ಹಿರಿಯೂರು :
ಪ್ರಪಂಚವೇ ಇಂದು ಅಂತರ್ಜಾಲ ಹಾಗೂ ಮೊಬೈಲ್‍ನಲ್ಲಿ ಮುಳುಗಿದೆ, ಕುಳಿತಿರುವ ಕಡೆಯಲ್ಲೇ ಜಗತ್ತಿನ ಎಲ್ಲಾ ಆಗುಹೋಗುಗಳನ್ನು ನೋಡುತ್ತಿದ್ದೇವೆ, ವ್ಯವಹಾರದ ಹೆಜ್ಜೆ ಹೆಜ್ಜೆಗೂ ನಾವು ಅಂತರ್ಜಾಲ ಉಪಯೋಗಿಸುತ್ತಿದ್ದೇವೆ ಇಂತಹ ಸಂದರ್ಭದಲ್ಲಿ ತಾಲ್ಲೂಕು ಕೇಂದ್ರದಲ್ಲಿ ಇಂತಹ ಮೊಬೈಲ್ ಷೋರೂಂ ಉದ್ಘಾಟನೆಗೊಂಡಿರುವುದು ಸಂತೋಷಕರ ಎಂಬುದಾಗಿ ತಹಶೀಲ್ದಾರರಾದ ಜೆ.ಸಿ.ವೆಂಕಟೇಶಯ್ಯನವರು ಹೇಳಿದರು.
ನಗರದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ವಿಠ್ಠಲ್‍ಗ್ರೂಪ್ಸ್‍ನ ವತಿಯಿಂದ ಎಂ.ಐ ಸ್ಟೋರ್ ಮೊಬೈಲ್ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷರಾದ ಡಿ.ಯಶೋಧರರವರು ಮಾತನಾಡಿ, ಇಂದು ಮೊಬೈಲ್ ಇಲ್ಲದ ಕೆಲಸಗಳೇ ಇಲ್ಲ ಪ್ರತಿಯೊಬ್ಬರಿಗೂ ಮೊಬೈಲ್‍ನ ಅವಶ್ಯಕತೆ ಇದೆ ವಿಠ್ಠಲ್‍ಗ್ರೂಪ್ಸ್ ನವರು ಎಂ.ಐ.ಸ್ಟೋರ್ ಮೊಬೈಲ್ ಮಳಿಗೆ ಪ್ರಾರಂಭಿಸಿತ್ತಿದ್ದು ಎಲ್ಲರ ಪ್ರೀತಿಗೆ ಪಾತ್ರವಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕರಾದ ಎಸ್.ಲಿಂಗರಾಜ್, ವಿಠ್ಠಲ್‍ಗ್ರೂಪ್ಸ್‍ನ ಎ.ಪಾಂಡುರಂಗ , ಎ.ವಿಠ್ಠಲ್, ಅಯ್ಯಪ್ಪ, ಶ್ರೀನಿವಾಸ್, ತನ್ವೀರ್, ಸೈಯದ್ ಸಲಾವುದ್ದೀನ್, ಎಂ.ರವೀಂದ್ರನಾಥ್, ಜಿ.ಎಲ್.ಮೂರ್ತಿ, ಅಶ್ವಕ್‍ಅಹಮ್ಮದ್, ಅಜೀಂ ,ಯೋಗೇಶ್, ಸಾದಿಕ್, ಎಂ.ಡಿ.ರವಿ, ಹುಚ್ಚವ್ವನಹಳ್ಳಿ ಪ್ರಸನ್ನ, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








