ಹಾವೇರಿ :
ಜಿಲ್ಲೆಯ ಸವಣೂರ ತಾಲೂಕಿನ ಅತಿ ದೊಡ್ಡ ಹೋಬಳಿ ಖ್ಯಾತಿ ಪಡೆದ ಹತ್ತಿಮತ್ತೂರ ಹೋಬಳಿ.ತಾಲೂಕಿನ ಹೋಬಳಿಗೆ ಸಂಬಂಧಿಸಿ ಕಛೇರಿಗಳು ಇಲ್ಲಿ ಕಾರ್ಯನಿರ್ವಹಿಸುತ್ತೇವೆ. ಆದರೆ ಇಲ್ಲಿಗೆ ಬರುವರು ಮಾತ್ರ ಯಾವುದೇ ಜಲಮಾರ್ಗ ವಾಯುಮಾರ್ಗದಿಂದ ಬರುವುದಿಲ್ಲ. ಕೇವಲ ನೆಲ ಮಾರ್ಗವೇ ಅಂದರೆ ರಸ್ತೆ ಮೂಲಕ ತಮ್ಮ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಲು ಬರುದುಂಟು. ಇಲ್ಲಿನ ರೋಡಿನ ಗತಿ ಅಧೋಗತಿ ಎಂತಲೇ ಹೇಳಬಹುದು.
ಹೋಬಳಿ ಕೇಂದ್ರ ಸ್ಥಾನ :
ತಾಲೂಕಿನಿಂದು ಸುಮಾರು 12 ಕಿ.ಮೀ ದೂರದಲ್ಲಿರುವ ಈ ಪ್ರದೇಶ ಇದರ ಸುತ್ತಲು 30 ಕ್ಕೂ ಹೆಚ್ಚು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ದಿನನಿತ್ಯ ಸಾವಿರಾರು ಜನರು ಇದೇ ಹತ್ತಿಮತ್ತೂರ ಹೋಬಳಿಯ ಮೂಲಕವೇ ಹೋಗಬೇಕಾಗಿದೆ.
ಕೆಲಸಕ್ಕೆ ನಿತ್ಯ ಸಾರ್ವಜನಿಕರು ಸಂಚಾರ :
ಹೋಬಳಿ ಕೇಂದ್ರವಾದ್ದರಿಂದ ಇಲ್ಲಿ ಸರ್ಕಾರಿ ಆಸ್ಪತ್ರೆ.ನಾಡ ಕಛೇರಿ.ಕೃಷಿ ಕಛೇರಿ.ಗ್ರಾಮ ಪಂಚಾಯತಿ.ಪಿಯು ಕಾಲೇಜು ಸೇರಿದಂತೆ ಸಾರ್ವಜನಿಕರಿಗೆ ಅವಶ್ಯಕವಾಗಿಬೇಕಾಗಿರುವ ಕಛೇರಿಗಳು ಇದ್ದು, ಇಲ್ಲಿಗೆ ಬರಬೇಕಾದರೆ ಮೈಜುಮ್ಮೆನ್ನುವ ಹಾಗೆ ಆಗಿದೆ ಕಾರಣ ರಸ್ತೆಗಳು ಹದಗೆಟ್ಟ ಹೋಗಿದ್ದು, ತಗ್ಗು ಕಿತ್ತೋದ ಡಾಂಬರನಿಂದ ರಸ್ತೆಗಳು ಹಾಳಾಗಿವೆ.
ಜನರ ಬ್ಯಾಕ್ ಪೇನ್ ಬಳಲಾಟ:
ನಿತ್ಯ ಜನರು ಕೆಲಸ ಕಾರ್ಯಗಳಿಗೆ ಹೋಗುವವರು ಹಾಗೂ ಬರುವವರು ಹೆಚ್ಚಾಗಿ ಬೈಕ್ ಬಳಸುತ್ತಾರೆ. ಹದಗೆಟ್ಟ ರಸ್ತೆಯಲ್ಲಿ ಓಡ್ಯಾಡಿ ತಾವು ಬೆನ್ನು ನೋವಿನಿಂದ ಬಳಲುವ ಹಾಗೆ ಆಗಿದೆ. ಆಸ್ಪತ್ರೆಗೆ ಹೋದರೆ ನೀವು ಬೈಕನಲ್ಲಿ ಸಂಚಾರ ಮಾಡುವುದನ್ನೇ ಬಿಟ್ಟುಬಿಡಿ ಇಲ್ಲವೇ ಕಡಿಮೆ ಮಾಡಬೇಕು ಎಂದು ವೈಧ್ಯರು ಸಲಹೆ ನೀಡುತ್ತಾರೆ ಎಂದು ಚಾಲಕರು ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.
ಈ ಬಾರಿ ಮಳೆಯಿಂದ ರಸ್ತೆ ನಾಶ :
ಮಳೆಗಾಲದಲ್ಲಿ ಈ ಬಾರಿ ಅತಿವೃಷ್ಟಿಯಿಂದ ನಾಶವಾಗಿದ್ದು, ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆ ಇಲ್ಲಿಯ ವರಿಗೆ ಏನು ಮಾಡಿದೆ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.ಸರ್ಕಾರ ರೋಡುಗಳಿಗೆ ಅಷ್ಟು ಹಣ ಖರ್ಚು ಮಾಡಿದೆ ಅಂತಾ ಹೇಳುತ್ತಾರೆ ನಮ್ಮ ರೋಡುಗಳು ಕಾಣುವುದಿಲ್ಲವಾ ? ಎಂದು ಆರೋಪಿಸುವಂತಾಗಿದೆ.ಈ ಹತ್ತಿಮತ್ತೂರ ಹೋಬಳಿ ತಾಲೂಕ ವ್ಯಾಪ್ತಿ ಸವಣೂರು ಆಗಿದೆ. ಆದರೆ ಇಲ್ಲಿನ ಮತದಾರರು ಹಾವೇರಿ ವಿಧಾನ ಸಭಾ ವ್ಯಾಪ್ತಿಯ ಶಾಸಕರಿಗೆ ಮತ ಹಾಕುವಂತಾಗಿದ್ದು, ಸವಣೂರ-ಶಿಗ್ಗಾವ ಶಾಸಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೇಳಬೇಕಾ ? ಹಾವೇರಿ ಕ್ಷೇತ್ರದ ಶಾಸಕ ನೆಹರೂ ಓಲೇಕಾರ ಕೇಳಬೇಕಾ ? ತಮ್ಮ ತಮ್ಮಲ್ಲಿಯೇ ಗೊಂದಲದಲ್ಲಿ ಇರುವಂತಾಗಿದೆ.
ಜಿ.ಪಂ ಸದಸ್ಯ ಶಿವರಾಜ ಅಮರಾಪೂರ ಅಭಿವೃದ್ಧಿಯಲ್ಲಿ ವಿಫಲತೆ ಕಂಡ್ರಾ ?
ಈ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯ ಶಿವರಾಜ ಅಮರಾಪೂರ ಇವರು ತಮ್ಮ ಕ್ಷೇತ್ರದ ಹೋಬಳಿ ವ್ಯಾಪ್ತಿಯಲ್ಲಿ ನೂರಾರು ಸಮಸ್ಯೆಗಳು ಕಂಡರೂ ಏನು ಮಾಡುತ್ತಿದ್ದಾರೆ ಎಂಬ ಕೂಗು ಮನಸ್ಸಿನೊಳಗೆ ಇದೆ. ಕ್ಷೇತ್ರದ ಅಭಿವೃದ್ಧಿ ಮಾಡಲಿ ಎಂದು ಕ್ಷೇತ್ರದ ಮತದಾರರು ಇವರಿಗೆ ಮತ ನೀಡಿದರೆ ಇವರ ಕಾರ್ಯ ಜನರಿಗೆ ಅಷ್ಟೊಂದು ತೃಪ್ತಿಕರ ಅನಿಸಿಲ್ಲ. ಜನರಿಗೆ ಸಂಪರ್ಕಕ್ಕೆ ಸಿಗುವುದಿಲ್ಲ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅವರ ಪಾತ್ರವೇನು ? ಎಂಬ ಹಲವಾರು ಆರೋಪಗಳು ಕೇಳಲಾರಂಭಿಸಿವೆ.
ಸಾರ್ವಜನಿಕರ ಆಶೋತ್ತರಗಳ ಇಡೇರಿಕೆಗಾಗಿ ಜನಪ್ರತಿನಿಧಿಗಳು ಸರ್ಕಾರದ ಸೌಲಭ್ಯ ಒದಗಿಸುವುದು.ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗೆ ಇಲ್ಲಿನ ಸಮಸ್ಯೆಗಳನ್ನು ತಿಳಿಸಿ ಪರಿಹಾರ ಕ್ರಮಕ್ಕೆ ಮುಂದಾದರೆ ಮತ ಹಾಕಿದ ಜನರಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಹೋಬಳಿ ಕ್ಷೇತ್ರದ ಸಮಸ್ಯೆಗಳ ರೋಡಗಳ, ಇತರ ಸಮಸ್ಯೆಗಳ ಪರಿಹಾರ ಕ್ರಮಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ಮುಂದಾಗ್ತಾರಾ ? ಕಾದು ನೋಡಬೇಕಾಗಿದೆ.