ಚಿಕ್ಕನಾಯಕನಹಳ್ಳಿ
ಪಟ್ಟಣದ ನೆಹರು ವೃತ್ತದ ತಿರುವಿನಲ್ಲಿ ರಾತ್ರಿ ರಾಜಸ್ಥಾನದಿಂದ ಮೈಸೂರಿಗೆ ತೆರಳುತ್ತಿದ್ದ ಲಾರಿ ಮಗುಚಿ ಬಿದ್ದುದರಿಂದ ಲಾರಿಯಲ್ಲಿದ್ದ ಗೋಧಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ, ಇದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿದೆ.
ನೆಹರು ವೃತ್ತದಲ್ಲಿ ಈಗಾಗಲೇ 3 ಬಾರಿ ಲಾರಿ ತಿರುವಿನಲ್ಲಿ ಬಿದ್ದಿದೆ. ನೆಹರು ವೃತ್ತದ ತಿರುವಿಗೂ ಮುಂಚೆ ಈ ಭಾಗದಲ್ಲಿ ಹಂಪ್ಸ್ ಹಾಕಿಸುವಂತೆ ಜನರು ಒತ್ತಾಯಿಸಿದ್ದಾರೆ. ಇದರಿಂದ ವಾಹನಗಳು ತಿರುವಿನಲ್ಲಿ ನಿಧಾನವಾಗಿ ಚಲಿಸಲು ಸಹಕಾರಿಯಾಗುತ್ತದೆ. ಈ ಸ್ಥಳದಲ್ಲಿ ನಿತ್ಯ ನೂರಾರು ಜನ ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣ ಮಾಡಲು ನಿಂತಿರುತ್ತಾರೆ. ವೇಗವಾಗಿ ಬಂದಂತಹ ವಾಹನಗಳು ಈ ರೀತಿ ಅಪಘಾತವಾದರೆ ಜನರಿಗೂ ಪ್ರಾಣಹಾನಿ ಉಂಟಾಗಲಿದೆ. ಹಾಗಾಗಿ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ಹರಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
