ಬೆಂಗಳೂರು
ಕಾಂಗ್ರೆಸ್ ಜೆಡಿಎಸ್‍ನ ಯಾವೊಬ್ಬ ಅತೃಪ್ತ ಶಾಸಕರು ನನ್ನ ಜೊತೆ ಇಲ್ಲ ಎಲ್ಲರೂ ದೇವರ ಲಿಂಕ್‍ನಲ್ಲಿ ಇದ್ದಾರೆ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ತಿಳಿಸಿದ್ದಾರೆ.
ನಾನು ಯಾವ ಕಾಂಗ್ರೆಸ್ ಪಕ್ಷದ ಶಾಸಕರ ರಕ್ಷಣೆಗೂ ಹೋಗಿಲ್ಲ ನಾನು ಮುಂಬೈ ತೆರಳಿದ್ದು ನಿಜ. ಅಲ್ಲಿದ್ದ ಪಕ್ಷೇತರ ಶಾಸಕರ ಬಳಿ ನಮ್ಮನ್ನು ಬೆಂಬಲಿಸಿ ಎಂದು ಕೇಳಲು ಹೋಗಿದ್ದೆ. ಈ ವೇಳೆ ಯಾವ ಅತೃಪ್ತ ಕಾಂಗ್ರೆಸ್ ಶಾಸಕರನ್ನು ನಾನು ಭೇಟಿ ಮಾಡಿಲ್ಲ. ರಾಜೀನಾಮೆ ಪರ್ವಕ್ಕೂ ನಮಗೂ ಏನೂ ಸಂಬಂಧವಿಲ್ಲ ಎಂದು ಹೇಳಿದರು.
ಪದ್ಮನಾಭನಗರದಲ್ಲಿ ನಡೆದ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದು ನನ್ನ ಕ್ಷೇತ್ರ, ನಾನು ಇಲ್ಲಿನ ಶಾಸಕ. ಯಾವಾಗಲೂ ನಾನು ಇಲ್ಲಿಗೆ ಬರುತ್ತಿರುತ್ತೇನೆ. ಇಲ್ಲಿ ಸದಸ್ಯತ್ವ ಅಭಿಯಾನಕ್ಕೆ ಬಂದಿದ್ದೇವೆ ಎಂದರು.
ನಾನು ಕಾಂಗ್ರೆಸ್ಸಿನ ಆರು ಜನರನ್ನು ಸಂಪರ್ಕಿಸಿಲ್ಲ, 8 ಜನರನ್ನೂ ಸಂಪರ್ಕ ಮಾಡಿಲ್ಲ. ಅದರಲ್ಲೂ ರಾಜೀನಾಮೆ ನೀಡಿರುವ ಬೆಂಗಳೂರಿನ ಶಾಸಕರನ್ನಂತೂ ನಾನು ಮಾತನಾಡಿಸಿಲ್ಲ. ಅವರಿಗೂ ನನಗೂ ಪರಿಚಯವೇ ಇಲ್ಲ. ಅವರನ್ನು ನಾನು ನೋಡೇ ಎಲ್ಲ ಎಂದರು.
ಸಚಿವ ಡಿ.ಕೆ ಶಿವಕುಮಾರ್ ಅವರು ಮೊದಲೇ ಶಾಸಕರ ಸಮಸ್ಯೆ ಬಗೆಹರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮೈತ್ರಿಯಲ್ಲಿ ಮುಖ್ಯಮಂತ್ರಿ ಹಾಗೂ ಇತರೇ ನಾಯಕರು ಶಾಸಕರ ಸಮಸ್ಯೆ ಕೇಳಿ ಪರಿಹಾರ ನೀಡಿದ್ದರೆ ಯಾರು ಕೂಡ ರಾಜೀನಾಮೆ ನೀಡುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರುಶಾಸಕರಾದ ವಿ. ಸೋಮಣ್ಣ, ಸತೀಶ್ ರೆಡ್ಡಿ ಇನ್ನಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








