ಪರಶುರಾಮಪುರ ಗಡಿಯಲ್ಲಿ ಕರಡಿ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

ಚಳ್ಳಕೆರೆ

    ಹಚ್ಚ ಹಸುರಿನ ಕಾಡಿನ ಪರಿಸರದಲ್ಲಿ ತಮ್ಮದೇ ಬದುಕನ್ನು ರೂಪಿಸಿಕೊಂಡಿರುವ ಕಾಡು ಪ್ರಾಣಿಗಳು ಕಾಡಿನಲ್ಲಿ ತಮಗೆ ಆಹಾರ ಕೊರತೆ ಉಂಟಾದಾಗ ನಾಡಿನ ಕಡೆ ಮುಖ ಮಾಡುತ್ತವೆ ಎಂಬುವುದು ಸುಳ್ಳಲ್ಲ. ತಾಲ್ಲೂಕಿನ ಗಡಿಯಲ್ಲಿರುವ ಪರಶುರಾಮಪುರ ಹೋಬಳಿಯ ಕೊರ್ಲಕುಂಟೆ ಗ್ರಾಮದ ಬಳಿ ಶನಿವಾರ ಸಂಜೆ ಗ್ರಾಮದ ಹೊರ ಭಾಗದಲ್ಲಿ ಕರಡಿಯೊಂದು ಸದ್ದಿಲ್ಲದೆ ಕುಳಿತಿದ್ದು, ಇದನ್ನು ಕಂಡ ಸಾರ್ವಜನಿಕರು ಗ್ರಾಮದ ಜನರಿಗೆ ವಿಷಯ ಮುಟ್ಟಿಸಿ ಜಾಗೃತಿ ಉಂಟು ಮಾಡಿದರಲ್ಲದೆ, ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

     ತಾಲ್ಲೂಕಿನ ಪರಶುರಾಮಪುರ ಗ್ರಾಮದಿಂದ ಕೊರ್ಲಕುಂಟೆಗೆ ಹೋಗುವ ಡಾಂಬರ್ ರಸ್ತೆಯ ಪಕ್ಕದಲ್ಲೇ ಶನಿವಾರ ಸಂಜೆ ಸುಮಾರು 5 ವರ್ಷದ ವಯಸ್ಸಿನ ಕರಡಿಯೊಂದು ರಸ್ತೆಯ ಪಕ್ಕದ ಜಾಲಿ ಗಿಡ ಪಕ್ಕದಲ್ಲಿ ಕಂಡಿದೆ. ಇದನ್ನು ನೋಡಿದ ಸಾರ್ವಜನಿಕರೊಬ್ಬರು ಕೂಡಲೇ ಗ್ರಾಮದ ಜನರಿಗೆ ವಿಷಯ ತಿಳಿಸಿದ್ಧಾರೆ. ಗ್ರಾಮಸ್ಥರು ಸ್ಥಳಕ್ಕೆ ಬಂದು ನೋಡಿದಾಗ ಕರಡಿ ಅಲ್ಲೇ ಇದ್ದು, ಕೂಡಲೇ ಅರಣ್ಯ ಇಲಾಖೆ, ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ನಲ್ಲೂರಹಳ್ಳಿ, ಪಗಡಲಬಂಡೆ, ಬೊಮ್ಮನಕುಂಟೆ ಗ್ರಾಮಗಳಲ್ಲಿ ಓಡಾಟ ನಡೆಸಿದ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡುತ್ತಾರೆ.

     ಈ ರಸ್ತೆಯಲ್ಲಿ ಸದಾಕಾಲ ಜನ ಸಂಚಾರವಿದ್ದು ವಾಹನಗಳ ಓಡಾಟವೂ ಸಹ ಹೆಚ್ಚಿರುತ್ತದೆ. ಅದೃಷ್ಠವಶಾತ್ ಸಂಜೆ ವೇಳೆಯಲ್ಲಿ ಕರಡಿ ಗೋಚರಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಕರಡಿ ಕಂಡಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ವಿನಾಕಾರಣ ಕರಡಿಯ ಮೇಲೆ ದಾಳಿ ಮಾಡುವುದು, ಅದಕ್ಕೆ ಗಾಬರಿ ಉಂಟು ಮಾಡಿದಲ್ಲಿ ನಮಗೆ ಹೆಚ್ಚು ತೊಂದರೆ ಆದ್ದರಿಂದ ಯಾರೂ ಸಹ ಕರಡಿ ಇರುವ ಜಾಗಕ್ಕೆ ಸುಳಿಯದಂತೆ ಎಚ್ಚರಿಕೆ ನೀಡಿದ್ಧಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link