ಪಾವಗಡ: ಪ್ಲೋರೈಡ್ ನೀರಿನ ಸಮಸ್ಯೆಗೆ ಪರಿಹಾರ ಯಾವಾಗ!!??

 ಪಾವಗಡ

         ತಾಲ್ಲೂಕಿನಲ್ಲಿ ಪ್ಲೋರೈಡ್ ನೀರು ಕುಡಿದು ರೋಗರುಜಿನಗಳಿಗೆ ತುತ್ತಾಗುತ್ತಿರುವುದನ್ನು ಕಂಡು ಪಾವಗಡ ತಾಲ್ಲೂಕಿಗೆ ಶಾಶ್ವತ ಶುದ್ದ ಕುಡಿಯುವ ನೀರು ಕೊಡಬೇಕೆಂದು ರೈತ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣರೆಡ್ಡಿರವರ ನೇತೃತ್ವದಲ್ಲಿ ತಾಲ್ಲೂಕಿನ ಸುಮಾರು 30 ಸಂಘ ಸಂಸ್ಥೆಗಳು ಸೇರಿ ಹೈಕೋರ್ಟ್ ಮೊರೆ ಹೋದ ನಂತರ ಕೋರ್ಟ್ ಆದೇಶಿಸಿದ ನಂತರ ಜಲಮಂಡಳಿ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಎರಡು ಇಲಾಖೆಯ ಅಧಿಕಾರಿಗಳು ತರಾತುರಿಯಲ್ಲಿ ನ್ಯಾಯಾಲಯಕ್ಕೆ ಸರ್ವೆ ವರದಿಯನ್ನು ಸಿದ್ದಪಡಿಸಿದರು.

           ಪಾವಗಡ ತಾಲ್ಲೂಕಿನ ಜನತೆ ಬಹಳ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಾ ಬಂದಿದ್ದು, 15 ವರ್ಷಗಳ ಹಿಂದೇನೆ ಕೊಳವೆ ಬಾವಿಗಳು 800 ರಿಂದ 1000 ಅಡಿಯಷ್ಟು ಕೊರೆಸಿದರು ನೀರು ಬರುತ್ತಿಲ್ಲ. ಆಳದಷ್ಟು ಕೊಳವೆ ಬಾವಿಗಳು ಕೊರೆಸಿದಷ್ಟು ಪ್ಲೋರೈಡ್ ನೀರು ಕುಡಿದು ಇಲ್ಲಿನ ಜನತೆ ರೋಗರುಜಿನಗಳಿಗೆ ಬಲಿಯಾಗಿ, ಅಂಗವಿಕಲತೆಗೆ ಒಳಗಾಗುತ್ತಿರುವುದು ರಾಜ್ಯ ಸರ್ಕಾರಕ್ಕೂ ಗೊತ್ತು.

          ಆದರೆ ರಾಜ್ಯ ರಾಜಕಾರಣಿಗಳು ನಿರ್ಲಕ್ಷ ವಹಿಸಿದ್ದರು,ಈ ನಿಟ್ಟಿನಲ್ಲಿ ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣರೆಡ್ಡಿರವರು ಸಾರ್ವಜನಿಕರ ಹಿತಾಸಕ್ತಿಯ ಅರ್ಜಿಯನ್ನು ಉಚ್ಛನ್ಯಾಯಾಲಯದಲ್ಲಿ ಸಲ್ಲಿಸಿದ್ದು, ಪಾವಗಡ ತಾಲ್ಲೂಕಿಗೆ ತುಂಗಾಭದ್ರಾ ನದಿಯಿಂದ ಚಿತ್ರದುರ್ಗ, ಚಳ್ಳಕೆರೆ, ಪರುಶುರಾಮಪುರದ ಮೂಲಕ ನೀರು ಸರಬರಾಜು ಮಾಡಲು 2014 ರಲ್ಲಿ ಕೋರ್ಟ್ ಆದೇಶ ನೀಡಿದ್ದು, ಈ ಆದೇಶದ ಮೇರೆಗೆ ಜಲಾನಯನ ಇಲಾಖೆಯ ಅಧಿಕಾರಿಗಳು ನ್ಯಾಯಾಲಯಲಕ್ಕೆ ಲಿಖಿತವಾಗಿ ನೀರು ಬಿಡಲು ಒಪ್ಪಿಕೊಂಡಿರುವುದಾಗಿ ಮಾಹಿತಿ ತಿಳಿದು ಬಂದಿತು.

         ಆಂಧ್ರ ಸರ್ಕಾರ ತುಂಗಾಭದ್ರಾ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡಲು ಆಂಧ್ರ ಸರ್ಕಾರ ಯೋಜನೆ ಹಮ್ಮಿಕೊಂಡಿದ್ದು, ಪೈಪ್‍ಲೈನ್ ಪಾವಗಡ ಪ್ರಾಂತ್ಯದಲ್ಲಿ ಪೈಪುಗಳ ಮೂಲಕ ಮಡಕಶಿರ ತಾಲ್ಲೂಕಿಗೆ ಹಾದುಹೋಗುವ ಯೋಜನೆ ಪೈಪ್‍ಲೈನ್ ಕಾಮಗಾರಿ ಮಾಡುವ ಸಂದರ್ಭದಲ್ಲಿ ರೈತ ಸಂಘ ಸಂಸ್ಥೆಗಳು ಹೋರಾಟ ಕೈಗೊಂಡು ಕರ್ನಾಟಕ ರಾಜ್ಯ ಗಮನಕ್ಕೆ ತಂದರು ಕಿವಿಗೂಡದೆ ನಿರ್ಲಕ್ಷ ತೋರಿಸಿದ ಕಾರಣ ಇದುವರೆಗೂ ಪಾವಗಡಕ್ಕೆ ಕುಡಿಯುವ ನೀರು ನೀಡಲು ಸಾಧ್ಯವಾಗಿಲ್ಲ ಎಂದು ಆಗಿನ ಹೋರಾಟದ ರೈತ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣರೆಡ್ಡಿ ಆರೋಪಿಸಿದ್ದಾರೆ.

           ಹೈ ಕೋರ್ಟ್ ಆದೇಶ ನೀಡಿದ ನಂತರ ತುರ್ತಾಗಿ ಪಾವಗಡ ತಾಲ್ಲೂಕಿನ ಜನತೆಗೆ ಪ್ಲೋರೈಡ್ ರಹಿತ ಶುದ್ದ ಕುಡಿಯುವ ನೀರು ಕಲ್ಪಿಸಲು ಡಿ.ಪ್ಲೊರೈಡ್ ಘಟಕಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಯೋಜನೆ ಜಾರಿಗೆ ತಂದು, ಹೆಚ್ಚು ಪ್ಲೋರೈಡ್ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಹಂತ ಹಂತವಾಗಿ ಪ್ರಾರಂಭವಾಗಿ ಈಗ 265 ಘಟಕಗಳನ್ನು ನಿರ್ಮಾಣ ಆಗಿದ್ದು, ಈ ಪ್ಲೋರೈಡ್ ಘಟಕಗಳನ್ನು ನಿರ್ವಹಣೆ ಮಾಡಲು ಟೆಂಡರ್ ಮೂಲಕ ಕಂಪನಿಗಳಿಗೆ ಗುತ್ತಿಗೆ ನೀಡಿ ಕೋಟ್ಯಂತರ ರೂಗಳನ್ನು ಸರ್ಕಾರ ಖರ್ಚು ಮಾಡಿದ್ದರೂ ಘಟಕಗಳ ಸ್ಥಾಪಿಸುವ ಕಂಪನಿ ಮಾಲಿಕರ ನಿರ್ವಹಣೆ ಸರಿಯಾಗಿ ಮಾಡದ ಕಾರಣ ಕೆಲವು ಘಟಕಗಳು ಕೆಟ್ಟು ನಿಂತಿದ್ದು, ಕೆಲವು ಘಟಕಗಳು ವ್ಯವಸ್ಥಿತವಾಗಿ ನಿರ್ಮಾಣವಾಗದ ಕಾರಣ ಶುದ್ದ ಕುಡಿಯುವ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ತಾಲ್ಲೂಕಿನ ಜನತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

        ಪಾವಗಡ ತಾಲ್ಲೂಕಿನಲ್ಲಿ ವಾಟರ್ ಪ್ಲಾಂಟ್ ಗುತ್ತಿಗೆ ಪಡೆದ ಮಾಲೀಕರು ಪ್ಲೋರೈಡ್ ಪ್ಲಾಂಟ್ ನಿರ್ಮಾಣ ಮಾಡಿ 70 ರಷ್ಟು ಗುತ್ತಿಗೆ ಹಣ ಪಡೆದು ಇನ್ನು ಉಳಿದ ಹಣ ಹಂತ ಹಂತವಾಗಿ ಪಡೆಯಲು ಅಗ್ರಿಮೆಂಟ್ ಮಾಡಿಕೊಂಡು ಪ್ಲಾಂಟ್ ನಿರ್ವಹಣೆ ಮಾಡಿ, ಇಷ್ಟು ವರ್ಷಗಳ ಅವಧಿಯವರೆಗೂ ಕಾನೂನು ರೀತಿಯಲ್ಲಿ ಗುತ್ತಿಗೆ ಪಡೆದಿದ್ದರೂ ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಇಲ್ಲದೆ ಶೇಕಡ 25 ರಷ್ಟು ಕೆಟ್ಟು ನಿಂತಿದ್ದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳಲು ಇವರ ಕೈಯಲ್ಲಿ ಇಲ್ಲದಂತಹ ಪರಿಸ್ಥಿತಿಗೆ ಸರ್ಕಾರ ಗುತ್ತಿಗೆ ಆಧಾರದ ಮೇಲೆ ಪ್ಲಾಂಟ್ ನಿರ್ಮಾಣ ಮಾಡಲು ಟೆಂಡರ್ ಮಾಡಿದ್ದಾರೆ ಎಂದು ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿದೆ.

          ಪಾವಗಡ ತಾಲ್ಲೂಕಿನಲ್ಲಿ 34 ಗ್ರಾಮ ಪಂಚಾಯಿತಿಗಳು ಇದ್ದು, ಕೋಟಗುಡ್ಡ ಗ್ರಾ.ಪಂ.ವ್ಯಾಪ್ತಿಯ 4 ಗ್ರಾಮಗಳಲ್ಲಿ ಒಟ್ಟು ಕೊಳವೆ ಬಾವಿಸಂಖ್ಯೆ ಒಟ್ಟು 33. ಇದರಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಖ್ಯೆ 11, ಸ್ಥಗಿತಗೊಂಡ ಕೊಳವೆ ಬಾವಿಗಳ ಸಂಖ್ಯೆ 22, ನಲಿಗಾನಹಳ್ಳಿ ಗ್ರಾ.ಪಂ.ಗ್ರಾಮಗಳ ಸಂಖ್ಯೆ 10, ಇದರಲ್ಲಿ ಒಟ್ಟು ಕೊಳವೆ ಬಾವಿಗಳು 33 ಇದ್ದು, 9 ಸ್ಥಗಿತಗೊಂಡಿವೆ. ಮಂಗಳವಾಡ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳ ಸಂಖ್ಯೆ 6 ರಲ್ಲಿ 34 ಕೊಳವೆ ಬಾವಿಗಳು ಇದ್ದು 16 ಸ್ಥಗಿತಗೊಂಡಿವೆ. ದೊಮ್ಮತಮರಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳು 6, ರಲ್ಲಿ ಒಟ್ಟು 44 ಕೊಳವೆ ಬಾವಿಗಳು ಇದ್ದು 32 ಸ್ಥಗಿತಗೊಂಡಿವೆ,

           ವೈ.ಎನ್.ಹೊಸಕೋಟೆ ಗ್ರಾ.ಪಂ.ವ್ಯಾಪ್ತಿಯ 24 ರಲ್ಲಿ 6 ಸ್ಥಗಿತಗೊಂಡಿವೆ, ಬ್ಯಾಡನೂರು ಗ್ರಾ.ಪಂ.ವ್ಯಾಪ್ತಿಯ 6 ಗ್ರಾಗಳಲ್ಲಿ 20 ಕೊಳವೆ ಬಾವಿಗಳಲ್ಲಿ 8 ಸ್ಥಗಿತಗೊಂಡಿವೆ, ಕೆ.ಟಿ.ಹಳ್ಳಿ ಗ್ರಾ.ಪಂ.ವ್ಯಾಪ್ತಿಯ 5 ಗ್ರಾಮಗಳಲ್ಲಿ 29 ಕೊಳವೆ ಬಾವಿಗಳು ಇದ್ದು 2 ಸ್ಥಗಿತಗೊಂಡಿವೆ, ಸಿ.ಕೆ.ಪುರ ಗ್ರಾ.ಪಂ.ವ್ಯಾಪ್ತಿಯ 8 ಗ್ರಾಮಗಳಲ್ಲಿ 35 ಕೊಳವೆ ಬಾವಿಗಳಲ್ಲಿ 14 ಸ್ಥಗಿತಗೊಂಡಿವೆ, ಪಾವಗಡ ಗ್ರಾಮಾಂತರ ರೊಪ್ಪ ಗ್ರಾ.ಪಂ.ವ್ಯಾಪ್ತಿಯ 7 ಗ್ರಾಮಗಳು ಇದ್ದು 20 ಕೊಳವೆ ಬಾವಿಗಳಲ್ಲಿ 3 ಸ್ಥಗಿತಗೊಂಡಿವೆ, ಬಿ.ಕೆ.ಹಳ್ಳಿ ಗ್ರಾ.ಪಂ.ವ್ಯಾಪ್ತಿಯ 5 ಗ್ರಾಮಗಳು ಇದ್ದು 16 ಕೊಳವೆ ಬಾವಿಗಳಲ್ಲಿ 3 ಸ್ಥಗಿತಗೊಂಡಿವೆ, ಜೆ.ಅಚ್ಚಮ್ಮನಹಳ್ಳಿ ಗ್ರಾ.ಪಂ.ವ್ಯಾಪ್ತಿಯ 5 ಗ್ರಾಮಗಳು ಇದ್ದು 16 ಕೊಳವೆ ಬಾವಿಗಳಲ್ಲಿ 3 ಸ್ಥಗಿತಗೊಂಡಿವೆ,

            ನಾಗಲಮಡಿಕೆ ಗ್ರಾ.ಪಂ.ವ್ಯಾಪ್ತಿಯ 7 ಗ್ರಾಮಗಳು ಇದ್ದು, 29 ಕೊಳವೆ ಬಾವಿಗಳಲ್ಲಿ 10 ಸ್ಥಗಿತಗೊಂಡಿವೆ, ವಿರುಪಸಮುದ್ರ ಗ್ರಾ.ಪಂ.ವ್ಯಾಪ್ತಿಯ 8 ಗ್ರಾಮಗಳು ಎದ್ದು 23 ಕೊಳವೆ ಬಾವಿಗಳಲ್ಲಿ 4 ಸ್ಥಗಿತಗೊಂಡಿವೆ, ವಳ್ಳೂರು ಗ್ರಾ.ಪಂ.ವ್ಯಾಪ್ತಿಯ 5 ಗ್ರಾಮಗಳಲ್ಲಿ 29 ಕೊಳವೆ ಬಾವಿಗಳಲ್ಲಿ 10 ಸ್ಥಗಿತಗೊಂಡಿವೆ. ಕೊಡಮಡಗು ಗ್ರಾ.ಪಂ.ವ್ಯಾಪ್ತಿಯ 7 ಗ್ರಾಮಗಳಲ್ಲಿ 25 ಕೊಳವೆ ಬಾವಿಗಳು ಇದ್ದು 2 ಸ್ಥಗಿತಗೊಂಡಿವೆ, ರಾಜವಂತಿ ಗ್ರಾ.ಪಂ.ವ್ಯಾಪ್ತಿಯ 8 ಗ್ರಾಮಗಳಲ್ಲಿ 25 ಕೊಳವೆ ಬಾವಿಗಳಿದ್ದು 1 ಸ್ಥಗಿತಗೊಂಡಿದೆ, ಪಳವಳ್ಳಿ ಗ್ರಾ.ಪಂ.ವ್ಯಾಪ್ತಿಯ 6 ಗ್ರಾಮಗಳಲ್ಲಿ 28 ಕೊಳವೆ ಬಾವಿಗಳು ಇದ್ದು 11 ಸ್ಥಗಿತಗೊಂಡಿವೆ, ರಂಗಸಮುದ್ರ ಗ್ರಾ.ಪಂ.ವ್ಯಾಪ್ತಿಯ 5 ಗ್ರಾಮಗಳಲ್ಲಿ 33 ಕೊಳವೆ ಬಾವಿಗಳಿದ್ದು 17 ಸ್ಥಗಿತಗೊಂಡಿವೆ,

           ತಿರುಮಣಿ ಗ್ರಾ.ಪಂ.ವ್ಯಾಪ್ತಿಯ 4 ಗ್ರಾಮಗಳಲ್ಲಿ 17 ಕೊಳವೆ ಬಾವಿಗಳಿದ್ದು 2 ಸ್ಥಗಿತಗೊಂಡಿವೆ, ಕಾಮನದುರ್ಗ ಗ್ರಾ.ಪಂ ವ್ಯಾಪ್ತಿಯ 9 ಗ್ರಾಮಗಳಲ್ಲಿ 21 ಕೊಳವೆ ಬಾವಿಗಳಿದ್ದು 4 ಸ್ಥಗಿತಗೊಂಡಿವೆ, ಸಾಸಲಕುಂಟೆ ಗ್ರಾ.ಪಂ.ವ್ಯಾಪ್ತಿಯ 5 ಗ್ರಾಮಗಳಲ್ಲಿ 33 ಕೊಳವೆ ಬಾವಿಗಳಿದ್ದು 15 ಸ್ಥಗಿತಗೊಂಡಿವೆ, ರ್ಯಾಪ್ಟೆ ಗ್ರಾ.ಪಂ.ವ್ಯಾಪ್ತಿಯ 7 ಗ್ರಾಮಗಳಲ್ಲಿ 26 ಕೊಳವೆ ಬಾವಿಗಳಿದ್ದು 4 ಸ್ಥಗಿಗೊಂಡಿವೆ. ವೆಂಕಟಾಪುರ ಗ್ರಾ.ಪಂ.ವ್ಯಾಪ್ತಿಯ 5 ಗ್ರಾಮಗಳಲ್ಲಿ 14 ಕೊಳವೆ ಬಾವಿಗಳಲ್ಲಿ 3 ಸ್ಥಗಿತಗೊಂಡಿವೆ, ಪೋತಗಾನಹಳ್ಳಿ ಗ್ರಾ.ಪಂ.ವ್ಯಾಪ್ತಿಯ 7 ಗ್ರಾಮಗಳಲ್ಲಿ 19 ಕೊಳವೆ ಬಾವಿಗಳಿದ್ದು 1 ಸ್ಥಗಿತ ಗೊಂಡಿದೆ. ಪೊನ್ನಸಮುದ್ರ ಗ್ರಾ.ಪಂ.ವ್ಯಾಪ್ತಿಯ 7 ಗ್ರಾಮಗಳಲ್ಲಿ 33 ಕೊಳವೆ ಬಾವಿಗಳಿದ್ದು 19 ಸ್ಥಗಿತಗೊಂಡಿವೆ, ಚಿಕ್ಕಹಳ್ಳಿ ಗ್ರಾ.ಪಂ.ವ್ಯಾಪ್ತಿಯ 5 ಗ್ರಾಮಗಳಲ್ಲಿ 47 ಕೊಳವೆ ಬಾವಿಗಳಿದ್ದು 25 ಸ್ಥಗಿತಗೊಂಡಿವೆ, ಕನ್ನಮೇಡಿ ಗ್ರಾ.ಪಂ.ವ್ಯಾಪ್ತಿಯ 9 ಗ್ರಾಮಗಳಲ್ಲಿ 28 ಕೊಳವೆ ಬಾವಿಗಳಿದ್ದು 5 ಸ್ಥಗಿತಗೊಂಡಿವೆ,

         ಅರಸೀಕೆರೆ ಗ್ರಾ.ಪಂ.ವ್ಯಾಪ್ತಿಯ 9 ಗ್ರಾಮಗಳಲ್ಲಿ 51 ಕೊಳವೆ ಬಾವಿಗಳಿದ್ದು 28 ಸ್ಥಗಿತಗೊಂಡಿವೆ, ಬೂದಿಬೆಟ್ಟ ಗ್ರಾ.ಪಂ.ವ್ಯಾಪ್ತಿಯ 5 ಗ್ರಾಮಗಳಲ್ಲಿ 15 ಕೊಳವೆ ಬಾವಿಗಳಿದ್ದು 4 ಸ್ಥಗಿತಗೊಂಡಿವೆ, ಮರಿದಾಸನಹಳ್ಳಿ ಗ್ರಾ.ಪಂ.ವ್ಯಾಪ್ತಿಯ 5 ಗ್ರಾಮಗಳಲ್ಲಿ 43 ಕೊಳವೆ ಬಾವಿಗಳಿದ್ದು 31 ಸ್ಥಗಿತಗೊಂಡಿವೆ, ಗುಜ್ಜನಡು ಗ್ರಾ.ಪಂ.ವ್ಯಾಪ್ತಿಯ 10 ಗ್ರಾಮಗಳಲ್ಲಿ 46 ಕೊಳವೆ ಬಾವಿಗಳಿದ್ದು 17 ಸ್ಥಗಿತಗೊಂಡಿವೆ, ವದನಕಲ್ಲು ಗ್ರಾ.ಪಂ.ವ್ಯಾಪ್ತಿಯ 6 ಗ್ರಾಮಗಳಲ್ಲಿ 17 ಕೊಳವೆ ಬಾವಿಗಳಲ್ಲಿ ಸಹ ನೀರು ಬರುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದು,

           34 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 920 ಕೊಳವೆ ಬಾವಿಗಳಲ್ಲಿ 586 ಕೊಳವೆ ಬಾವಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು 334 ಕೊಳವೆ ಬಾವಿಗಳಲ್ಲಿ ಸ್ಥಗಿತಗೊಂಡಿದ್ದು ಇದರಲ್ಲಿ ಇತ್ತೀಚೆಗೆ ಇನ್ನೂ ಕೆಲವು ಕೊಳವೆ ಬಾವಿಗಳಲ್ಲಿ ನೀರು ನಿಂತು, ಆಳಕ್ಕೆ ನೀರು ಕುಸಿಯುವುದರಿಂದ ಕೊಳವೆ ಬಾವಿಗಳ ನಿರ್ವಹಣೆ ಮಾಡಲು ಗ್ರಾ.ಪಂಚಾಯಿತಿ ಹೊರೆಯಲಾರದಷ್ಟು ವೆಚ್ಚ ಮಾಡಬೇಕಾದ ಅನಿವಾರ್ಯ ಎದುರಿಸಬೇಕಾಗಿದೆ ಎಂದು ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿದ್ದು, ಕೆಲ ಗ್ರಾಮಗಳಿಗೆ ಟ್ಯಾಂಕರ್‍ನಿಂದ ಸಪ್ಲೆಮಾಡುತ್ತಿದ್ದು, ಕೆಲಗ್ರಾಮಗಳಿಲ್ಲಿ ಪನಃ ನೀರಿಲ್ಲದೆ ರೈತ ಕೊಳವೆ ಬಾವಿಗಳಿಂತ ಸಾರ್ವಜನಿಕರು ಕುಡಿಯವ ನೀರು ತರುತ್ತಿದ್ದು, ಇದರ ಜೊತೆಗೆ ಸರ್ಕಾರ ಹೊಸದಾಗಿ ಕೊಳವೆ ಬಾವಿಗಳು ಕೊರೆಸುತ್ತಿದ್ದರು ಸಾವಿರಾರು ಅಡಿ ಆಳ ಕೊರೆದರು ನೀರು ಸಿಗುವುದು ಕಷ್ಟಕರವಾಗಿದ್ದು, ಪಾವಗಡ ತಾಲ್ಲೂಕಿಗೆ ಒಂದು ಶಾಶ್ವತವಾದ ಶುದ್ದಕುಡಿಯುವ ನೀರು ಮತ್ತು ನೀರಾವರಿ ಯೋಜನೆ ಸರ್ಕಾರ ರೂಪಿಸಬೇಕಾಗಿದೆ ಎಂದು ತಾಲ್ಲೂಕಿನ ಜನತೆಯ ಅಭಿಪ್ರಾಯವಾಗಿದೆ.

          ತಾಲ್ಲೂಕಿನಲ್ಲಿ ಬೇಸಿಗೆ ಪ್ರಾರಂಭದಲ್ಲಿಯೇ ಕೆಲವು ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ನಿಂತಿದ್ದು, ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ನೀರಿನ ಹಾಹಾಕಾರ ತಲೆ ದೋರಿದ್ದು, ನಿರ್ವಹಣೆ ಮಾಡಲು ಸಾಧ್ಯವಾಗದೆ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗುತ್ತಿದೆ ಎಂದು ಕೆಲ ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿದೆ.
ಇದಕ್ಕೆಲ್ಲ ಪರಿಹಾರವಾಗಬೇಕಾದರೆ ಸರ್ಕಾರ ದೀರ್ಘವಾಗಿ ಚಿಂತನೆ ಮಾಡಿ ಪಾವಗಡ ತಾಲ್ಲೂಕಿಗೆ ಶಾಶ್ವತ ಶುದ್ದಕುಡಿಯುವ ನೀರು ಮತ್ತು ನೀರಾವರಿಯೋಜನೆ ಜಾರಿಗೊಳಿಸಲು ತಾಲ್ಲೂಕು ಜನತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

         ತಾಲ್ಲೂಕಿನ ವಿವಿಧ ಇಲಾಖೆಯ ಕಚೇರಿಗಳಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ, ಕಚೆರಿಗೆ ಬಂದ ಸಾರ್ವಜನಿಕರು ದಾಹ ತೀರಿಸಿಕೊಳ್ಳುತ್ತಾರೆ. ಕಚೇರಿಯ ಅಧಿಕಾರಿಗಳು ಒಂದು ಕ್ಯಾನ್ ನೀರು ಇಡಲು ಸಹ ಆಗುತ್ತಿಲ್ಲ, ಇನ್ನು ಮುಂದೆಯಾದರು ಕುಡಿಯುವ ನೀರು ಇಡಿ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣರೆಡ್ಡಿ ಒತ್ತಾಯಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap