿನ್ನಾಭರಣ, ಇನ್ನಿತರ ವಸ್ತುಗಳನ್ನು ವಿಲೇವಾರಿ ಮಾಡುತ್ತಿದ್ದ. ಅಲ್ಲದೆ, ಆಕೆಯು ನಗರದ ಪ್ರದೇಶಗಳ ಪರಿಚಯವನ್ನು ಆರೋಪಿಗಳಿಗೆ ಮಾಡಿಕೊಟ್ಟಿದ್ದಳು.

     ಬಾಗಲಗುಂಟೆ, ಸೋಲದೇವನಹಳ್ಳಿ, ಬ್ಯಾಡರಹಳ್ಳಿ, ಮಾದನಾಯಕನಹಳ್ಳಿ, ಇನ್ನಿತರ ಕಡೆಗಳಲ್ಲಿ ಕಪ್ಪುಬಣ್ಣದ ಬೈಕ್‍ನಲ್ಲಿ ಹೆಲ್ಮೆಟ್ ಧರಿಸಿ ಸಂಚರಿಸುತ್ತಾ ಇಲ್ಲಿಯವರೆಗೆ 20ಕ್ಕೂ ಹೆಚ್ಚು ಸರಗಳವು, ಸುಲಿಗೆ ಕೃತ್ಯಗಳನ್ನು ನಡೆಸಿದ ಆರೋಪಿಗಳು ಭಾನುವಾರ ತಡರಾತ್ರಿ ಮಂಜುನಾಥ ನಗರದಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಮೊಬೈಲ್, ನಗದು ಸುಲಿಗೆ ಮಾಡಿದ್ದರು ಎಂದು ಅವರು ತಿಳಿಸಿದರು.

2 ಕಡೆ ಸುಲಿಗೆ ಕೊನೆಗೆ ಗುಂಡೇಟು

       ಕಪ್ಪು ಬಣ್ಣದ ಬೈಕ್‍ನಲ್ಲಿ ಹೆಲ್ಮೆಟ್ ಹಾಕಿಕೊಂಡು ಕೃತ್ಯ ನಡೆಸುತ್ತಿದ್ದ ಆರೋಪಿಗಳು ಅಲ್ಲಿಂದ ಪರಾರಿಯಾಗಿ ಇಂದು ಮುಂಜಾನೆ ಎಂ.ಎಸ್. ರಾಮಯ್ಯ ಲೇಔಟ್‍ಗೆ ಬಂದಿದ್ದ ಆರೋಪಿಗಳು ಅಲ್ಲಿ ಕೂಡ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಖಚಿತ ಮಾಹಿತಿ ಆಧರಿಸಿ, ನಂದಿನಿ ಲೇಔಟ್‍ನ ಪೆÇಲೀಸ್ ಇನ್ಸ್‍ಪೆಕ್ಟರ್ ಲೋಹಿತ್ ಹಾಗೂ ಬಾಗಲಗುಂಟೆಯ ಪೆÇಲೀಸ್ ಇನ್ಸ್‍ಪೆಕ್ಟರ್ ಶಿವಸ್ವಾಮಿ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಕೈಗೊಂಡರು.

       ಆರೋಪಿಗಳಿಬ್ಬರು ಸೋಲದೇವನಹಳ್ಳಿಯ ಸಾಸುವೆಘಟ್ಟದ ಬಳಿ ಹೋಗುತ್ತಿರುವ ಖಚಿತ ಮಾಹಿತಿ ಆಧರಿಸಿ ಬಂಧನಕ್ಕೆ ಮುಂದಾದಾಗ ಪೆÇಲೀಸರನ್ನು ಕಂಡ ಕೂಡಲೇ ಸುರೇಂದ್ರ ಸಿಂಗ್ ಹಾಗೂ ಕರಣ್ ಗುಪ್ತ ಓಡಿಹೋಗತೊಡಗಿದ್ದಾರೆ. ಬೆನ್ನಟ್ಟಿಹೋದ ತರಬೇತಿನಿರತ ಸಬ್‍ಇನ್ಸ್‍ಪೆಕ್ಟರ್‍ಗಳಾದ ಪ್ರಭು, ರಾಜಾಸಾಬ್, ಪೇದೆಗಳಾದ ಪ್ರಕಾಶ್ ಹಾಗೂ ಗಣೇಶ್ ಹಿಡಿಯಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಕಾಲುಗಳಿಗೆ ಗುಂಡು

       ಈ ವೇಳೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಇನ್ಸ್‍ಪೆಕ್ಟರ್‍ಗಳಾದ ಲೋಹಿತ್ ಹಾಗೂ ಶಿವಸ್ವಾಮಿ ಅವರು ಶರಣಾಗುವಂತೆ ಎಚ್ಚರಿಕೆ ನೀಡಿದರೂ ಮತ್ತೆ ಪೆÇಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಮತ್ತೆ ತಲಾ ಎರಡು ಸುತ್ತು ಗುಂಡುಗಳನ್ನು ಹಾರಿಸಿದ್ದು, ಅವುಗಳು ಇಬ್ಬರ ಎರಡೂ ಕಾಲುಗಳಿಗೆ ತಗುಲಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ.

       ಕೂಡಲೇ ಅವರನ್ನು ಬಂಧಿಸಿ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತನಿಖೆ ಕೈಗೊಂಡಾಗ ಅನಾರೋಗ್ಯದ ಕಾರಣ ಹೇಳಿ, ಆರೋಪಿಗಳು ಕರೆದುಕೊಂಡು ಬಂದಿದ್ದ ಮಹಿಳೆ ಪರಾರಿಯಾಗಿದ್ದು, ಮನೆಯಲ್ಲಿದ್ದ ಸುರೇಂದ್ರ ಸಿಂಗ್‍ನ ಪತ್ನಿ ಹಾಗೂ ಕರಣ್ ಗುಪ್ತ ಜೊತೆ ಸಂಗ ಬೆಳೆಸಿದ್ದ ವೇಶ್ಯೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಕೈಗೊಳ್ಳಲಾಗಿದೆ ಎಂದು ಶಶಿಕುಮಾರ್ ತಿಳಿಸಿದರು.


     ದೆಹಲಿಯಿಂದ ಕೆಲ ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಗಳು ಆರೋಗ್ಯ ಸರಿಯಿಲ್ಲದ ತಾಯಿಗೆ ನಗರದಲ್ಲಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಬೇಕೆಂದು ಹೇಳಿ ಮಹಿಳೆಯೊಬ್ಬರನ್ನು ತೋರಿಸಿ ಮಾಲೀಕರಿಗೆ ಸುಳ್ಳು ಹೇಳಿ ಮಾದನಾಯಕನಹಳ್ಳಿಯಲ್ಲಿ ಬಾಡಿಗೆ ಮನೆಮಾಡಿಕೊಂಡಿದ್ದರು.

      ಸುರೇಂದ್ರ ಸಿಂಗ್ ಜೊತೆಯಲ್ಲಿ ಪತ್ನಿಯನ್ನು ಕರೆತಂದಿದ್ದರೆ, ಕರಣ್ ಗುಪ್ತ ಸ್ಥಳೀಯ ವೇಶ್ಯೆಯೊಬ್ಬರ ಸಂಗ ಬೆಳೆಸಿ ಆಕೆಯನ್ನು ಬಾಡಿಗೆಗಿದ್ದ ಮನೆಗೆ ತಂದಿಟ್ಟುಕೊಂಡಿದ್ದ. ಆಕೆಯ ಮೂಲಕ ಕಳವು ಮಾಡಿದ ಚಿನ್ನಾಭರಣ,ಕೆಲವನ್ನು ವಿಲೇವಾರಿ ಮಾಡಿದರೆ ಮತ್ತೆ ಕೆಲವನ್ನು ದೆಹಲಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು.ಜೊತೆಯಲ್ಲಿದ್ದ ವೇಶ್ಯೆಯು ನಗರದ ಪ್ರದೇಶಗಳ ಪರಿಚಯವನ್ನು ಆರೋಪಿಗಳಿಗೆ ಮಾಡಿಕೊಟ್ಟಿದ್ದಳು.

      ಬಾಗಲಗುಂಟೆ, ಸೋಲದೇವನಹಳ್ಳಿ, ಬ್ಯಾಡರಹಳ್ಳಿ, ಮಾದನಾಯಕನಹಳ್ಳಿ, ಇನ್ನಿತರ ಕಡೆಗಳಲ್ಲಿ ಕಪ್ಪುಬಣ್ಣದ ಬೈಕ್‍ನಲ್ಲಿ ಹೆಲ್ಮೆಟ್ ಧರಿಸಿ ಸಂಚರಿಸುತ್ತಾ ಇಲ್ಲಿಯವರೆಗೆ 20ಕ್ಕೂ ಹೆಚ್ಚು ಸರಗಳವು, ಸುಲಿಗೆ ಕೃತ್ಯಗಳನ್ನು ನಡೆಸಿದ ಆರೋಪಿಗಳು ಭಾನುವಾರ ತಡರಾತ್ರಿ ಎರಡು ನಗದು ಮೊಬೈಲ್ ಸುಲಿಗೆ ಮಾಡಿದ್ದು ಕಾರ್ಯಾಚರಣೆ ನಡೆಸಿದ ಪೊಲೀಸರು ಗುಂಡು ಹಾರಿಸಿ ಬಂಧಿಸಿ ಉತ್ತಮ ಕೆಲಸ ಮಾಡಿದ್ದಾರೆ.

ಶಶಿಕುಮಾರ್ ಡಿಸಿಪಿ ಉತ್ತರ ವಿಭಾಗ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap