ಹಾವೇರಿ :
ಜಿಲ್ಲೆಯ ರಾಣಿಬೇನ್ನೂರು ಹಾಗೂ ಹಿರೆಕೇರೂರು ವಿಧಾನ ಸಭಾ ಕ್ಷೇತ್ರಗಳು ಸೇರಿದಂತೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸಮರಕ್ಕೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ ಬೆನ್ನಲೇ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಧಿಪತಿ ಯಾರಾಗತ್ತಾರೆ ಎಂಬುದು ಜನರ ಕುತುಹಲಕ್ಕೆ ಕಾರಣವಾಗಿದೆ.
2018 ರಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಣಿಬೇನ್ನೂರು ಕ್ಷೇತ್ರದಿಂದ ಕೆಪಿಜೆಪಿ ಪಕ್ಷದಿಂದ ಆರ್. ಶಂಕರ್ ಅವರು ಕಾಂಗ್ರೆಸ್ ಪ್ರಭಾವಿ ಅಭ್ಯರ್ಥಿ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರನ್ನು ಮಣಿಸಿ ಶಾಸಕರಾಗಿದ್ದರು. ಇನ್ನು ಹಿರೆಕೇರೂರು ವಿಧಾನಸಭಾ ಕ್ಷೇತ್ರ ಬಿ.ಸಿ.ಪಾಟೀಲ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ಅವರಿಂದ 555 ಮತಗಳ ಅಂತರದಿಂದ ಗೆಲ್ಲುವ ಮೂಲಕ ಜಿಲ್ಲೆಯ ಏಕೈಕ ಕೈ ಶಾಸಕರಾಗಿ ಹೊರಹೊಮ್ಮಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮೂರು ರಾಜಕೀಯ ಪಕ್ಷಗಳಿಗೆ ಸ್ಪಷ್ಟ ಬಹುಮತದ ಬಂದಿರಲಿಲ್ಲ. ಅತಂತ್ರ ಪರಿಸ್ಥಿತಿಯಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರಕಾರ ರಚನೆ ಮಾಡಲಾಯಿತು. ಈ ಸಮಯದಲ್ಲಿ ರಾಣಿಬೇನ್ನೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಾಸಕ ಆರ್. ಶಂಕರ್ ಅವರು ಮೈತ್ರಿ ಸರಕಾರಕ್ಕೆ ಬೆಂಬಲ ನೀಡಿ, ಸಚಿವ ಸ್ಥಾನ ಗೀಟಿಸಿಕೊಂಡರು. ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿಕ್ಕ ಸಚಿವ ಸ್ಥಾನವನ್ನು ಕಳೆದುಕೊಂಡು ಅಸಮಾಧಾನ ತುಂಬಿಕೊಂಡಿದ್ದರು.
ಅಷ್ಟೋತ್ತಿಗೆ ಆಗಲೇ ಮೈತ್ರಿ ಭಿನ್ನಮತ ಸ್ಪೋಟಗೊಳುವದು ಒಂದು ಕಡೆಯಾದರೆ, ಬಿಜೆಪಿಯ ಆಫರೇಷನ್ ಕಮಲ ಸಕ್ರೀಯವಾಗಿತ್ತು. ಈ ವೇಳೆ ಅಸಮಾಧಾನದಿಂದ ಕುಡಿಯುತ್ತಿದ್ದ ಶಂಕರ್ ಅವರು ಬಿಜೆಪಿಯತ್ತ ಮುಖ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ನಾಯಕರು ಆರ್.ಶಂಕರ್ ಅವರನ್ನು ಮತ್ತೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಶಂಕರ್ ಆಯ್ಕೆಯಾಗಿದ್ದ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ನೊಂದಿಗೆ ವಿಲೀನಗೊಳಿಸಿ ಕಾಂಗ್ರೆಸ್ ಸದಸ್ಯತ್ವ ಪಡೆದುಕೊಂಡ ಪುನಃ ಎರಡನೇ ಬಾರಿ ಸಚಿವರಾಗಿ, ಕೆಲವೇ ದಿನಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಆಫರೇಷನ್ ಕಮಲಕ್ಕೆ ಬಲಿಯಾಗಿ ಮುಂಬೈ ಸೇರಿದರು.
ಬಳಿಕ ಸ್ಪೀಕರ್ ರಮೇಶಕುಮಾರ ಅವರಿಂದ ಅನರ್ಹಗೊಳ್ಳುವ ಮೂಲಕ ಆಯ್ಕೆ ಮಾಡಿದ ಕ್ಷೇತ್ರದ ಮತದಾರರ ಅವಮಾನ ಮಾಡಿದರು ಎಂದು ಆರೋಪಿಸುವಂತಾಗಿದೆ.ಇನ್ನು ಹಿರೇಕೆರೂರಿನಲ್ಲಿ ನೆರೆ ಹಣಾ-ಹಣಿ ಮಧ್ಯ ಪೈಪೋಟಿ ನಡೆಸಿ, ಹರಸಾಹಸ ಪಟ್ಟು ಕೊನೆಗೆ 555 ಮತಗಳ ಅಂತರದಿಂದ ಶಾಸಕರಾಗಿ ಆಯ್ಕೆಯಾದ ಬಿ.ಸಿ.ಪಾಟೀಲ ಅವರು ಅಖಂಡ ಧಾರವಾಡ ಜಿಲ್ಲೆಯ ಲಿಂಗಾಯತ ಸಮುದಾಯದ ಏಕೈಕ ಶಾಸಕರಾಗಿದ್ದರು.
ಆ ಕಾರಣದಲ್ಲಿ ಪ್ರಾದೇಶಿಕತೆ, ಜಾತಿ ಲೆಕ್ಕಾಚಾರದ ಮೇಲೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಸಚಿವರನ್ನಾಗಿ ಮಾಡುವಂತೆ ಪಟ್ಟು ಹಿಡಿದುಕೊಂಡಿದ್ದರು. ಆಗೀನ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಬಿ.ಸಿ.ಪಾಟೀಲರನ್ನು ಸಂಪುಟಕ್ಕೆ ತೆಗೆದುಕೊಳ್ಳದೇ ದೂರದ ಬೆಂಗಳೂರಿನ ಜಮೀರ್ ಅಹ್ಮದ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದರು. ಇದರಿಂದ ಕೆಂಡದಂತೆ ಕುದಿಯುತ್ತಿದ್ದ ಪಾಟೀಲ್ ಅವಕಾಶ ಸಿಕ್ಕಾಗ ಸಚಿವ ಸ್ಥಾನ ಸಿಗದ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದರು.
ಪಾಟೀಲರ ಅಸಮಾಧಾನವನ್ನು ಸರಳವಾಗಿ ಮುಂದೂಡಿಕೊಂಡು ಬರುತ್ತಿದ್ದ ಕಾಂಗ್ರೆಸ್ ಹೈ ಕಮಾಂಡ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಂಡ ಬಂದ ಬಳಿಕ ಮಂತ್ರಿ ಮಾಡುವ ಭರವಸೇ ನೀಡಿದರು. ಕಾಂಗ್ರೆಸ್‍ನ ನಿರ್ಧಾರಕ್ಕೆ ತೃಪ್ತರಾಗದ ಬಿ.ಸಿ.ಪಾಟೀಲ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಒಳಒಪ್ಪಂದ ಮಾಡಿಕೊಂಡರು ಎಂಬು ಆರೋಪಗಳು ಕಾಂಗ್ರೆಸ್ ಒಲಯದಲ್ಲಿ ಹರಿದಾಡುವಂತಾದವು. ಇದಾಗಿ ಕೆಲವು ದಿನಗಳಲ್ಲಿ ಬಿ.ಸಿ.ಪಾಟೀಲ ಅವರು ಆಫರೇಷನ್ ಕಮಲಕ್ಕೆ ಬಲಿಯಾಗಿ ಅವರು ಮುಂಬೈ ಸೇರಿ, ರಮೇಶಕುಮಾರಿಂದ ಅನರ್ಹಗೊಂಡರು.
ಶಾಸಕರಾದ ಆರ್.ಶಂಕರ್ ಹಾಗೂ ಬಿ.ಸಿ.ಪಾಟೀಲ ಅವರು ಸಭಾಧ್ಯಕ್ಷರ ಅನರ್ಹ ಮಾಡಿರುವದಕ್ಕೆ ಪ್ರಶ್ನಿಸಿ ಸುಪ್ರೀಂ ಕೋರ್ಟನಲ್ಲಿ ಪ್ರಶ್ನೆ ಮಾಡಿದ್ದಾರೆ. ಆದರೆ, ದೇಶದ ಸವೋಚ್ರ್ಛ ನ್ಯಾಯಾಲಯವು ಅನರ್ಹ ಶಾಸಕರ ವಿಚಾರಣೆಯನ್ನು ಒಂದಿಲ್ಲೊಂದು ಕಾರಣ ಮೇಲೆ ಮುಂದೂಡಿಕೊಂಡು ಬಂದಿದೆ. ಪುನಃ ಅನರ್ಹ ಶಾಸಕರ ವಿಚಾರಣೆ ಸೆ. 23 ರಂದು ಸೋಮವಾರ ನ್ಯಾಯಾಲಯಯದ ಮುಂದೆ ಬರಲಿದೆ. ಆದರೆ, ಅಂದು ವಿಚಾರಣೆಯಲ್ಲಿ ಅನರ್ಹ ಭವಿಷ್ಯ ನಿರ್ಧಾರವಾಗಲಿದೆ. ಈ ಮಧ್ಯ ಕೇಂದ್ರ ಚುನಾವಣೆ ಆಯೋಗ ರಾಣಿಬೇನ್ನೂರು ಹಾಗೂ ಹಿರೆಕೇರೂರು ಕ್ಷೇತ್ರಗಳು ಸೇರಿ 15 ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಅನರ್ಹ ಭವಿಷ್ಯ ನಿಗದಿಯಾಗದ ಹಿನ್ನೆಲೆಯಲ್ಲಿ ಎರಡು ಕ್ಷೇತ್ರಗಳಿಗೆ ಯಾರಾಗುತ್ತಾರೆ ಅಧಿಪತಿ ಎನ್ನುವುದು ಕ್ಷೇತ್ರದ ಜನರ ಕುತುಹಲವಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ